ಹಟ್ಟಿ: ಯಲಗಟ್ಟಾ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಾಲೆಗೆ ನಿರಂತರ ಗೈರಾಗುತ್ತಿರುವ ಮುಖ್ಯಗುರು ನಾಗನಗೌಡ ರನ್ನು ಸೇವೆಯಿಂದ ಅಮಾಮಾತಿಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಲಿಂಗಸ್ಗೂರು ತಾಲೂಕು ಸಮಿತಿ ನೇತೃತ್ವದಲ್ಲಿ ಶಾಲೆಯ ಒಳಾಂಗಣದಲ್ಲಿ ಅನಿರ್ಧಿಷ್ಟಾವಧಿ ಧರಣಿ 3ನೇ ದಿನಕ್ಕೆ ತಲುಪಿದೆ.
ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಮಾತನಾಡಿ ನಾಗನಗೌಡ ಉದ್ಯಮಿಯಾಗಿದ್ದು, ಅವರು ಶೈಕ್ಷಣಿಕ ವಾತಾವರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಪ್ರತಿನಿತ್ಯ ಅವರು ಶಾಲೆಗೆ 9:30 ಕ್ಕೆ ಬರುತ್ತಿಲ್ಲ ಮತ್ತು ಶಾಲೆಯ ಪ್ರಾರ್ಥನೆಗೆ ಹಾಜರಿಲ್ಲ. ಈ ಮೂಲಕ ಕರ್ನಾಟಕ ಶಿಕ್ಷಣ ಖಾಯ್ದೆ 1983 ಕಾಯ್ದೆ, ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958, ಕರ್ನಾಟಕ ಸರ್ಕಾರ ನೌಕರರ (ವರ್ತನೆ) ನಿಯಮಗಳ 1966 ಹಾಗೂ ಕರ್ನಾಟಕ ಸರಕಾರಿ ಸೇವಾ(ಸಿಸಿಎ) ನಿಯಮಗಳು 1957 ರ ಉಲ್ಲಂಘನೆ ಮಾಡಿದ್ದು, ಇವುಗಳ ಆಧಾರದ ಮೇಲೆ ಅಧಿಕಾರಿ ಗಳು ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಸೋಮವಾರ ಒಳಗೆ ಅಮಾನತು ಮಾಡಿಲ್ಲ ಅಂದ್ರೆ ಹೋರಾಟದ ಸ್ವರೂಪ ತೀವ್ರಗೊಳಿಸಲು ತೀರ್ಮಾನಿಸಲಾಗಿದೆ ಎಂದರು.
ಸಂಘಟನೆ ಜಿಲ್ಲಾಧ್ಯಕ್ಷ ರಮೇಶ ವೀರಾಪೂರ ಮಾತನಾಡಿ, ನಾಗನಗೌಡ ಉದ್ಯಮಿಯಾಗಿದ್ದು, ಅವರಿಗೆ ಶೈಕ್ಷಣಿಕ ಕಾಳಜಿ ಇಲ್ಲ. ಕಳೆದ ಎರಡು ವರ್ಷಗಳಿಂದ ಶಾಲೆಗೆ ನಿರಂತರವಾಗಿ ಅನಧಿಕೃತವಾಗಿ ಗೈರಾಗುತ್ತಿದ್ದು, ಶೈಕ್ಷಣಿಕ ವಾತಾವರಣ ಹಾಗೂ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ಬಗ್ಗೆ ಅನೇಕ ಬಾರಿ ಇಲಾಖೆ ಗಮನಕ್ಕೆ ತಂದರೂ ಕ್ರಮ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶಾಲೆಯ 68 ವಿದ್ಯಾರ್ಥಿಗಳ ಪೈಕಿ 33 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಬಿಇಒ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ರಮೇಶ ವೀರಾಪೂರ ಆಗ್ರಹಿಸಿದರು.
ಧರಣಿಗೆ ಕರ್ಣಾಟಕ ಪ್ರಾಂತ ರೈತ ಸಂಘ ( ಕೆಪಿಆರ್ ಎಸ್) , ಸಿಐಟಿಯು, ಡಿವೈಎಫ್ಐ, ದಲಿತ ಸಂಘರ್ಷ ಸಮಿತಿ, ಜಯಕರ್ನಾಟಕ, ಕರುನಾಡ ವಿಜಯ ಸೇನೆ ಸಂಘಟನೆಗಳು ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಅನೇಕರ ಸಂಘಟನೆಗಳು ಧರಣಿ ಬೆಂಬಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ತಾಲ್ಲೂಕು ಕಾರ್ಯದರ್ಶಿ ಪವನ್ ಕಮದಾಳ, ತಾಲೂಕು ಮುಖಂಡರಾದ ವಿನಯ್ ಬಸವರಾಜ, ಕೆಪಿಆರ್ ಎಸ್ ತಾಲ್ಲೂಕು ಮುಖಂಡ ನಿಂಗಪ್ಪ ಎಂ., ಎಸ್ ಡಿ ಎಂ ಸಿ ಅಧ್ಯಕ್ಷ ನಿಂಗಪ್ಪ ಸಾಹುಕಾರ್, ಸಹಿಪ್ರಾ ಶಾಲೆ ಎಸ್ಡಿಎಂಸಿ ಅಧ್ಯಕ್ಷ ಸಾಬಣ್ಣ, ವಿವಿಧ ಸಂಘಟನೆಗಳ ಮುಖಂಡರಾದ ಅಣ್ಣಯ್ಯ, ಶಿವಶಂಕರ, ವಾಡಿಕೆಪ್ಪ, ಸಿದ್ರಾಮ ಚಲುವಾದಿ, ರಾಜು ನಾಯಕ, ಸಿದ್ದು ಮಾಲಿ, ಅನಿಲ್ ಕಂಬಳಿ, ಅಮರೇಶ ಸೋಮನಮರಡಿ, ಹಂಪಯ್ಯ, ಮೌಲಾಸಬ್, ಗ್ರಾಪಂ ಸದಸ್ಯರಾದ ಸಿದ್ದಪ್ಪ ಗಾಣದಾಳ, ಚಾಂದ್ ಪಾಷಾ, ರಘುವೆಂದ್ರ, ಗ್ರಾಮಸ್ಥರಾದ ವೆಂಕಣ್ಣ ಕೋಲ್ಕರ್, ಲಕ್ಷ್ಮಣ ಮೂಡಲಗುಂಡ, ಶಿವಪ್ಪ ಹಾವಿನ್, ಕೃಷ್ಣ ನಾಯಕ್, ದುರುಗಪ್ಪ ಬೊಮ್ಮನಾಳ, ಹನುಮಂತ ಶೆಗುಂಟಿ, ಶಿವು ಪಿ ಜಿ. ಯಮನೂರಪ್ಪ ಮಾಸ್ಟರ್ ಸಹದೇವ, ರಫಿ ಗುರುಗುಂಟಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.