L& T ಕಂಪನಿ ವಿರುದ್ದ ಕ್ರಮಕ್ಕೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

0
118

ಕಲಬುರಗಿ: ಎಲ್ ಅಂಡ್ ಟಿ ಸಂಸ್ಥೆ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎನ್ನುವ ದೂರುಗಳ ಹಿನ್ನೆಲೆ‌ ನಿನ್ನೆ ಬೆಂಗಳೂರಿನಲ್ಲಿ ಸಿಎಸ್ ಮಟ್ಟದಲ್ಲಿ ಸಿಎಂ ಸಭೆ ನಡೆಸಿ ಕಂಪನಿಯ ಎಂಡಿ ಯೊಂದಿಗೆ ಚರ್ಚಿಸಿದ್ದು ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿ ಯ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಲಬುರಗಿ ನಗರದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿ ಗುತ್ತಿಗೆ ತೆಗೆದುಕೊಂಡಿರುವ ಎಲ್ ಅಂಡ್ ಟಿ ಕಂಪನಿ ಹಲವಾರು ಕಡೆ‌ ಭೂಮಿ ಅಗೆದು ವೈಜ್ಞಾನಿಕ ವಾಗಿ ಮುಚ್ಚದೆ ಬಿಟ್ಟಿರುವ ಬಗ್ಗೆ ಪತ್ರಕರ್ತರು ಸಚಿವರ ಗಮನಕ್ಕೆ ತಂದಾಗ ಉತ್ತರಿಸಿದ ಸಚಿವರು ಈಗಾಗಲೇ ಜಿಲ್ಲಾ ಮಟ್ಟದ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಆದರೂ‌ ಕೆಲವು ಕಡೆ ಲೋಪದೋಷಗಳು ಕಂಡು ಬಂದಿರುವುದರಿಂದ ಕಂಪನಿಯ ಎಂಡಿಯನ್ನು ದೆಹಲಿಯಿಂದ‌‌ ಕರೆಸಿ‌ ಚರ್ಚೆ ನಡೆಸಲಾಗಿದೆ ಎಂದರು.

Contact Your\'s Advertisement; 9902492681

ಕಲಬುರಗಿ ನಗರದ‌ ಕೆಲವು ಕಡೆ ರಾಡಿ‌ ಮಿಶ್ರಿತ ನೀರು ಸರಬರಾಜು ಆಗಿರುವ ಹಿನ್ನೆಲೆಯಲ್ಲಿ ಉತ್ತರಿಸಿದ ಸಚಿವರು, ಮುಂಗಾರು ಮಳೆ ಜೋರಾಗಿ ಬಂದಿದ್ದರಿಂದ ಈ‌ ತರಹದ ನೀರು ಬಂದಿದೆ. ಹಾಗಾಗಿ, ಆ ನೀರು ಮನೆಗಳಿಗೆ ಸರಬರಾಜಾಗಿ ಕಲಷಿತಗೊಂಡು ಮತ್ತಷ್ಟು ಹಾನಿಯಾಗಬಾರದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಮಹಾನಗರ ಪಾಲಿಕೆ ನೀರು ಬಳಸದಂತೆ ನಾಗರಿಕರಿಗೆ ಮನವಿ ಮಾಡಿತ್ತು ಎಂದು ಸಚಿವರು ಸ್ಪಷ್ಟಪಡಿಸಿದರು.

ಸಿಎಸ್ ಆರ್ ಅಡಿಯಲ್ಲಿ ರೂ 2,000 ಕೋಟಿ ಯಲ್ಲಿ ಅನುದಾನ ಸಂಗ್ರಹಿಸಿ ಬೆಂಗಳೂರು ಹೊರತುಪಡಿಸಿ ಗ್ರಾಮೀಣ ಮಟ್ಟದ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸುವ ಯೋಚನೆ‌ ಇದ್ದು ಎನ್ ಆರ್ ಐ ಗಳು ಸೇರಿದಂತೆ ಇತರೆ ದಾನಿಗಳಿಂದ ಅನುದಾನ ಸಂಗ್ರಹಿಸಲಾಗುವುದು ಎಂದು ಸಚಿವರು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here