ಸ್ವಂತ ಖರ್ಚಿಲ್ಲಿ ಮುರುಮ್ ಹಾಕಿ ರಸ್ತೆ ನಿರ್ಮಿಸಿಕೊಂಡ ಕಲಬುರಗಿ ವಾರ್ಡ್ 7ರ ನಿವಾಸಿಗಳು: ಪಾಲಿಕೆ ನಿರ್ಲಕ್ಷ್ಯೆವಿರುದ್ಧ ಆಕ್ರೋಶ

0
82

ಕಲಬುರಗಿ: ನಗರದ ವಾರ್ಡ್ ನಂ 7ರ ಶಿವಶಕ್ತಿ ನಗರ ಬಡಾವಣೆಯ ನಿವಾಸಿಗಳು ಸ್ವಂತ ಖರ್ಚಿನಲ್ಲಿ ಮುರುಮ್ ಹಾಕಿ ರಸ್ತೆ ನಿರ್ಮಾಣ ಮಾಡುವ ಕಾಮಗಾರಿಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಪಾಲಿಕೆಯ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಶಿವಶಕ್ತಿ ನಗರದಲ್ಲಿ ಬಹಳಷ್ಟು ಜನ ಪ.ಜಾತಿ, ಪ.ಪಂಗಡ, ಕ್ರೀಶ್ಚಯನ್, ಹಿಂದುಳಿದ ಜನಾಂಗ ಹಾಗೂ ಇತರೆ ಸಮುದಾಯ ಬಾಂಧವರು ವಾಸಿಸುತ್ತಿದ್ದು ಈ ನಮ್ಮ ಬಡಾವಣೆಯಲ್ಲಿ ಸುಮಾರು 20 ರಿಂದ 25 ವರ್ಷಗಳಿಂದ ನಗರದಲ್ಲಿ ಸೂಕ್ತ ರಸ್ತೆ ಇಲ್ಲದೆ ಸಾರ್ವಜನಿಕರು ಸಂಚಾರಕ್ಕಾಗಿ ಬಹಳಷ್ಟು ತೊಂದರೆ ಅನುಭವಿಸಿರುತ್ತಾರೆ. ಸದ್ಯ ಮಳೆಗಾಳ ಸಂದರ್ಭ ಇರುವುದರಿಂದ ಮಳೆ ನೀರು ರಸ್ತೆಯ ಮೇಲೆ ನಿಂತು ದೊಡ್ಡ ತಗ್ಗು ದಿನ್ನೆಗಳು ಬಿದ್ದು, ಬಹಳಷ್ಟು ಜನರು ಅಪಘಾತಕ್ಕಿಡಾಗುತ್ತಿದ್ದು, ಶಾಲಾ ಮಕ್ಕಳ ಆಟೋರೀಕ್ಷಾ ಪಲ್ಟಿಯಾಗಿ ಅಪಘಾತ ಅನುಭವಿಸಿರುತ್ತಾರೆ.

Contact Your\'s Advertisement; 9902492681

ಹೀಗಾಗಿ ಬಡಾವಣೆಯ ಎಲ್ಲಾ ನಾಗರೀಕರು ಸೇರಿ ಚಂದಾ ಪಟ್ಟಿ ಹಾಕಿ ಸುಮಾರು 800 ಮೀಟರ ವರೆಗೆ ಮುರುಮ ಹಾಕಿಸಿ ಕಚ್ಚಾ ರಸ್ತೆಯನ್ನಾಗಿ ನಿರ್ಮಿಸಿದ್ದು, ಈ ರೀತಿ ಮಾಡುತ್ತಿರುವುದು 10 ವರ್ಷದಲ್ಲಿ ಇದು ಮೂರನೇ ಭಾರಿಯಾಗಿರುತ್ತದೆ. ಸದರಿ ರಸ್ತೆಯ ನಿರ್ಮಾಣಕ್ಕಾಗಿ ಮಹಾನಗರ ಪಾಲಿಕೆ, ಕಲಬುರಗಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಶಾಸಕರು ಗಮನಕ್ಕೂ 2-3 ಭಾರಿ ತಂದರೂ ಯಾವುದೇ ಕ್ರಮ ಕೈಕೊಂಡಿರುವುದಿಲ್ಲ, ಬೇಸತ್ತು ನಾವು ಈ ರೀತಿ ಚಂದಾ ಪಟ್ಟಿಯಲ್ಲಿ ರಸ್ತೆ ನಿರ್ಮಿಸಿದರು ನಂತರ ಕಾಂಗ್ರೆಸ್ ಸರಕಾರ ಹಾಗೂ  ಪಾಲಿಕೆಯ ವಿರುದ್ಧ ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಬಡಾವಣೆಯ ಮುಖಂಡರಾದ ಅಂಬಾದಾಸ್ ಧಡಕ್ಕೆ, ಸಿದ್ದಲಿಂಗ ಕೊಟ್ಟರಗಿ, ಸಿದ್ದಲಿಂಗ ಕೊಟ್ಟರಗಿ, ರಾಜು ಕುಂಬಾರ,  ನಾಗಣ್ಣಾ ಗಣಜಲಖೇಡ, ದರ್ಶನ ಪಾಟೀಲ್, ನಾಗಮ್ಮ ಕುಂಬಾರ, ತುಕ್ಕಾಬಾಯಿ ಧಡಕೆ, ಸಂತೋಷ ಇಂಗೋಳೆ, ಕಾಶಿನಾಥ ಬಿರಾದಾರ, ಶಶಿಕಾಂತ ನಾಗೂರ, ಶಾಂತಾಬಾಯಿ, ಶಿವಕುಮಾರ ಶಿರವಾಳ, ರಘು ಸುಲ್ತಾನಪೂರ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here