ಕಲಬುರಗಿ: ನಗರದ ಶ್ರೀ ಮತಿ ಕಸ್ತೂರಿಬಾಯಿ ಪಿ ಬುಳ್ಳಾ ಸ್ಮಾರಕ ಭವನದಲ್ಲಿ ಏರ್ಪಡಿಸಿದ್ದ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ಕಲಬುರಗಿ ಸಂಸ್ಥಾಪನಾ ದಿನ,ಸೇಹ್ನ ಶ್ರೀ ಪ್ರಶಸ್ತಿ, ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಸಾಮಾನ್ಯ ಸಭೆ ಕಾರ್ಯಕ್ರಮವನ್ನು ಕರ್ನಾಟಕ ಲೋಕಸೇವಾ ಆಯೋಗದ ಗೌರವಾನ್ವಿತ ಸದಸ್ಯರಾದ ಡಾ.ಎಂ ಬಿ ಹೆಗ್ಗಣ್ಣನವರ ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯ ತಾವೇ ರೂಪಿಸಿಕೊಳ್ಳುವ ಅನಿವಾರ್ಯತೆ ಇದೆ.ನಮ್ಮದ್ದು ಬಡತನ ನಾವು ಆರ್ಥಿಕವಾಗಿ ಹಿಂದುಳಿದ ಜನ ಎಂಬ ಭಾವನೆ ಬೆಳಸಿಕೊಳ್ಳದೆ.ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ ಪ್ರತಿಭಾವಂತರಾಗಿ ಬೆಳೆದು ಬಡತನ ನಿವಾರಣೆ ಪ್ರಯತ್ನಿಸಿ ಎಂದು ಹೇಳಿದರು.
ನಾನು ಸಹ ಬಡತನವನ್ನು ಎದುರಿಸಿ ಪುಸ್ತಕ ಪ್ರೇಮಿಯಾದ ನಾನು ಉಪನ್ಯಾಸಕನಾಗಿ, ಪ್ರಾಧ್ಯಾಪಕರಾಗಿ, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯನಾಗಿ ನಿಮ್ಮ ಮುಂದೆ ನಿಂತಿದ್ದೇನೆ.ನನಗೆ ಆದರ್ಶ ಮಾರ್ಗದರ್ಶಕರು ಯಾರೆಂದರೆ ಹಿರಿಯ ಅಕ್ಕನಂತೆ ಇರುವ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯರಾದ ಡಾ.ನಾಗಾಬಾಯಿ ಬಿ ಬುಳ್ಳಾ ಮೇಡಂ ಎಂದು ಹೇಳಿದರು.
ಸೇಹ್ನ ಶ್ರೀ ಪುರಸ್ಕಾರಕ್ಕೆ ಭಾಜನರಾದ ಶ್ರೀಮತಿ ಬಸಂತಬಾಯಿ ಡಿ ಅಕ್ಕಿ ಅವರು ಮಾತನಾಡುತ್ತಾ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ತ್ರಿಮೂರ್ತಿಗಳಾದ ಪೆÇ್ರ.ಎಸ್ ಎಸ್ ಅಲಗೂರ,ಪೆÇ್ರ.ಬಿ ಜಿ ನಾಟೀಕಾರ ಹಾಗೂ ಪೆÇ್ರ.ಎಲ್ ಬಿ ಹಿಟ್ಟಿನ ರವರ ಕನಸಿನ ಕೂಸು. ಈ ಮೂರು ಜನ ಹಿರಿಯರಿಗೆ ಸೇಹ್ನ ಗಂಗಾ ವಾಹಿನಿ ಸಂಸ್ಥೆಯ ಬ್ರಹ್ಮ ವಿಷ್ಣು ಮಹೇಶ್ವರ ಎಂದರೆ ತಪ್ಪಾಗಲಾರದು. ಈ ಸಂಸ್ಥೆಯನ್ನು ಇನ್ನು ಎತ್ತರಕ್ಕೆ ಬೆಳೆಸಿದ ಕೀರ್ತಿ ಡಾ ಬಿ ಪಿ ಬುಳ್ಳಾ ಹಾಗೂ ಡಾ.ನಾಗಾಬಾಯಿ ಬಿ ಬುಳ್ಳಾ ದಂಪತಿಗಳಿಗೆ ಸಲ್ಲುತ್ತದೆ. ಈ ಸಂಸ್ಥೆಯಿಂದ ಕೊಡುವ ರಾಜ್ಯ ಮಟ್ಟದ ಸ್ನೇಹ ಶ್ರೀ ಪ್ರಶಸ್ತಿ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಗಂಗುಬಾಯಿ ಹಾನಗಲ್ಲ ಮೇಡಂ ಅವರಿಗೆ ದೊರೆತಿರುವ ಪ್ರಶಸ್ತಿ ನನಗೆ ಲಭಿಸಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಹೇಳಿದರು.
ಸಮಾರಂಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾಧ್ಯಕ್ಷರಾದ ಡಾ.ಬಿ.ಪಿ.ಬುಳ್ಳಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಡಾ.ಮೇಧಾವಿನಿ ಎಸ್ ಕಟ್ಟಿ, ಪೆÇ್ರ.ಬಿ ಜಿ ನಾಟೀಕಾರ, ಡಾ.ನಾಗಾಬಾಯಿ ಬಿ ಬುಳ್ಳಾ, ಡಾ.ರಾಮಚಂದ್ರ ಗಣಾಪೂರ, ಡಾ.ಭೀಮರಾಯ ಅರಕೇರಿ, ಮಲ್ಲಿಕಾರ್ಜುನ ನಾಯಕೊಡಿ, ಬಿ ಇ ಒ ಸೋಮಶೇಖರ ಹಂಚಿನಾಳ, ಶಿಕ್ಷಣ ಸಂಯೋಜಕರಾದ ಸೈಬಣ್ಣಾ ಮಹಾಂತಗೋಳ ಸೈಬಣ್ಣಾ ಕೆ ವಡಗೇರಿ, ರಾಮಲಿಂಗ ನಾಟೀಕಾರ, ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಧರ್ಮರಾಜ ಜವಳಿ, ಯಲ್ಲಾಲಿಂಗ ಕೊಬಾಳ,ಡಾ.ರಾಘವೇಂದ್ರ ಗುಡಗುಂಟಿ, ಚಂದ್ರಕಾಂತ ಪಿ ತಳವಾರ ಅಶೋಕ ಸೊನ್ನ, ಸಂಗೀತಾ ಬುಳ್ಳಾ, ಅರವಿಂದ ಹುಣಚಿಕೇರಿ, ರಾಜು ಸೋನ್ನ, ಕರ್ಣಪ್ಪ ಬಿರಾದಾರ, ಮಾಣಿಕಮ್ಮಾ ವಾಡಿ, ಬಸವರಾಜ ಮಳ್ಳಿ, ಪ್ರಕಾಶ ನಾಯಿಕೊಡಿ, ವಿಜಯಲಕ್ಷ್ಮಿ ಪಾಟೀಲ, ಗೀತಾ ನಾಟೀಕಾರ, ಶ್ರೀನಿವಾಸ ಅಕ್ಕಿ, ರಾಜೇಂದ್ರ ತೆಲ್ಲೂರ, ಈಶ್ವರ ಜಮಾದಾರ ಸೇರಿದಂತೆ ಸಮಾಜದ ಹಿರಿಯ ಮುಖಂಡರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಇದ್ದರು.