ಗ್ಯಾಸ ಸಿಲಿಂಡರ ಸ್ಫೋಟದಲ್ಲಿ ಗಾಯಗೊಂಡ ಕಾರ್ಮಿಕರಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯ

0
54

ಕಲಬುರಗಿ:  ನಗರದ ಸಪ್ತಗಿರಿ ಹೊಟೆಲ್‍ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ಒಬ್ಬ ಕಾರ್ಮಿಕ ಮೃತಪಟ್ಟಿದ್ದು, ಗಾಯಗೊಂಡಿರುವ ಕಾರ್ಮಿಕರಿಗೆ ಜಿಲ್ಲಾಡಳಿತ, ರಾಜ್ಯ ಸರ್ಕಾರ ಹಾಗೂ ಹೋಟೆಲ್ ಮಾಲೀಕರು ಸೂಕ್ತ ಪರಿಹಾರ ನೀಡಬೇಕು ಮತ್ತು ಕಲಬುರಗಿ ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಇನ್ನೂ 2 ಅಗ್ನಿಶಾಮಕ ಠಾಣೆಗಳನ್ನು ಪ್ರಾರಂಭಿಸಬೇಕೆಂದು ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ರವಿ ಎನ್. ದೇಗಾಂವ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ನಗರದ ಸಪ್ತಗಿರಿ ಹೊಟೆಲ್‍ನಲ್ಲಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಪೋಟದಲ್ಲಿ ಒಬ್ಬ ಕಾರ್ಮಿಕ ಮೃತಪಟ್ಟಿದ್ದು, 10-12 ಜನ ಕಾರ್ಮಿಕರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇವರ ಕುಟುಂಬಗಳಿಗೆ ಜಿಲ್ಲಾಡಳಿತ, ರಾಜ್ಯ ಸರ್ಕಾರ ಹಾಗೂ ಹೋಟೆಲ್ ಮಾಲೀಕರ ವತಿಯಿಂದ ಸೂಕ್ತ ಪರಿಹಾರ ನೀಡಬೇಕು. ಇನ್ನು ಮುಂದೆ ಈ ರೀತಿಯ ದುರ್ಘಟನೆಗಳು ಸಂಭವಿಸದಂತೆ ನಗರದ ಎಲ್ಲಾ ಹೋಟೆಲ್‍ಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ಹೊಟೆಲ್‍ಗಳಲ್ಲಿ ಬೆಂಕಿ ನಂದಿಸುವ ಸಾಮಗ್ರಿಗಳನ್ನು ಇಡುವಂತೆ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

Contact Your\'s Advertisement; 9902492681

ಅದೇ ರೀತಿ ಕಲಬುರಗಿ ನಗರದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಕೇವಲ ಒಂದೇ ಅಗ್ನಿಶಾಮಕ ಠಾಣೆ ಇರುತ್ತದೆ. ಇದರಿಂದಾಗಿ ಇಡೀ ಕಲಬುರಗಿ ನಗರದಲ್ಲಿ ಎಲ್ಲಾದರೂ ಅಗ್ನಿ ದುರಂತಗಳು ಸಂಭವಿಸಿದರೆ ಅಲ್ಲಿಗೆ ಹೋಗಿ ನಂದಿಸುವಲ್ಲಿ ಟ್ರಾಫಿಕ್ ಸಮಸ್ಯೆಯಿಂದಾಗಿ ಸಮಯ ವ್ಯರ್ಥವಾಗುತ್ತಿದೆ. ಆದ್ದರಿಂದ ಸೇಡಂ ರಸ್ತೆಯ ಕಡೆ ಒಂದು ಮತ್ತು ರಾಮ ಮಂದಿರ ರಸ್ತೆಯ ಕಡೆ ಒಂದು ಒಟ್ಟು 2 ಅಗ್ನಿಶಾಮಕ ಠಾಣೆಗಳನ್ನು ಪ್ರಾರಂಭಿಸಿದರೆ ಆಯಾ ಸ್ಥಳಗಳಲ್ಲಿ ಅಗ್ನಿ ದುರಂತಗಳು ಸಂಭವಿಸಿದರೆ ಸ್ಥಳಕ್ಕೆ ಕೂಡಲೇ ಹೋಗಲು ಅನುಕೂಲವಾಗುತ್ತದೆ. ಇದರಿಂದಾಗಿ ಅಗ್ನಿ ದುರಂತದಿಂದ ಆಗುವ ನಷ್ಟವನ್ನು ಕಡಿಮೆ ಮಾಡಬಹುದಾಗಿದೆ.

ಆದ್ದರಿಂದ ತಾವೂಗಳು ಈ ಕುರಿತು ಕೂಡಲೇ ಸೂಕ್ತ ಕ್ರಮಕೈಗೊಂಡು ಹೋಟೆಲ್ ಕಾರ್ಮಿಕರಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಮತ್ತು ಜಿಲ್ಲೆಯಲ್ಲಿ ಇನ್ನೂ 2 ಹೆಚ್ಚಿನ ಅಗ್ನಿಶಾಮಕ ಠಾಣೆಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಧ್ಯಕ್ಷರಾದ ಸಂತೋಷ ಪಾಟೀಲ್, ಸಂಘಟನಾ ಕಾರ್ಯದರ್ಶಿ ಚಂದ್ರು ಸಲಗರ, ಅಶ್ವಥ ತಾರಫೈಲ್,ರಾಘವೇಂದ್ರ ಬಿರಾದಾರ,ಶ್ರೀಶೈಲ ಕನ್ನಡಗಿ,ಭೀಮಾಶಂಕರ ಕೊರವಿ, ಬಾಲಾಜಿ ಗೋಡಕೆ, ಈಶ್ವರ ಕುಡನೂರ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here