ಕೆಬಿಎನ್ ಆಸ್ಪತ್ರೆ: ವಿಶ್ವ ವಿಟಲಿಗೋ ದಿನ ಆಚರಣೆ

0
79

ಕಲಬುರಗಿ: ಕೆಬಿಎನ್ ವಿಶ್ವವಿದ್ಯಾನಿಲಯದ ಚರ್ಮರೋಗ ವಿಭಾಗದಲ್ಲಿಂದು “ವಿಶ್ವ ವಿಟಲಿಗೋ ದಿನ” ಆಚರಿಸಲಾಯಿತು.

ವಿಟಲಿಗೋ ದಿನದ ಅಂಗವಾಗಿ ವೈಜ್ಞಾನಿಕ ಮಾಹಿತಿ ಮತ್ತು ಜ್ಞಾನ ಪಸರಿಸಲು ವಿದ್ಯಾರ್ಥಿಗಳಿಗೆ ವಿಟಲಿಗೋ ವಿಷಯದ ಬಗ್ಗೆ ರಸಪ್ರಶ್ನೆ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ನಾಗಿಣಿ ಮತ್ತು ಬಬಲಿ ಇವರಿಗೆ ಬಹುಮಾನ ವಿತರಿಸಲಾಯಿತು.

Contact Your\'s Advertisement; 9902492681

ವಿಟಲಿಗೋ ಅರ್ಥ, ಅದರ ಪರಿಣಾಮ ಮತ್ತು ಅದರ ನಿರ್ವಹಣೆಯಲ್ಲಿನ ವಾಸ್ತವ ಪ್ರಗತಿಗಳ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕೆಬಿಎನ್ ಮೆಡಿಕಲ್ಲಿನ ಡೀನ, ಡಾ ಸಿದ್ದೇಶ ಸಿರವಾರ ಇವರು ಮಾತನಾಡಿ ಚರ್ಮರೋಗ ವಿಭಾಗದ ಕಾರ್ಯವನ್ನು ಶ್ಲಾಘಸಿದರು. ಬಿಳಿ ತೊನ್ನು ರೋಗ ಸಾಂಕ್ರಾಮಿಕ ಅಲ್ಲ. ಜನರಲ್ಲಿ ಅದರ ಬಗೆ ಅನೇಕ ತಪ್ಪು ಕಲ್ಪನೆಗಳಿವೆ. ಪ್ರಸ್ತುತ ತೊನ್ನು ರೋಗದ ಕುರಿತು ಲಭ್ಯವಿರುವ ಚಿಕಿತ್ಸೆಗಳ ಬಗ್ಗೆ ಮಾಹಿತಿ ಅವಶ್ಯಕ. ಅಲ್ಲದೇ ರೋಗಿಗಳಿಗೆ ಮಾನಸಿಕ ಸ್ಥೈರ್ಯ ತುಂಬುವುದು ಸಮುದಾಯದ ಆದ್ಯ ಕರ್ತ್ಯವ್ಯ. ಇಂತಹ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿ ಮೂಡಿಸುತ್ತವೆ ಎಂದರು.

ಮೆಡಿಕಲ ಅಧೀಕ್ಷಕ ಡಾ. ಸಿದ್ದಲಿಂಗ ಚೆಂಗಟಿ ಮಾತನಾಡಿ ಈ ಸಂದರ್ಭದಲ್ಲಿ ಹಮ್ಮಿಕೊಂಡ ಕ್ವಿಜ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಅಭ್ಯರ್ಥಿಗಳಿಗೆ ಅಭಿನಂದಿಸಿ ವಿದ್ಯಾರ್ಥಿಗಳ ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ ಎಂದರು.

ಕಾರ್ಯಕ್ರಮದಲ್ಲಿ ಡರ್ಮಟಾಲಜಿ ವಿಭಾಗದ ಮುಖ್ಯಸ್ಥ ಡಾ. ಗುರುಪ್ರಸಾದ ಅವರು ರೋಗದ ವಿವಿಧ ಅಂಶಗಳು, ಅದರ ಚಟುವಟಿಕೆ ಮತ್ತು ಕೆಬಿಎನ್ ಆಸ್ಪತ್ರೆಯಲ್ಲಿ ಲಭ್ಯವಿರುವ ಇತ್ತೀಚಿನ ಚಿಕಿತ್ಸೆ ಆಯ್ಕೆಗಳನ್ನು ಕುರಿತು ಚರ್ಚಿಸಿದರು. ಕೆಬಿಎನ್ ನಲ್ಲಿ ಇದರ ಚಿಕಿತ್ಸೆಗೆ ದರ ತುಂಬಾ ಕಡಿಮೆಯಿರುವುದರಿಂದ ಬಡವರಿಗೆ ವರದಾನವೇ ಸರಿ ಎಂದು ಅಭಿಪ್ರಾಯ ಪಟ್ಟರು. ಡಾ.ಕಿರಣ ಶ್ರೇಯ ಅತಿಥಿ ಸ್ವಾಗತಿಸಿದರು. ಡಾ.ಗುರುಪ್ರಸಾದ್‌ ವಂದಿಸಿದರು. ಡಾ.ಸಮದ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರು ನಾಡೋಜ ಡಾ ಪಿ . ಎಸ್. ಶಂಕರ್, ಡಾ. ಚಂದ್ರಕಲಾ, ಡಾ. ವಾಜಿಮ್, ಡಾ. ಹುಮೆರಾ, ಕೆಬಿಎನ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿಟಿಲ್ಲಿಗೋ ಕುರಿತ ಕಿರು ನಾಟಕವನ್ನು ಪ್ರದರ್ಶಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here