ಸಿಮೆಂಟ್ ಕಾರ್ಖಾನೆಗಳಲ್ಲಿ 50% ಸ್ಥಳಿಯರಿಗೆ ಉದ್ಯೋಗ ನೀಡಲು ಕೇಂದ್ರ ಸಚಿವರಿಗೆ ಮನವಿ

0
17

ಶಹಾಬಾದ, ಕಡೇಚೂರು-ಬಾಡಿಯಾಳ ಕಾರ್ಖಾನೆ ಪುನರ ಪ್ರಾರಂಭಿಸಲು ಮನವಿ

ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ಅನೇಕ ಸಿಮೆಂಟ್ ಕಾರ್ಖಾನೆ ಹಾಗೂ ಸಕ್ಕರೆ ಕಾರ್ಖಾನೆ ಗಳದ್ದು ಅದರಲ್ಲಿ ಶೇ 50% ಹುದ್ದೆಗಳನ್ನು ಸ್ಥಳಿಯರಿಗೆ ನೀಡುವುದರ ಮೂಲಕ ನಮ್ಮ ಕಲಬುರಗಿ ಜಿಲ್ಲೆಯ ಜನರಿಗೆ ಗುಳೆ ಹೊಗುವುದನ್ನು ತಪ್ಪಿಸಲು ಕಾರ್ಖಾನೆಗಳಿಗೆ ನಿರ್ದೆಶನ ನೀಡಬೇಕೆಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಪಕ್ಷದ ಕಲಬುರಗಿ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಮನವಿ ಮಾಡಿದ್ದಾರೆ.

ಬೆಂಗಳೂರಿನ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ನಿವಾಸದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿ ಯಾದಗೀರಿ ಜಿಲ್ಲೆಯ ಹಿಂದುಳಿದ ಈ ಭಾಗದಲ್ಲಿ ಬೃಹತ್ ಕೈಗಾರಿಕೆಗಳು ಬರಲಿ ಎಂಬ ಉದ್ದೇಶದಿಂದ ಸರ್ಕಾರ ಕಡೇಚೂರು,ಬಾಡಿಯಾಳ ಮತ್ತು ಶೆಟ್ಟಿಹಳ್ಳಿ ಗ್ರಾಮಗಳಿಗೆ ಸೇರಿದ್ದ 3,232 ಎಕರೆ ಭೂಮಿಯನ್ನು ಕೆಐಎಡಿಬಿ 2012-13ರಲ್ಲಿ ಸ್ವಾಧೀನ ಪಡಿಸಿಕೊಂಡಿತು.

Contact Your\'s Advertisement; 9902492681

ಈ ಜಾಗ ಸ್ವಾಧೀನಪಡಿಸಿಕೊಂಡು ದಶಕ ಮೇಲಾಯಿತು. ಆದರೆ, ಅಂತಹ ಉದ್ಯಮಗಳು ಸ್ಥಾಪನೆಗೊಳ್ಳಲಿಲ್ಲ. ಗಡಿ ಪ್ರದೇಶದಲ್ಲಿ ಥರ್ಮಲ್ ಪವರ್. ಜವಳಿ ಪಾರ್ಕ, ಕೋಕಾ ಕೋಲಾ ಕಂಪನಿ ಸೇರಿದಂತೆ ಹಲವು ದೈತ್ಯ ಕಂಪನಿಗಳು ಇಲ್ಲಿಗೆ ಬಂದು ಕೈಗಾರಿಕಾ ಸ್ಥಾಪಿಸಿದರೆ ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗ ನಿವಾರಣೆಯಾಗಲಿದೆ. ಅಲ್ಲದೆ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ, ದಶಕ ಕಳೆದರೂ ಅಲ್ಲಿ ಒಂದು ಬೃಹತ್ ಕೈಗಾರಿಕೆ ಬರಲಿಲ್ಲ.

ಕನಸು ಮತ್ತು ಉತ್ಸಾಹಕ್ಕೆ ತಣ್ಣಿರು ಬಿದ್ದು ಭೂಮಿ ಕೊಟ್ಟ ರೈತರು ಕಂಗಾಲಾಗಿದ್ದು ಜನರು , ಗುಳೆ ಹೋಗುತ್ತಿದ್ದಾರೆ ಆದಕಾರಣ ತಾವೂ ಬೃಹತ ಕೈಗಾರಿಕೆಗಳನ್ನು ಪ್ರಾರಂಭಿಸಬೇಕು, ಹಾಗೂ ಕಲಬುರಗಿ ಜಿಲ್ಲೆಯ ಶಹಾಬಾದ ಎಸಿಸಿ ಸಿಮೆಂಟ್ ಕಾರ್ಖಾನೆ ಸ್ಥಗಿತ್ತಾವಾಗಿದ್ದು ಕಾರ್ಖಾನೆ ಪುನರ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಅರ್ಹವಿದ್ಯಾವಂತರಿಗೆ ಉದ್ಯೋಗ ಸಿಗಲಿವೆ. ಇದರಿಂದಾಗಿ ಗುಳೆ ಹೋಗುವುದು ಕೊಂಚ ತಪ್ಪಲಿದೆ ಎಂದು ಮನವಿ ಮಾಡಿದ್ದರು.

ಕಲಬುರಗಿ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳು ಬರಲಿವೆ ಎಂಬ ಆಸೆಯಿಂದ ರೈತರು ಭೂಮಿ ಕೊಟ್ಟರು. ಆದರೆ, ಕಾರ್ಖಾನೆ ಅವರು ಭೂಮಿ ಕೊಟ್ಟ ರೈತರಿಗೆ ಕುಟುಂಬಗಳಿಗೆ ಬಹುತೇಕ ಕಡೆ ಇನ್ನೂವರೆಗೂ ಉದ್ಯೋಗ ನೀಡುತ್ತಿಲ್ಲಾ ಹಾಗೂ ಸ್ಥಳಿಯ ಪ್ರತಿಭಾವಂತ ನಿರುದ್ಯೊಗಿಗಳಿಗೂ ಉದ್ಯೊಗ ನೀಡುತ್ತಿಲ್ಲಾ ಇದರ ಕುರಿತು ಕೇಂದ್ರ ಸಚಿವರ ಗಮನಕ್ಕೆ ತರಲಾಗಿದೆ.- ಬಾಲರಾಜ್ ಗುತ್ತೇದಾರ, ಜಿಲ್ಲಾ ಜೆಡಿಎಸ್ ಅಧ್ಯಕ್ಷರು ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here