ಲೋಕಾಯುಕ್ತ ಹೆಸರಿನಲ್ಲಿ ಹಣ ಕೇಳಿದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿ

0
422

ಕಲಬುರಗಿ; ಅಪರಿಚಿತ ವ್ಯಕ್ತಿಗಳು ಸರ್ಕಾರಿ ಅಧಿಕಾರಿ-ನೌಕರರಿಗೆ ಕರೆ ಮಾಡಿ ತಾನು ಲೋಕಾಯುಕ್ತ‌ ಅಧಿಕಾರಿ ಎಂದು ಬಿಂಬಿಸಿಕೊಂಡು ಹಣ ಕೇಳಿದಲ್ಲಿ ಮೊಬೈಲ್ ನಲ್ಲಿ ಅದನ್ನು ರೆಕಾರ್ಡ್ ಮಾಡಿಕೊಂಡು ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ ಎಂದು ಕಲಬುರಗಿ ಲೋಕಾಯುಕ್ತ ಎಸ್.ಪಿ. ಆ್ಯಂಟನಿ ಜಾನ್ ಜೆ.ಕೆ. ತಿಳಿಸಿದ್ದಾರೆ.

ಕೆಲವು ಅಪರಿಚಿತರು 9156540734 ಹಾಗೂ ಇತರೆ ಸಂಖ್ಯೆಗಳಿಂದ ಸರ್ಕಾರಿ‌ ನೌಕರರಿಗೆ ಕರೆ ಮಾಡಿ ತಾವು ಡಿ.ಎಸ್‍ಪಿ, ಲೋಕಾಯುಕ್ತ ಬೆಂಗಳೂರು/ ಕಲಬುರಗಿ/ ಬೀದರ/ ಯಾದಗಿರ ಎಂದು ಹೇಳಿ ತಮ್ಮ ವಿರುದ್ಧ ಲೋಕಾಯುಕ್ತದಲ್ಲಿ ದೂರು ಇದೆ, ತಮ್ಮನ್ನು ಕಾಣುವಂತೆ ನಿಗದಿತ ಸ್ಥಳಕ್ಕೆ ಬರಲು ತಿಳಿಸಿ ಗೂಗಲ್ ಪೇ ಅಥವಾ ಪೋನ್ ಪೇ ಮೂಲಕ ಹಣ ಹಾಕಲು ಇಲ್ಲದಿದ್ದಲ್ಲಿ ಲೋಕಾಯುಕ್ತ ರೇಡ್ ಅಥವಾ ಟ್ರ್ಯಾಪ್ ಮಾಡುತ್ತೇವೆ ಎಂದು ಹೆದರಿಸುತ್ತಿರುವ ಬಗ್ಗೆ ಮಾಹಿತಿ ಬಂದಿದೆ.

Contact Your\'s Advertisement; 9902492681

ಹೀಗಾಗಿ ಕಲಬುರಗಿ ಜಿಲ್ಲೆಯ ಸರ್ಕಾರಿ ನೌಕರರು ಈ ರೀತಿಯಾಗಿ ಯಾವುದೇ ಪೋನ್ ಕರೆ ಮಾಡಿ ಹೆದರಿಸುತ್ತಿದ್ದರೆ ಪೊಲೀಸ್ ಠಾಣೆಗೆ ದೂರು ನೀಡುವುದಲ್ಲದೆ ಕಲಬುರಗಿ ಲೋಕಾಯುಕ್ತ ಎಸ್.ಪಿ. -9364062519 ಅಥವಾ ದೂ.ಸಂಖ್ಯೆ 08472-295364ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here