ಕಲಬುರಗಿ: ಜೈ ಕನ್ನಡಿಗರ ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾ ವೈದ್ಯಾಧಿಕಾರಿಗಳಿಗೆ ಬೇಡಿಕೆಯ ಮನವಿ ಪತ್ರ ಸಲ್ಲಿಸಲಾಯಿತು.
ಜಿಲ್ಲೆಯ ಜೇವರ್ಗಿ ತಾಲೂಕ ಸರಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅವ್ಯವಹಾರದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.
ಅಂಗವಿಕಲರಿಗೆ ಯುಡಿಐಡಿ ಕಾರ್ಡ ನೀಡಬೇಕೆಂದು ಸರಕಾರದ ಆದೇಶವಿದ್ದರು ಸಹ, ನಿಜವಾದ ಅಂಗವಿಕಲರಿಗೆ ನೀಡದೆ ಯಾರು ಹಣ ನೀಡುತ್ತಾರೋ ಅವರಿಗೆ ಅಂದರೆ ಎಲ್ಲಾ ಅಂಗವಾಕಲ್ಯ ಸರಿಯಿದ್ದ ಸಾರ್ವಜನಿಕರಿಂದ ಹಣ ಪಡೆದು ಯುಡಿಐಡಿ ಕಾರ್ಡ ಮಾಡಿ ಕೊಡುತ್ತಿದ್ದಾರೆ.
ಪ್ರತಿ ಬುಧವಾರ ಕೊಮ್ಮೆ ಮಕ್ಕಳ ಶಸ್ತ್ರಚಿಕಿತ್ಸೆ ಕ್ಯಾಂಪ ನಡೆಯುತ್ತಿದ್ದು, ಇಲ್ಲಿ ಬರುವ ಎಲ್ಲಾ ಸ್ತ್ರೀ ರೋಗಿಗಳಿಗೆ ತಲಾ 50. 50. ಪಡೆದುಕೊಂಡು ಸರಕಾರಕ್ಕೆ ಭರಿಸದೆ ತಮ್ಮ ಜೇಬಿಗೆ ಇಳಿಸಿಕೊಳ್ಳುವ ಹುನ್ನಾರ ಇಲ್ಲಿನ ಸಿಬ್ಬಂದಿಗಳು ನಡೆಸುತ್ತಿದ್ದಾರೆ.
ಆಸ್ಪತ್ರೆಗೆ ಹೆರಿಗೆ ಗೆ ಬರುವ ಸರಿಯಾಗಿನೋಡಿಕೊಳ್ಳದೇಡೆಲವರಿ ಆದ ನಂತರ ಪ್ರತಿಯೊಬ್ಬರಿಂದ 1000-2000 ಪಡೆದುಕೊಂಡು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ.
ಈ ಆಸ್ಪತ್ರೆಯಲ್ಲಿ ನಡೆಯುವ ಭ್ರಷ್ಟಾಚಾರಿ ಸಿಬ್ಬಂದಿಗಳನ್ನು ಅಮಾನತ್ತು ಗಳಿಸುವಂತೆ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ದತ್ತು ಹೆಚ್.ಭಾಸಗಿ, ರಮಾ ಪೂಜಾರಿ, ಅನಿಲ ತಳವಾರ, ಹುಸೇನ್, ಸಂಜೀವ ಮಾಳಗಿ, ನಾಗಜು9ನ ರೆಡ್ಡಿ, ಆಕಾಶ, ಶರಣು ಸೇರಿದಂತೆ ಹಲವರು ಇದ್ದರು.