ಕಲಬುರಗಿ: ಜಿಲ್ಲಾ ಸವಿತಾ ಸಮಾಜ ಸರಕಾರಿ/ಅರೆ ಸರಕಾರಿ ನೌಕರರ ಸಂಘದಿಂದ ಪ್ರತಿ ವರ್ಷದಂತೆ ಈ ವರ್ಷವು ಜುಲೈ 21 ರಂದು ನಗರದ ವೀರಶೈವ ಕಲ್ಯಾಣ ಮಂಟಪ (ಪಬ್ಲಿಕ ಗಾರ್ಡನ)ದಲ್ಲಿ “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಸಚಿವರು, ಶಾಸಕರು, ಸಮಾಜದ ಮುಖಂಡರು, ಗಣ್ಯರು ಆಗಮಿಸುವರು, ಎಸ್.ಎಸ್.ಎಲ್.ಸಿಯಲ್ಲಿ 70%, ಪಿ.ಯು.ಸಿಯಲ್ಲಿ 70% ಡಿಗ್ರಿ ಮತ್ತು ಪಿ.ಜಿಯಲ್ಲಿ 70% ಇರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕರ್ಯಕ್ರಮ ಜರುಗುವದು, ಅದ್ದಕಾಗಿ ಕಲಬುರಗಿ ಜಿಲ್ಲೆಯಲ್ಲಿ 2024ರಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಹಾಗೂ ಆದಾರ ಕಾರ್ಡ ಪ್ರತಿಯನ್ನು ಈ ಕೆಳಕಂಡ ವಿಳಾಸಕ್ಕೆ ಕಳಿಸಿಕೊಡಲು ಕೋರಲಾಗಿದೆ.
ಎಲ್ಲಾ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಮತ್ತು ಆಧಾರ ಕಾರ್ಡಗಳು ಕಳಿಸುವ ಕೊನೆಯ ಜುಲೈ 10.ರ ರೊಳಗಾಗಿ ಕಡ್ಡಾಯವಾಗಿ ಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ರಾಮನಗರ ಎಸ್.ಬಿ ಕಾಲೇಜ ಎದರುಗಡೆ ಸಂಘದ ಜಿಲ್ಲಾಧ್ಯಕ್ಷ ಮಹೇಶ ಉಚ್ಚೆಲೀಕರ್ ಮೊ.9591022261, ಗೌರವಧ್ಯಕ್ಷ ರಾಜೇಂದ್ರ ಅಷ್ಟಗಿಕರ್ 9945731258, ಕಾರ್ಯದರ್ಶಿ ಶ್ರೀಪಾದ ವಿಭೂತಿ 9945731258ಕ್ಕೆ ಸಂಪರ್ಕಿಸಬಹುದು ಎಂದು ಸಂಘದ ಜಿಲ್ಲಾಧ್ಯಕ್ಷ ಮಹೇಶ ಉಚ್ಚೆಲೀಕರ್ ಅವರು ತಿಳಿಸಿದ್ದಾರೆ.