ಕಲಬುರಗಿ – ತಿರುಪತಿ ವಿಮಾನ ಯಾನ ರದ್ದು; ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಬರೆ ಎಳೆಯದಂತೆ

0
98

ಕಲಬುರಗಿ; ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಕೇಂದ್ರವಾದ ಕಲಬುರ್ಗಿಗೆ ವಿಮಾನ ಸಂಚಾರ ಸೌಲಭ್ಯ ಹೆಚ್ಚು ಮಾಡುವ ಬದಲು ಪ್ರಸ್ತುತ ಕಲಬುರಗಿ- ತಿರುಪತಿ ನಡುವೆ ಸಂಚರಿಸುತ್ತಿದ್ದ ವಿಮಾನವನ್ನು ರದ್ದು ಮಾಡಿರುವುದು ಉಚಿತ ಕ್ರಮವಲ್ಲ. ಈ ಬಗ್ಗೆ ಸಂಬಂಧಪಟ್ಟವರು ತಕ್ಷಣ ಮರು ಪ್ರಾರಂಭವಾಗಲು ಕ್ರಮ ಕೈಗೊಳ್ಳಬೇಕು. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಬರೆ ಎಳೆಯದಂತೆ ಎಚ್ಚರ ವಹಿಸಬೇಕು ಎಂದು ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಒತ್ತಾಯಿಸಿದ್ದಾರೆ.

ಕಲಬುರಗಿ – ತಿರುಪತಿ ನಡುವೆ ಸಂಚರಿಸುತ್ತಿದ್ದ ಸ್ಟಾರ್ ಏರ್ ಲೈನ್ಸ್ ನಿತ್ಯ ವಿಮಾನ ಯಾನವನ್ನು ಜೂನ್ 28ರಿಂದ ರದ್ದುಗೊಳಿಸಲಾಗಿದ್ದು ಅದರ ಬದಲಾಗಿ ಅದೇ ವಿಮಾನವನ್ನು. ಬೆಂಗಳೂರಿನಿಂದ ತಮಿಳುನಾಡಿನ ಸೇಲಂ ಗೆ ಸಂಚಾರ ಪ್ರಾರಂಭಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು ಇದು ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಮಾನ ಸಂಸ್ಥೆ ಮಾಡಿದ ದ್ರೋಹವಾಗಿದೆ. ಶೇಕಡ 90ರಷ್ಟು ಪ್ರಯಾಣವನ್ನು ಹೊಂದಿದ್ದ ತಿರುಪತಿ ಯಾನವನ್ನು ಜನದಟ್ಟಣೆ ಇದ್ದರೂ ರದ್ದುಪಡಿಸಿರುವುದು ಖಂಡನೀಯ ಎಂದಿದ್ದಾರೆ.

Contact Your\'s Advertisement; 9902492681

ಕಲ್ಬುರ್ಗಿಯಿಂದ ಮಂಗಳೂರು, ಮುಂಬೈ ಮತ್ತು ದೆಹಲಿಗೆ ನೂತನ ವಿಮಾನ ಸಂಚಾರ ಪ್ರಾರಂಭಿಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಖಾತೆಗೆ ಮನವಿ ಸಲ್ಲಿಸಲಾಗಿದ್ದು ಶೀಘ್ರದಲ್ಲೇ ದೇಶಾದ್ಯಂತ ಒಂದು ಸಾವಿರ ವಿಮಾನಯಾನ ಆರಂಭಗೊಳ್ಳುವಾಗ ಉಡಾನ್ ಯೋಜನೆ ಅಡಿ ಕಾರ್ಯವೆಸಗುವ ವಿಮಾನ ನಿಲ್ದಾಣಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಮತ್ತು ಇಂಡಿಗೋ ಸ್ಪೈಸ್ ಜೆಟ್ ಸೇರಿದಂತೆ ಖಾಸಗಿ ಸಂಸ್ಥೆಗಳ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದ್ದು ಆದರೆ ಈವರೆಗೆ ವಿಮಾನಸೇವೆ ಪ್ರಾರಂಭಗೊಳ್ಳಲಿಲ್ಲ. ಅದರ ಬದಲಾಗಿ ಇದ್ದ ಸೇವೆಯನ್ನು ರದ್ದು ಮಾಡಿರುವುದು ಈ ಭಾಗಕ್ಕೆ ಮಾಡಿದ ಅನ್ಯಾಯವಾಗಿದೆ.

371( ಜೆ) ಅಡಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವಾಣಿಜ್ಯೋದ್ಯಮ ಬೆಳವಣಿಗೆಗೆ ವಿಮಾನ ಸಂಪರ್ಕ ಅತ್ಯಗತ್ಯವಾಗಿದ್ದು ಏರ್ ಬಸ್, ಬೋಯಿಂಗ್ ವಿಮಾನ ನಿಲುಗಡೆ ಸಾಮರ್ಥ್ಯ ಹೊಂದಿದ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಇದಕ್ಕಾಗಿ ಕಲ್ಯಾಣ ಕರ್ನಾಟಕ ಭಾಗದ ಲೋಕಸಭಾ ಸದಸ್ಯರುಗಳು, ಉಸ್ತುವಾರಿ ಸಚಿವರುಗಳು, ಜನಪ್ರತಿನಿಧಿಗಳ, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಒಗ್ಗೂಡಿತ ಪ್ರಯತ್ನ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದ್ದಾರೆ.

ಮಂಗಳೂರು ಭಾಗಕ್ಕೆ ಕಲ್ಬುರ್ಗಿಯಿಂದ ಸುಮಾರು ಏಳೆಂಟು ಬಸ್ಸುಗಳು ನಿತ್ಯ ಪ್ರಯಾಣಿಸುತ್ತಿದ್ದು ಕರಾವಳಿ ಭಾಗ ಹಾಗೂ ಉತ್ತರ ಕೇರಳದ ಜೊತೆ ಸಂಪರ್ಕ ಕಲ್ಪಿಸಲು ಕೂಡಲೇ ವಿಮಾನ ಸೇವೆ ಆರಂಭ ಮಾಡಬೇಕು ಎಂದು ಡಾ. ಪೆರ್ಲ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here