ಕಲಬುರಗಿ ಕೆಬಿಎನ್ ವಿವಿಯ ಆರೋಗ್ಯ ಸೇವೆ ಶ್ಲಾಘನೀಯ

0
11

ಕಲಬುರಗಿ: ತಾಲ್ಲೂಕಿನ ತಾವರಗೇರಾ ಗ್ರಾಮದ ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಖಾಜಾ ಬಂದೇನವಾಜ ವಿಶ್ವವಿದ್ಯಾಲಯದ ಕಮ್ಯೂನಿಟಿ ಮೆಡಿಸಿನ ವಿಭಾಗ ವತಿಯಿಂದ ಕುಟುಂಬ ದತ್ತು ಕಾರ್ಯಕ್ರಮದ ಅಡಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಬೆ. 10 ರಿಂದ್ 3 ಗಂಟೆವರೆಗೆ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಜೆನೆರಲ ಮೆಡಿಸಿನ, ಜೆನೆರಲ ಸರ್ಜರಿ, ಸ್ತ್ರೀ ರೋಗ, ಕಣ್ಣಿನ ವಿಭಾಗ, ಕಿವಿ ಮೂಗು ಗಂಟಲು, ಎಲುಬುಕೀಲು ಸೇರಿದಂತೆ ಚಿಕ್ಕ ಮಕ್ಕಳ ವಿಭಾಗಗಳು ಭಾಗ ವಹಿಸಿದ್ದವು.

Contact Your\'s Advertisement; 9902492681

ವಿದ್ಯಾರ್ಥಿಗಳು ಗ್ರಾಮದ ಜನರ ಮನೆಗೆ ತೆರಳಿ ಕ್ಯಾಂಪ್ ಬಗ್ಗೆ ಮಾಹಿತಿ ನೀಡಿ ಕ್ಯಾಂಪಗೆ ಬಂದು ತಪಾಸಣೆ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದರು.

ಉರ್ದು ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಅರೋಗ್ಯ ತಪಾಸಣೆ ಮಾಡಲಾಯಿತು. ಅಲ್ಲದೇ ಗ್ರಾಮಸ್ಥರು ಕೂಡ ಆಗಮಿಸಿ ತಪಾಸಣೆ ಮಾಡಿಸಿಕೊಂಡು ಉಚಿತ ಮಾತ್ರೆಗಳನ್ನು ಪಡೆದುಕೊಂಡರು. ಮಧುಮೇಹ, ರಕ್ತದ ಒತ್ತಡ ತಪಾಸಣೆ ಮಾಡಲಾಯಿತು. ಅಗತ್ಯ ಚಿಕಿತ್ಸೆ ಪಡೆಯಲು ಕೆಬಿಎನ್ ಆಸ್ಪತ್ರೆಗೆ ಬರುವಂತೆ ಸೂಚಿಸಲಾಯಿತು.

ತಾವರಿಗೆರದಿಂದ ಬರುವ ಬಂದ ರೋಗಿಗಳಿಗೆ ರಿಯಾಯಿತಿ ನೀಡಲಾಗುವುದೆಂದು ಮೆಡಿಕಲ ಡೀನ ಡಾ. ಸಿದ್ದೇಶ ಸಿರವಾರ ತಿಳಿಸಿದರು. ಎಲ್ಲ ರೋಗಿಗಗಳಿಗೆ ಕೆಬಿಎನ ಹೆಲ್ತ್ ಕಾರ್ಡ ನೀಡಲಾಗಿದೆ. ಈ ಕಾರ್ಡನಿಂದ ಕುಟುಂಬ ಸದಸ್ಯರೆಲ್ಲರು ಆರೋಗ್ಯ ಪರೀಕ್ಷೆಗಳು, ವಾರ್ಡ್ ಚಾರ್ಜ್, ಆಪರೇಷನಗೆ ಒಳಗಾದವರು 30% ರಿಯಾಯತಿ ಪಡೆಬಹುದಾಗಿದೆ. ಕುಟುಂಬ ದತ್ತು ಕಾರ್ಯಕ್ರಮದ ಅಡಿ ತಾವರಗೇರೆಯ 450 ಕುಟುಂಬಗಳನ್ನು ಕೆಬಿಎನ ಮೆಡಿಕಲ ದತ್ತು ಪಡೆದಿದೆ. ಒಬ್ಬ ವಿದ್ಯಾರ್ಥಿ 3 ವರ್ಷಗಳವರೆಗೆ ಆ ಕುಟುಂಬದ ಜವಾಬ್ದಾರಿ ಹೊಂದಿರುತ್ತಾನೆ. ವರ್ಷಕ್ಕೆ ಆ ಕುಟುಂಬಕ್ಕೆ 10 ಬಾರಿ ಮೆಡಿಕಲ್ ತಪಾಸಣೆ ನಡೆಸಬೇಕು. ಅವಶ್ಯವಿದ್ದಲ್ಲಿ ಅವರನ್ನು ಕೆಬಿಎನ ಆಸ್ಪತ್ರೆಗೆ ದಾಖಲು ಮಾಡಬೇಕು. ಅವರಿಗೂ ಕೂಡ 30% ರಿಯಾಯಿತಿ ಇರುತ್ತದೆ. ಗರ್ಭಿಣಿ ಮಹಿಳೆಯರಿಗೆ ಎಲ್ಲ ಸೌಲಭ್ಯಗಳು ಉಚಿತ ಎಂದು ವಿವರಿಸಿದರು.

ಇಂದಿನ ಈ ಕಾರ್ಯಕ್ರಮದಲ್ಲಿ ಸುಮಾರು 175ಕ್ಕು ಹೆಚ್ಚು ಜನ ತಪಾಸಣೆ ಮಾಡಿಸಿಕೊಂಡರು.
ಕಮ್ಯೂನಿಟಿ ಮೆಡಿಸಿನ್ ವಿಭಾಗದ ಪ್ರಭಾರಿ ಮುಖ್ಯಸ್ಥೆ ಡಾ ಶೇಹಾನಾಜ, ಡಾ ಅಸ್ಮಾ, ಡಾ. ಆಯಿಷಾ, ಡಾ. ಆಕಾಶ, ಡಾ. ಮುಸ್ತಾಕ್, ಡಾ. ಸಯ್ಯದ್ ಅಲಿ, ಡಾ. ಶಿಲ್ಪಾ, ಡಾ. ಪದ್ಮಾ, ಡಾ. ಕೇದಾರಾನಾಥ್, ಡಾ. ಶಿಫಾ ಹಾಗೂ 35 ವೈದ್ಯ ವಿದ್ಯಾರ್ಥಿಗಳು ಮತ್ತು 35 ಆಂತರಿಕ ತರಬೇತಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕೆಬಿಎನ ವಿವಿಯು ಮಾಲಗತ್ತಿ, ತಾವರಗೇರಾ ಮತ್ತು ಹಾಗರಗ ಗ್ರಾಮವನ್ನು ದತ್ತು ಪಡೆದು ಸ್ಥಳೀಯ ಜನರಿಗೆ ಅರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡಿರುವ ಕೆಬಿಎನ ವಿಶ್ವವಿದ್ಯಾಲಯ ಮತ್ತು ಸಿಬ್ಬಂದಿಯ
ಶ್ಲಾಘನಿಯ ಕಾರ್ಯಕ್ಕೆ ತಾವರಿಗೆರಾ ಗ್ರಾಮ ಪಂಚಾಯಿತಿ ಸದಸ್ಯ ಆರ್. ಪಿ. ತಾವರೆಗೇರ ಧನ್ಯವಾದಗಳನನ್ನು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here