ಕಲಬುರಗಿ; ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಸರ್ವ ಸದಸ್ಯರನ್ನೊಳಗೊಂಡಂತಹ ಮಹತ್ವದ ಸಭೆ ಜುಲೈ 1 ರಂದು ಕಲಬುರಗಿಯಲ್ಲಿರುವ ಐವಾನ್ ಏ ಷಾಹಿ ಪ್ರದೇಶದಲ್ಲಿನ ಕೆಕೆಆರ್‌ಡಿಬಿ ಮಂಡಳಿಯ ಆಡಳಿತ ಕಚೇರಿಯಾಗಿರುವ ಅಭಿವೃದ್ಧಿ ಭವನದ ಸಭಾಂಗಣದಲ್ಲಿ ಮಧ್ಯಾಹ್ನ 2. 30 ಗಂಟೆಗೆ ನಡೆಯಲಿದೆ ಎಂದು ಮಂಡಳಿಯ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಧರ್ಮಸಿಂಗ್ ಹೇಳಿದ್ದಾರೆ.
ಕೆಕೆಆರ್‌ಡಿಬಿ ಮಂಡಳಿಯ ಸದಸ್ಯರಾದ, ರಾಜ್ಯಸಭಾ ಸದಸ್ಯ ಸೈಯ್ಯದ್ ನಾಸೀರ್ ಹುಸೇನ್, ಯಲಬುರ್ಗಾ ಶಸಕರು, ಸಿಎಂ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ, ಆಳಂದ ಶಾಸಕರು, ಸಿಎಂ ರಾಜಕೀಯ ಸಲಹೆಗಾರರಾದ ಬಿಆರ್ ಪಾಟೀಲ್, ಸಿಂಧನೂರು ಶಾಸಕರಾದ ಹಂಪನಗೌಡ ಬಾದರ್ಲಿ, ವಿಜಯನಗರ ಶಾಸಕರಾದ ಎಚ್ ಆರ್ ಗವಿಯಪ್ಪ್, ಕೊಪ್ಪಳ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ್, ಎಂಎಲ್‌ಸಿ ತಿಪ್ಮಣ್ಣ ಕಮಕನೂರ್, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಾದ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ, ರಾಯಚೂರಿನ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್, ಬೀದರ್ ಜಿಲ್ಲಾ ಉಸ್ತುವಾರಿಗಳಾದ ಈಶ್ವರ ಖಂಡ್ರೆ, ಕೊಪ್ಪಳ ಜಿಲ್ಲಾ ಉಸ್ತುವಾರಿಗಳಾದ ಶಿವರಾಜ ತಂಗಡಗಿ, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಜ ಜಮೀರ್ ಅಹ್ಮದ್ ಇವರೆಲ್ಲರೂ ಜು. 1 ರ ಸಭೆಯಲ್ಲಿ ಪಾಲ್ಗೊಂಡು ಮಹತ್ವದ ಚರ್ಚೆಗಳಲ್ಲಿ ತಮ್ಮ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.
ಪ್ರಸಕ್ತ ಸಾಲಿನ ಕ್ರಿಯಾ ಯೋಜನೆ ಸೇರಿದಂತೆ ಕೆಕೆಆರ್‌ಡಿಬಿ ಕೈಗೊಳ್ಳಬಹುದಾದಂತಹ ಯೋಜನೆಗಳ ಬಗ್ಗೆ ಅಂದಿನ ಸಭೆಯಲ್ಲಿ ವಿಸ್ತೃತ ಚರ್ಚೆಗಳು ನಡೆಯಲಿವೆ ಎಂದು ಎಂದು ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್ ಧರ್ಮಸಿಂಗ್ ಹೇಳಿದ್ದಾರೆ.
ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಆರ್ಥಿಕ ಇಲಾಖೆಯ ಎಲ್ ಕೆ ಅತೀಕ್, ಯೋಜನೆ, ಕಾರ್ಯಕ್ರಮ ಸಂಜೋಯನೆ, ಸಾಂಖ್ಯಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಮನೋಜ್ ಜೈನ್, ಕಲಬುರಗಿ ಪ್ರಾದೇಶಿಕ ಆಯುಕ್ತರಾದ ಕೃಷ್ಣ ಬಾಜಪೇಯಿ ಇವರೂ ಸಹ ಪದನಿಮಿತ್ತ ಕೆಕೆಆರ್‌ಡಿಬಿ ಮಂಡಳಿಯ ಸದಸ್ಯರಾಗಿರುತ್ತಾರೆ. ಎಂ. ಸುಂದರೇಶ ಬಾಬೂ ಕೆಕೆಆರ್‌ಡಿಬಿ ಮಂಜಳಿಯ ಕಾರ್ಯದರ್ಶಿಯಾಗಿದ್ದಾರೆ.