ಜನಪದ ಕಲಾವಿದರು ಸಮಾಜದ ಆಸ್ತಿ

0
15

ಕಲಬುರಗಿ; ಗ್ರಾಮೀಣ ಭಾಗದಲ್ಲಿ ಅನೇಕ ಜನ ಕಲಾವಿದರು ಹಗಲಿರುಳು ಸೇವೆಗೈದು ಜನಪದ ಉಳಿಸುವುದರೊಂದಿಗೆ ಸಮಾಜದ ಆಸ್ತಿಯಾಗಿದ್ದಾರೆ ಎಂದು ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಹೇಳಿದರು.

ನಗರದ ಸಂತೋಷ ಕಾಲೋನಿಯ ದಕ್ಷಿಣಮುಖಿ ಹನುಮನ ದೇವಸ್ಥಾನದ ಆವರಣದಲ್ಲಿ ಶ್ರೀದೇವಿ ಸರಸ್ವತಿ ಕಲಾ ಬಳಗದ ವತಿಯಿಂದ ಹಮ್ಮಿಕೊಂಡ ಜಾನಪದ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಕಲಾವಿದರ ಜೀವನಕ್ಕೆ ಯಾವುದೇ ಭದ್ರತೆ ಇಲ್ಲದೆ, ಆರ್ಥಿಕ ತೊಂದರೆಯಿಂದ ತಮ್ಮ ಕುಟುಂಬ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಅದಕ್ಕಾಗಿ ಸರಕಾರ ಪ್ರತಿ ತಿಂಗಳು ಕಲಾವಿದರಿಗೆ ಮಾಶಾಸನ ನೀಡಿ ಕಲಾವಿದರ ಬಾಳಿಗೆ ಬೆಳಕಾಗಲಿ. ಕಲಾವಿದರ ಭದ್ರತೆ ಒದಗಿಸುವುದರೊಂದಿಗೆ ಗ್ಯಾರಂಟಿ ಯೋಜನೆ ಜಾರಿಗೆ ಮಾಡಲೆಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀಶೈಲ ಮುಲಗೆ ಮಾತನಾಡುತ್ತಾ ಸರಕಾರ ಕಲಾವಿದರಿಗೆ ಅರ್ಜಿ ಹಾಕಿಸಿಕೊಂಡು ಕಲಾವಿದರೆಂದು ಗುರುತಿಸುವ ಬದಲು ನಿಜವಾದ ಕಲಾವಿದರನ್ನು ಸರಕಾರವೆ ಗುರುತಿಸಿ ಸಹಾಯ, ಸಹಕಾರ ಮಾಡಲಿ. ಇಂತಹ ಕಲಾವಿದರನ್ನು ಗುರುತಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಉಪನ್ಯಾಸಕರಾದ ರವೀಂದ್ರ ಗುತ್ತೇದಾರ, ಆಳಂದ ಸತ್ಯ ಸಾಯಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾದ ಮಲಕಾರಿ ಪೂಜಾರಿ, ಶಿವರಾಜ್ ಪರ್ತಾಪುರ, ಸಿದ್ದರಾಮಪ್ಪ ಸಾವಳಗಿ, ಸಾತಲಿಂಗಪ್ಪ ಶಾಸ್ತ್ರಿ, ಹಾಗೂ ಸಂಘದ ಅಧ್ಯಕ್ಷರಾದ ಶರಣಪ್ಪ ಕಟ್ಟಿಮನಿ ಇದ್ದರು.

ಖ್ಯಾತ ಸಂಗೀತ ಕಲಾವಿದರಾದ ಗುರುಶಾಂತಯ್ಯ ಸ್ಥಾವರಮಠ, ಸೂರ್ಯಕಾಂತ ಶಾಸ್ತ್ರಿ ದುತ್ತರಗಾಂವ, ಪರಶುರಾಮ ಗರೂರ, ವೀರಭದ್ರಯ್ಯ ಸ್ಥಾವರಮಠ, ಶ್ರೀಶೈಲ ಯಳಸಂಗಿ, ಪ್ರಭು ಚಕ್ಕಿ, ಪವಿತ್ರಾ ಸ್ಥಾವರಮಠ ಸೇರಿದಂತೆ ಅನೇಕ ಜನ ಕಲಾವಿದರು ಜನಪದ ಗೀತೆಗಳು ಹಾಡುವ ಮೂಲಕ ಜನರನ್ನು ರಂಜಿಸಿದರು.

ಕಾರ್ಯಕ್ರಮದಲ್ಲಿ ರವಿಕುಮಾರ ಗೋಲಗೇರಿ, ಶಿವಶಂಕರ ಹೀರಾ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು. ಧನ್ಯವಾದಗಳೊಂದಿಗೆ, ಶರಣಪ್ಪ ಕಟ್ಟಿಮನಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here