ಕಲಬುರಗಿ: ಅಪ್ಪ- ಅವ್ವ, ಹೆಂಡತಿ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಬಹುದು. ಆದರೆ ಅಕ್ಕ ತಂಗಿಯ ಸ್ಮರಣೆಯಲ್ಲಿ ಟ್ರಸ್ಟ್ ಸ್ಥಾಪಿಸುವುದು ಬಹಳ ಅಪರೂಪ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ನುಡಿದರು.
ನಗರದ ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ
ಸೌಭಾಗ್ಯ ಸಿರಿ ಸಾಮಾಜಿಕ ಸೇವಾ ಟ್ರಸ್ಟ್ ಉದ್ಘಾಟನಾ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ,ಸಂಭ್ರಮದ ಪ್ರಗತಿ ಮುಂದುವರಿಯಲಿ ಎಂದು ಹಾರೈಸಿದರು.
ಸಾನ್ನಿಧ್ಯ ವಹಿಸಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಡಾ.ದಾಕ್ಷಾಯಣಿ ಎಸ್. ಅಪ್ಪ ಮಾತನಾಡಿ, ಮನೆಯಲ್ಲಿ ಸೌಭಾಗ್ಯ ಲಕ್ಷ್ಮಿಯಾಗಿ, ಶಾಲೆಯಲ್ಲಿ ಮಕ್ಕಳಿಗೆ ವಿದ್ಯಾಲಕ್ಷ್ಮೀಯಾಗಿ, ಸಮಾಜದಲ್ಲಿ ಸೌಭಾಗ್ಯ ಸಿರಿಯಾಗಿರುವ ಸೌಭಾಗ್ಯ ನಿಜಕ್ಕೂ ಅಮರರಾಗಿದ್ದಾರೆ ಎಂದು ನುಡಿದರು.
ತಂಗಿಯ ಸ್ಮರಣೆಯಲ್ಲಿ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಂಡಿರುವ ಬಡಿಗೇರ ಕುಟುಂಬ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿದರು.
ಯಳಸಂಗಿ, ಮುತ್ಯಾನ ಬಬಲಾದ ಮಠದ ಗುರುಪಾದಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಲೋಕೋಪಯೋಗಿ ಇಲಾಖೆ ಗುಣಮಟ್ಟ ವಿಭಾಗದ ಅಧೀಕ್ಷಕ ಅಭಿಯಂತರ ಡಾ. ಸುರೇಶ ಎಲ್. ಶರ್ಮಾ ಅಧ್ಯಕ್ಷತೆ ವಹಿಸಿದ್ದರು.
ಎಚ್ಕೆಸಿಸಿಐ ಮಾಜಿ ಅಧ್ಯಕ್ಷ ಸೋಮಶೇಖರ ಟೆಂಗಳಿ, ಡಾ. ಅಲ್ಲಮಪ್ರಭು ದೇಶಮುಖ, ದೇವಿಂದ್ರಪ್ಪ ಬಡಿಗೇರ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಉಮೇಶ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ರಾಜಕುಮಾರ ಉದನೂರ ನಿರೂಪಿಸಿದರು. ಮಾಲಾ ಕಣ್ಣಿ ಸ್ವಾಗತಿಸಿದರು. ಟ್ರಸ್ಟ್ ಅಧ್ಯಕ್ಷ ಸುರೇಶ ಬಡಿಗೇರ ಪ್ರಾಸ್ತಾವಿಕ . ಆಕಾಂಕ್ಷಾ ಪುರಾಣಿಕ ಅವರು ಭರತ ನಾಟ್ಯ ಪ್ರದರ್ಶನ ಮಾಡಿದರು. ಕಲ್ಪನಾ ಗೋಲ್ಡ್ ಸ್ಮಿತ್ ಪ್ರಾರ್ಥನೆಗೀತೆ ಹಾಡಿದರು. ಶಂಕರಪ್ಪ ಹತ್ತಿ ವಂದಿಸಿದರು.
ಸೌಭಾಗ್ಯ ಸಿರಿ ಕಾಯಕ ರತ್ನ ಪ್ರಶಸ್ತಿ ಪುರಸ್ಕೃತರು: ಡಾ. ಎಚ್.ಎಸ್. ಕಟ್ಟಿ, ಡಾ. ಸ್ವಾಮಿರಾವ ಕುಲಕರ್ಣಿ, ಡಾ.ಎಸ್.ಎಸ್. ಗುಬ್ಬಿ, ದೇವಯ್ಯ ಗುತ್ತೇದಾರ, ಸೋಮನಾಥ ಎಲ್. ಕಟ್ಟಿಮನಿ, ಪವನಕುಮಾರ ವಳಕೇರಿ, ಗುಂಡಣ್ಣ ಡಿಗ್ಗಿ, ಲಕ್ಷ್ಮಣ ದಸ್ತಿ, ರವೀಂದ್ರ ಶಾಬಾದಿ, ಸುರೇಖಾ ಡೆಂಗೆ ಅವರಿಗೆ ಸೌಭಾಗ್ಯ ಸಿರಿ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರತಿ ವರ್ಷ ಎರಡು ಕಾರ್ಯಕ್ರಮ: ತಂಗಿ ಸೌಭಾಗ್ಯ ಹೆಸರಿನಲ್ಲಿ ಪ್ರತಿ ವರ್ಷ ಆಕೆಯ ಜನುಮ ದಿನ ಹಾಗೂ ನಿಧನ ದಿನದ ನಿಮಿತ್ತ ಸಾಮಾಜಿಕ ಕಾರ್ಯಕ್ರಮ ಮಾಡುವ ಮೂಲಕ ತನ್ನ ಸಹೋದರಿಯನ್ನು ಜೀವಂತವಾಗಿಡುವೆ.-ಸುರೇಶ ಬಡಿಗೇರ, ಅಧ್ಯಕ್ಷರು, ಸೌಭಾಗ್ಯ ಸಿರಿ ಸಾಮಾಜಿಕ ಸೇವಾ ಟ್ರಸ್ಟ್, ಕಲಬುರಗಿ