ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ವಿಫಲ: ರಾಜ್ಯ ಸರಕಾರದ ವಿರುದ್ಧ ಸಾಂಕೇತಿಕ ಧರಣಿ ಸತ್ಯಾಗೃಹ

0
5

ಕಲಬುರಗಿ: ಕರ್ನಾಟಕ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ವಿಫಲವಾದ ರಾಜ್ಯ ಸರ್ಕಾರ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪುನೀತರಾಜ ಸಿ.ಕವಡೆ ನೇತೃತ್ವದಲ್ಲಿ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗೃಹವನ್ನು ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರುಗಡೆ ಹಮ್ಮಿಕೋಳ್ಳಲಾಯಿತು.

ಕಾರಣ ತಾವು ಕೂಡಲೇ ಕರ್ನಾಟಕ ಸರ್ಕಾರದ ಅಧಿನದ ಎಲ್ಲಾ ಸರ್ಕಾರಿ ಹುದ್ದೆಗಳಲ್ಲಿ ಸಿ ಮತ್ತು ಡಿ ದರ್ಜೆಯಲ್ಲಿ ಕನ್ನಡಿಗರಿಗೆ ಶೇಕಡಾ 100% ಪ್ರತಿಷತ ಉದ್ಯೋಗ ನೀಡಬೇಕು ಮತ್ತು ಖಾಸಗಿ ಸಂಸ್ಥೆಗಳು ನಡೆಸುತ್ತಿರುವ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಈ ಮಣ್ಣಿನ ಮಕ್ಕಳಿಗೆ ಉದ್ಯೋಗವಿಲ್ಲದಂತಾಗಿದೆ. ಹಾಗೂ ಕೇಂದ್ರ ಸರ್ಕಾರದ ಘಟಕಗಳಲ್ಲಿ ಕನ್ನಡಿಗರನ್ನು ಉದ್ಯೋಗ ನೀಡುತ್ತಿಲ್ಲ.

Contact Your\'s Advertisement; 9902492681

ಕೂಡಲೇ ಡಾ. ಸರೋಜನಿ ಮಹಿಸಿ ವರದಿಯನ್ನು ಯತಾವಥಾಗಿ ಶಿಫಾರಸ್ಸು ಮಾಡಿ ಈ ರಾಜ್ಯದಲ್ಲಿ ಉದ್ಯೋಗ ಮೀಸಲಾತಿಗೆ ಸಂಬಂಧಿಸಿದ ಮಾನದಂಡಗಳನ್ನು ಶಿಫಾರಸ್ಸು ಮಾಡಿ ಕರ್ನಾಟಕದಲ್ಲಿ ಕನ್ನಡಿಗನೆ ಸಾರ್ವಭೌಮ್ಮನೆಂದು ತಾವು ಎತ್ತಿ ಹಿಡಿತ್ತಿರಿ ಎಂದು ನಂಬಿದ್ದೇನೆ. ಒಂದು ವೇಳೆ ಸದರಿ ವಿಷಯದ ಕುರಿತು ನಿರ್ಲಕ್ಷ್ಯ ವಹಿಸಿದಲ್ಲಿ ಬೀದಿಗಿಳಿದು ಹಂತ ಹಂತವಾಗಿ ಹೋರಾಟ ಮಾಡಲು ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಹೇಶ ಎಸ್.ಕಾಶಿ, ನಿಲಕಂಠರಾವ ಪಾಟೀಲ, ಈರಣ್ಣ ಆಳಂದ, ದೇವಿಂದ್ರ ಮಯೂರ, ದೇವಿಂದ್ರಪ್ಪಗೌಡ ಪಾಟೀಲಮ ಚಂದರ ಚವ್ಹಾಣ, ಕಾಫ್ ಕಾಳಗಿ, ಯಲ್ಲಾಲಿಂಗ ಹಯ್ಯಾಳಕರ್, ಸಂಗಮೇ ಬೋರೊಟಿ, ಯಲ್ಲಪ್ಪ ಬಂಕಲಗಿ, ನಿರ್ಮಲ ತಳವಾರ, ನಿಸಾರ ಅಹ್ಮದ್ ಖಾನ್, ಕಲ್ಯಾಣಿ ತಳವಾರ, ಶಂಕರಗೌಡ ಯಡ್ರಾಮಿ, ಶಬ್ಬಿರ್ ಸಾಬ್, ಸುರೇಶ ಹೋಸಮನಿ, ನಂದಕುಮಾರ ಸೇಡಂ, ಪ್ರಭುಲಿಂಗ ಯಳವಂತಗಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here