ಅಧ್ಯಾತ್ಮದ ಜ್ಞಾನ ಬದುಕಿಗೆ ಬೆಳಕು ನೀಡುತ್ತದೆ

0
40

ಕಲಬುರಗಿ:ಮಾನವನ ಬದುಕಿಗೆ ಅಧ್ಯಾತ್ಮದ ಜ್ಞಾನವು ಅರಿವು ಮೂಡಿಸುವುದಲ್ಲದೆ,ಬೆಳಕು ನೀಡುತ್ತದೆ ಎಂದು ಪುರಾಣ ಪಂಡಿತ ಮಲ್ಲಿಕಾರ್ಜುನ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.

ಜಯನಗರ ಶಿವಮಂದಿರದಲ್ಲಿ ಸೋಮವಾರ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ “ಜ್ಞಾನ ಜ್ಯೋತಿ ಬೆಳಕು”ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಮಾನವನ ಪಾಪ,ಪುಣ್ಯ ಕೆಲಸಗಳು ಯೋಚನೆಗೆ ತಕ್ಕಂತೆ ಇರುತ್ತವೆ.ಅಂತರಾತ್ಮಕ್ಕೆ ಮಾಡುವ ವಂಚನೆ ಮಹಾಪಾಪ.ಪ್ರತಿಯೋಬ್ಬರೂ ವಿವೇಚನಾಶೀಲರಾದರೆ ಬದುಕು ಸುಂದರ ಗೊಳಿಸಬಹುದು.ಇದಕ್ಕೆಲ್ಲಾ ಅಧ್ಯಾತ್ಮದ ಜ್ಞಾನ ಮುಖ್ಯವಾಗಿದೆ ಎಂದ ಅವರು ಜಗದೋದ್ಧಾರಕ ಪರಮಾತ್ಮ ಶಾಂತಿಪ್ರಿಯ.ಅವನ ಮಕ್ಕಳಾದ ನಾವು,ನಮ್ಮ ಆತ್ಮವು ಶಾಂತ ಚಿತ್ತದಿಂದ ಕೂಡಿರಬೇಕು ಎಂದು ಅವರು ತಿಳಿಸಿದರು.

Contact Your\'s Advertisement; 9902492681

ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಮಾತನಾಡಿ ಆಸೆಯು ಹೆಚ್ಚಾದಂತೆ ಇಂದು ಎಲ್ಲೇಡೆ ಮೋಸ,ವಂಚನೆ, ದರೋಡೆಯಂಥ ಕೃತ್ಯಗಳು ನಡೆಯುತ್ತಿವೆ.ಇದಕ್ಕೆಲ್ಲಾ ಜ್ಞಾನದ ಕೊರತೆ ಕಾರಣವಾಗಿದೆ.ಆಸೆ ಬಿಟ್ಟು ಸರಳ ಜೀವನದೆಡೆ ಸಾಗಿದರೆ ಕಷ್ಟಗಳಿಂದ ಪಾರಾಗಬಹುದು.ಮುಂದೆಯೂ ಜಯನಗರ ಶಿವಮಂದಿರಲ್ಲಿ ಶ್ರಾವಣ ಮಾಸದಲ್ಲಿ ಪ್ರವಚನ ಜೊತೆಗೆ ಇಂಥ ಅಧ್ಯಾತ್ಮೀಕ ಕಾರ್ಯಕ್ರಮಗಳು ನಿರಂತರ ನಡೆಯಲಿವೆ ಎಂದರು.

ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ಮದಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ಸಿದ್ಧಲಿಂಗ ಗುಬ್ಬಿ, ಬಸವರಾಜ ಮಾಗಿ, ಶಿವಪುತ್ರಪ್ಪ ಮರಡಿ,ಶಿವಕುಮಾರ ಪಾಟೀಲ, ಬಂಡೆಪ್ಪ ಕೇಸೂರ, ಮಲ್ಲಯ್ಯ ಸ್ವಾಮಿ ಗಂಗಾಧರಮಠ , ಹಿರಿಯ ಸದಸ್ಯರಾದ ಬಸವರಾಜ ಅನ್ವರಕರ,ಗುರುಪಾದಪ್ಪ ಕಾಂತಾ, ವೀರಪ್ಪ ಹುಡುಗಿ, ಮಲ್ಲಿಕಾರ್ಜುನ ಕಲ್ಲಾ, ಬಸವರಾಜ ಪುರ್ಮಾ, ಮಲ್ಲಯ್ಯ ಸ್ವಾಮಿ ಬೀದಿಮನಿ, ವಿನೋದ ಪಾಟೀಲ, ಸುಭಾಷ್ ಅಮೋಜಿ ಮಹಿಳಾ ಸದಸ್ಯರಾದ ಅನುರಾಧ ಕುಮಾರಸ್ವಾಮಿ, ಸುಷ್ಮಾ ಮಾಗಿ,ಸುರೇಖಾ ಬಾಲಕೊಂದೆ, ಸುಜಾತಾ ಭೀಮಳ್ಳಿ, ಗೀತಾ ಸಿರಗಾಪೂರ ಸೇರಿದಂತೆ ಅನೇಕ ಹಿರಿಯರು,ಮುಖಂಡರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here