ಆಳಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ ಪೋನ ವಿತರಣೆ

0
27

ಆಳಂದ ; ಮಕ್ಕಳ ಆರೋಗ್ಯ, ಪೌಷ್ಟಿಕ ಆಹಾರದ ಕುರಿತ ವರದಿಯನ್ನು ತಂತ್ರಾಂಶದಲ್ಲಿ ದಾಖಲಿಸುವುದರ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯಚಟುವಟಿಕೆಗೆ ಅನುಕೂಲ ಮಾಡಿಕೊಡವ ನಿಟ್ಟಿನಲ್ಲಿ ಸರಕಾರದಿಂದ ನೀಡಲಾದ ಸ್ಮಾರ್ಟ ಮೋಬೈಲ ಪೋನ್‍ಗಳನ್ನು ಶಾಸಕ ಬಿ.ಆರ್ ಪಾಟೀಲ ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಿದರು.

ಪಟ್ಟಣದ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಲಬುರಗಿ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಪೋಷಣ ಅಭಿಯಾನ ಯೋಜನೆಯಡಿಯಲ್ಲಿ ಮೇಡಿಸಿನ ಕಿಟ್, ತೂಕ ಯಂತ್ರ ವಿತರಣೆ ಹಾಗೂ ಅಂಗನವಾಡಿ ಕಾರ್ಯಕರ್ತೆರಿಗೆ 440 ಸ್ಮಾಟಪೋನ, ವಿತರಿಸಿ ಮಾತನಾಡಿದ ಅವರು ಡಿಜಿಟಲ್ ತಂತ್ರಜ್ಞಾನ ಬಹಳಷ್ಟು ಮುಂದುವರೆದಿದ್ದು ನಾವು ತಂತ್ರಜ್ಞಾನವನ್ನು ಬಳಸಿಕೊಂಡು ನಮ್ಮ ವೃತ್ತಿಯಲ್ಲಿ ಕೌಶ್ಯಲವನ್ನು ಮೆರೆಯಬೇಕಿದೆ ಅಂಗನಾಡಿ ಕಾರ್ಯರ್ತೆಯರು ಕೆಲಸ ಶ್ಲಾಘನಿಯವಾಗಿದ್ದು ಅವರ ಬೆಂಬಲಿಕ್ಕೆ ಸದಾ ನಾವು ಇದ್ದೇವೆ ಎಂದರು.

Contact Your\'s Advertisement; 9902492681

ಸಿಡಿಪಿಓ ಶ್ರೀಕಾಂತ ಮೇಂಗಜಿ ಸ್ವಾಗತ ಕೋರಿ, ಪ್ರಾಸ್ಥವಿಕವಾಗಿ ಮಾತನಾಡಿದರು. ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅಂಗನವಾಡಿ ಮೇಲ್ವಿಚಾರಕಿ ನಂದಾ ಪಾಟೀಲ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here