ಕೊಲೆ ಆರೋಪಿಗಳನ್ನು ಬಂಧಿಸಲು ಪೊಲೀಸರು ಮುಂದಾಗಬೇಕು

0
55

ಸುರಪುರ: ತಿಪ್ಪನಹಳ್ಳಿ ಗ್ರಾಮದಲ್ಲಿ ಏಪ್ರಿಲ್ 16 ರಂದು ರಾತ್ರಿ ಭಾಗಪ್ಪ ಲಕ್ಷ್ಮೀಪುರ ಎನ್ನುವ ಸಾವು ಅಸ್ವಾಭಾವಿಕ ಸಾವಲ್ಲ ಅದು ಕೊಲೆಯಾಗಿದ್ದು,ಕೂಡಲೇ ಈ ಪ್ರಕರಣದಲ್ಲಿನ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಲು ಮುಂದಾಗಬೇಕು ಎಂದು ಶಿವಲಿಂಗ ಹಸನಾಪುರ ಒತ್ತಾಯಿಸಿದರು.

ನಗರದ ಪೊಲೀಸ್ ಠಾಣೆಯಲ್ಲಿನ ಡಿವೈಎಸ್ಪಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ ಸಾಗರ ಬಣ) ದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ಭಾಗಪ್ಪನ ಸಾವು ಕೊಲೆಯಾಗಿದೆ ಎಂದು ಕುಟುಂಬಸ್ಥರೆ ಆರೋಪಿಸುತ್ತಿದ್ದಾರೆ.ಅಲ್ಲದೆ ಕೊಲೆ ನಡೆದು ಮೂರು ತಿಂಗಳಾಗುತ್ತಿದ್ದರು ಸರಿಯಾದ ತನಿಖೆ ನಡೆಯುತ್ತಿಲ್ಲ,ಇದರಿಂದ ಕುಟುಂಬಸ್ಥರು ಇಂದು ನಮ್ಮ ಸಂಘಟನೆಯ ಬಳಿಗೆ ಬಂದಿದ್ದರಿಂದ ಇಂದು ಪ್ರತಿಭಟನೆ ನಡೆಸುತ್ತಿದ್ದೇವೆ,ಕೂಡಲೇ ಪ್ರಕರಣದಲ್ಲಿನ ಆರೋಪಿಗಳನ್ನು ಬಂಧಿಸಬೇಕು ಮತ್ತು ಎಫ್‍ಐಆರ್ ನಲ್ಲಿ ಕಲಂ 302 ನ್ನು ಸೇರಿಸಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಮುಖಂಡ ಆನಂದ ಲಕ್ಷ್ಮೀಪುರ ಮಾತನಾಡಿ,ಭಾಗಪ್ಪ ನಮ್ಮೂರಿನ ಯುವಕ,ತಿಪ್ಪನಹಳ್ಳಿಯಲ್ಲಿ ಅವರ ಕುಟುಂಬ ವಾಸಿಸುತ್ತಿದ್ದು,ಅವರ ಸಂಬಂಧಿಕರೆ ಕೊಲೆ ಮಾಡಿದ್ದಾರೆ ಎಂದು ಸ್ವತಃ ಕುಟುಂಬಸ್ಥರೆ ಆರೋಪ ಮಾಡುತ್ತಿದ್ದು ಪೊಲೀಸರು ಇದರಲ್ಲಿ ಮೀನಾಮೇಷ ಎಣಿಸುತ್ತಿದ್ದು ಕೂಡಲೇ ಕೊಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.ಇದಕ್ಕಾಗಿ ಈಗಾಗಲೇ ಎಸ್ಪಿ,ಐಜಿಪಿಯವರಿಗೂ ಭೇಟಿಯಾಗಿದ್ದೇವೆ ಎಂದರು.

ಡಿವೈಎಸ್ಪಿ ಜಾವಿದ್ ಇನಾಂದಾರ್ ಮಾತನಾಡಿ,ತಾವು ಅನುಮಾನಿಸುವಂತೆ ಈಗಾಗಲೇ ಕೆಲವರನ್ನು ಠಾಣೆಗೆ ಕರೆಯಿಸಿ ವಿಚಾರಿಸಲಾಗಿದೆ,ಆದರೆ ಸರಿಯಾದ ಸಾಕ್ಷಿಗಳು ದೊರೆಯುತ್ತಿಲ್ಲ,ಆದ್ದರಿಂದ ಈಗ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬರಬೇಕಿದ್ದು,ಇನ್ನು ಮೂರು ದಿನಗಳಲ್ಲಿ ಅಂತಿಮ ವರದಿ ಬಂದ ನಂತರ ಸಾವಿನ ನಿಖರತೆ ಗೊತ್ತಾಗಲಿದ್ದು,ಕೊಲೆ ಎಂದು ವರದಿ ಬಂದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಮತ್ತು ಸೆಕ್ಷನ್ 302 ನ್ನು ಸೇರಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಹಾಪುರ ಠಾಣೆ ಪಿ.ಐ ಎಸ್.ಎಮ್ ಪಾಟೀಲ್,ಸಂಘಟನೆಯ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಮಾತನಾಡಿದರು.ನಂತರ ನಾಲ್ಕು ದಿನಗಳ ಕಾಲಾವಕಾಶ ನೀಡಿ ಮನವಿ ಸಲ್ಲಿಸಿ ಒಂದು ವೇಳೆ ನಾಲ್ಕು ದಿನಗಳಲ್ಲಿ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಮತ್ತೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ತಿಪ್ಪಣ್ಣ ಶೆಳ್ಳಗಿ,ವಾಸು ಕೋಗಿಲಕರ್,ಶೇಖರ ಮಂಗಳೂರ,ಎಮ್.ಪಟೇಲ್,ಮರೆಪ್ಪ ಕ್ರಾಂತಿ,ಚನ್ನಬಸಪ್ಪ ದೇವಾಪುರ,ಖಾಜಾ ಅಜ್ಮೀರ್,ತಾಯಪ್ಪ ಭಂಡಾರಿ,ಶ್ರೀಮಂತ ಹಾದಿಮನಿ,ಹಣಮಂತ ರತ್ತಾಳ,ಆನಂದ ಅಮ್ಮಾಪುರಕರ್,ಯಲ್ಲಪ್ಪ ರತ್ತಾಳ,ಭೀಮರಾಯ ಮಂಗಳುರ,ರಾಜು ಬಡಿಗೇರ ಪೇಠ ಅಮ್ಮಾಪುರ,ಮೌನೇಶ ದೇವತ್ಕಲ್,ದೇವಿಂದ್ರ ವಾಗಣಗೇರ,ತಿಪ್ಪಣ್ಣ ಪಾಟೀಲ್,ಶರಣು ಬೈರಿಮರಡಿ,ಶಾಂತಪ್ಪ ತಳಾವರಗೇರ,ಶಿವಪ್ಪ ಶೆಳ್ಳಗಿ,ಗುರಪ್ಪ ಸೇರಿದಂತೆ ಮೃತ ಭಾಗಪ್ಪನ ಕುಟುಂಬಸ್ಥರು ಹಾಗೂ ಅನೇಕ ಜನ ಮಹಿಳೆಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here