ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

0
92

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ

ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು ಕರ್ನಾಟಕ ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕು ಘಟಕಗಳಿಗೆ ಚುನಾವಣೆ ಹಿನ್ನೆಲೆಯಲ್ಲಿ  ಚಿಂಚೋಳಿ ತಾಲೂಕ ಘಟಕದ ಅಧ್ಯಕ್ಷ ಸ್ಥಾನಕ್ಕೆ ಶರಣು ಶರಣು ಮೋತಕಪಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದರು.

ಪಟ್ಟಣದ ಪ್ರೊಫೆಷನಲ್ ಕೊರಿಯರ್ ಕಚೇರಿ ಮುಖ್ಯ ರಸ್ತೆಯಲ್ಲಿ ಇರುವ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿ ತಾಲೂಕಿನ ಎಲ್ಲ ಆತ್ಮೀಯ ಶರಣ ಬಂಧುಗಳು, ಹಿತೈಷಿಗಳು ಸಮಾಜದ ಗಣ್ಯರು ಹಾಗೂ ಮತದಾರರು ಆಶೀರ್ವದಿಸಲು ಮನವಿ ಮಾಡಿದರು.

Contact Your\'s Advertisement; 9902492681

ಪರಿಚಯ: ಚಿಂಚೋಳಿ ತಾಲೂಕಿನ ಶಿಕಾರ ಮೋತಕಪಲ್ಲಿ ಎನ್ನುವ ಚಿಕ್ಕ ಗ್ರಾಮದ ಸಾಮಾನ್ಯ ರೈತರ ಮನೆಯಲ್ಲಿ ಜನಿಸಿದ ಅವರು, ವೃತ್ತಿಯಲ್ಲಿ ವಕೀಲನಾಗಿ ಜವಾಬ್ದಾರಿಯಲ್ಲಿ ರಾಜಕೀಯ ಪಕ್ಷದ ಕಾರ್ಯಕರ್ತನಾಗಿ ಸಮಾಜದ ಬಾಂಧವರಿಗೆ ಉಪಯುಕ್ತವಾಗಿ ಸೇವೆ ಸಲ್ಲಿಸಿದ್ದಾರೆ.

ದೇಶದಲ್ಲಿ ನಮ್ಮ ವೀರಶೈವ ಲಿಂಗಾಯತ ಸಮಾಜದ ಅಧಿಕೃತ ಸಂಘಟನೆಯಾದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜೊತೆಗೆ ಸದಾಕಾಲ ಗುರುತಿಸಿಕೊಂಡು ಸಂಘಟನೆಯಲ್ಲಿ ಕೊಟ್ಟಂತಹ ಜವಾಬ್ದಾರಿಗೆ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸಿದ ತೃಪ್ತಿ ಹೊಂದಿರುತ್ತೇನೆ ಎಂದು ತಿಳಿಸಿದ ಅವರು, ಸಂಘಟನೆಯ ರಾಷ್ಟೀಯ, ರಾಜ್ಯದ ಹಾಗು ಜಿಲ್ಲಾ ಪದಾಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿರುವ ನಾನು ಸದಾ ಸಮಾಜದ ಪರ ಕೆಲಸ ಮಾಡುವ ಯೋಚನೆ ಹೊಂದಿರುತ್ತೇನೆ.

ಚಿಂಚೋಳಿ ತಾಲೂಕು ಘಟಕದ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಆಸಕ್ತಿ ಹೊಂದಿದ್ದು, ಚಿಂಚೋಳಿಯ ಸಮಾಜದ ಪ್ರಮುಖರಾದ ತಮ್ಮೆಲ್ಲರ ಆಶೀರ್ವಾದ ಹಾಗು ಸಹಕಾರ ಇದೆ ಎನ್ನುವ ಪ್ರಬಲ ನಂಬಿಕೆಯೊಂದಿಗೆ ನನ್ನ ನಾಮಪತ್ರವನ್ನು ಸಲ್ಲಿಸುತ್ತಿದ್ದೇನೆ. ಸಮಾಜ, ಧರ್ಮ ಎನ್ನುವ ವಿಚಾರ ಬಂದಾಗ ಎಲ್ಲವನ್ನೂ ಮೀರಿ ಕೇವಲ ಸಮಾಜದ ಹಿತದಿಂದ ಯೋಚನೆ ಮಾಡಿ ಸೂಕ್ತ ವ್ಯಕ್ತಿಗೆ ತಾವು ಮನ್ನಣೆ ಕೊಡುತ್ತೀರಿ ಅನ್ನುವ ಆಶಾಭಾವನೆಯನ್ನು ಇಟ್ಟುಕೊಂಡು, ತಮ್ಮ ನಂಬಿಕೆ ಹಾಗು ವಿಶ್ವಾಸಕ್ಕೆ ಬದ್ಧನಾಗಿರುತ್ತೇನೆ ಎಂದು ಮತದಾರರಲ್ಲಿ ಆಶಾಭಾವನೆಯನ್ನು ಶರಣು ಪಾಟೀಲ ಮೋತಕಪಲ್ಲಿ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here