ಸಂವಿಧಾನ ಬದಲಾವಣೆ ಅಸಾಧ್ಯ: ನಿಜಗುಣಾನಂದ ಸ್ವಾಮೀಜಿ

0
204

ಕಲಬುರಗಿ: ಅಂಬೇಡ್ಕರ್ ಕೇವಲ ಮೀಸಲಾತಿಗೆ ಮಾತ್ರ ಹೋರಾಡಲಿಲ್ಲ. ಎಲ್ಲರಲ್ಲಿ ಆತ್ಮಾಭಿಮಾನ ಧೈರ್ಯ ತುಂಬಿದರು. ರಾಜಕೀಯ ಆಸೆಗಾಗಿ ಅಂಬೇಡ್ಕರ್ ಆಶಯವನ್ನು ಮರೆಯುತ್ತಿರುವುದು ದುರಂತದ  ಸಂಗತಿ ಎಂದು ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ನುಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ವತಿಯಿಂದ ನಗರದ ಎಸ್. ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸರ್ವ ಜನರ ಸಂವಿಧಾನ ಸಮಾವೇಶದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು ಮಾತನಾಡಿದರು.

Contact Your\'s Advertisement; 9902492681

ಬುದ್ಧ, ಬಸವ, ಅಂಬೇಡ್ಕರ್ ಅಭಿಮಾನಿಗಳಿದ್ದಾರೆ. ಆದರೆ ಅನುಯಾಯಿಗಳಿಲ್ಲ. ವೈದಿಕರಲ್ಲಿ ಅಭಿಮಾನಿಗಳಿಲ್ಲ. ಆದರೆ ಅನುಯಾಯಿಗಳಿದ್ದಾರೆ ಎಂದು ಹೇಳಿ, ಪಕ್ಷ ಯಾವುದಾಗಿದ್ದರೂ ಅಂಬೇಡ್ಕರ್ ಆಶಯಗಳಿಗೆ ಚ್ಯುತಿ ಬಂದಾಗ ಎಲ್ಲರೂ ಒಂದಾಗಿ ಪ್ರತಿಭಟನೆ ನಡೆಸಬೇಕಿದೆ. ವಿದ್ಯಾವಂತ ದಲಿತರು, ಹಳ್ಳಿಗೆ ವಾಪಸ್ಸು ಬಂದು ದಲಿತಕೇರಿಯ ಮನಸ್ಸು ಹಸನುಗೊಳಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ಇಂದಿನ ಪರಿಸ್ಥಿತಿ ಎಂದಿಗಿಂತಲೂ ಭೀಕರವಾಗಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಸೆ. 24ರಿಂದ ಹಾಸನದಿಂದ ಸರ್ವ ಜನರ- ಸಂವಿಧಾನ ಸಮಾವೇಶ ಹಮ್ಮಿಕೊಂಡು ಚಿಕ್ಕಮಗಳೂರು, ಚಾಮರಾಜ ನಗರ, ಮೈಸೂರು, ಉಡುಪಿ, ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲಿ ನಡೆಸಲಾಗಿದೆ. 2ನೇ ಹಂತದಲ್ಲಿ ಉಳಿದ ಜಿಲ್ಲೆಗಳಲ್ಲಿ ಸಮಾವೇಶ ನಡೆಸಲಾಗುವುದು.  – ಮಾವಳ್ಳಿ ಶಂಕರ, ರಾಜ್ಯ ಸಂಚಾಲಕರು, ದಸಂಸ, ಬೆಂಗಳೂರು

ಇನ್ನೊಬ್ಬರ ಜೊತೆ ಘರ್ಷಣೆ ಮಾಡುವುದಕ್ಕಿಂತ ಮೊದಲು ನಮ್ಮನ್ನು ನಾವು ಅರಿತುಕೊಳ್ಳುವ, ಅರ್ಥಮಾಡಿಕೊಳ್ಳುವ ಕೆಲಸ ಮಾಡಬೇಕು ಎಂದು ವಿವರಿಸಿದರು. ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ, ಸಾಹಿತಿ ಶಿವರಂಜನ್ ಸತ್ಯಂಪೇಟೆ ಮಾತನಾಡಿ, ನಮ್ಮ ದೇಶದ ಸಂಸತ್ತಿಗೆ ಅದರದ್ದೇ ಆದ ಘನತೆ, ಗೌರವ ಇದೆ. ಅಂಬೇಡ್ಕರ್ ರಚಿಸಿದ ಸಂವಿಧಾನವೇ ಭಾರತೀಯರೆಲ್ಲರ ಮಾನ ಕಾಪಾಡಿದೆ ಎಂದು ತಿಳಿಸಿದರು.

ಯಾವುದೇ ಧರ್ಮ ಇನ್ನೊಂದು ಧರ್ಮದ ಮೇಲೆ ಆಕ್ರಮಣ ಮಾಡಬಾರದು. ಧರ್ಮದ ಮೂಲ ತಳಹದಿ ದಯೆ, ಪ್ರೀತಿ, ವಿಶ್ವಾಸ ಆಗಿರಬೇಕು ಎಂದರು.

ಸಮಿತಿಯ ರಾಜ್ಯಪ್ರಧಾನ ಸಂಚಾಲಕ ಮಾವಳ್ಳಿ ಶಂಕರ ಉದ್ಘಾಟಿಸಿದರು. ರಮೇಶ ಡಾಕುಳಕಿ ಪ್ರಾಸ್ತಾವಿಕ ಮಾತನಾಡಿದರು. ಮಾರುತಿ ಹುಲ್ಲೂರ ಸ್ವಾಗತಿಸಿದರು. ರಾಜ್ಯ ಉಪ ಪ್ರಧಾನ ಸಂಚಾಲಕ ನಾಗಣ್ಣ ಬಡಿಗೇರ, ರಾಮಣ್ಣ ಕಲ್ಲದೇವನಹಳ್ಳಿ, ಅರ್ಜುನ ಗೊಬ್ಬುರ, ಸುರೇಶ ಸರ್ಮಾ, ಶರಣಬಸಪ್ಪ ಬಿ ಸುಗೂರು ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here