ಕಲಬುರಗಿ: ಕರ್ನಾಟಕದಲ್ಲಿ ಹಾಗೂ ಕೇಂದ್ರದಲ್ಲಿ ಮೊದಲು ಬಾರಿಗೆ ಬಾರತೀಯ ಜನತಾ ಪಕ್ಷದ ಸರ್ಕಾರ ವಿರುವುದರಿಂದ ಪ್ರಾಧಾನಿಗಳಾದ ನರೇಂದ್ರ ಮೋದಿಯವರು ಹಾಗೂ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಹಿರಿಯ ಜೀವಿಗಳಿಗೆ ಮಹತ್ತರವಾದ ಯೋಜನೆಗಳು ಪ್ರಕಟಿಸಿವೆ ಎಂದು ತಿಳಿಸಿದರು.
ಅವರು ಇಂದು ಜಿ.ಪಂ.ಸಭಾಂಗಣದಲ್ಲಿ ನಡೆದ ವಿಶ್ವ ಹಿರಿಯ-ನಾಗರಿಕರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕಲಬುರಗಿ ಲೋಕಸಭಾ ಸದಸ್ಯರಾದ ಡಾ. ಉಮೇಶ ಜಿ ಜಾಧವರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯೋಜನೆಗಳ ಸದಪಯೋಗವನ್ನು ಅಧಿಕಾರಿಗಳು ಅವರಿಗೆ ನ್ಯಾಯುತವಾಗಿ ಅವರ ಮನೆಗೆ ತಲುಪಿಸುವ ಕೆಲಸ ಆಧಿಕಾರಿಗಳು ಮಾಡಬೇಕೆಂದು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು, ಜಿಲ್ಲಾ ಅಂಗವೀಕಲರ ಅಧಿಕಾರಿ ಡಾ. ಮುನಿರ್ ಮುಂತಾದವರಿದ್ದರು.