ಕಲಬುರಗಿ: ನವಿಕರಿಸಬಹುದಾದ ಇಂಧನದ ಮೂಲಗಳಲ್ಲಿ ಸೌರಾಶಕ್ತಿ ಅತ್ಯಂತ ಪ್ರಮುಖವಾದದ್ದು. ಹೆಚ್ಚಿನ ಸೌರಶಕ್ತಿಯ ಬಳಕೆಯಿಂದ ಪೆಟ್ರೋಲಿಯಮ್ ಮತ್ತು ಕಲ್ಲಿದ್ದಲಿಂನಂತಹ ಮುಗಿದು ಹೋಗಿದು ಹೋಗುವ ಸಂಪನ್ಮೂಲಗಳ ಬಳಕೆ ಕಡಿಮೆ ಮಾಡಬಹುದು. ಇದರಿಂದ ನಾವು ಸಾಕಷ್ಟು ಸಂಪನ್ಮೂಲವನ್ನು ಉಳಿತಾಯ ಮಾಡಬಹುದು ಎಂದು ಕಲಬುರಗಿ ಶರಣಬಸವ ವಿಶ್ವವಿದ್ಯಾಲಯದ ಉಪನ್ಯಾಸಕ ಅಣ್ಣಾರಾವ ಪಾಟೀಲ ಹೇಳಿದರು.
ಅವರು ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಸೌರಶಕ್ತಿಯ ಅವಶ್ಯಕತೆ ಕುರಿತು ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ನಗರ ಪ್ರದೇಶಗಳಲ್ಲಿ ಸೌರಶಕ್ತಿಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡುತ್ತಿದೆ ಆದರೆ ಗ್ರಾಮೀಣ ಭಾಗದಲ್ಲಿ ಇದರ ಬಗ್ಗೆ ಹೆಚ್ಚಿನ ಅರಿವು ಮೂಡಬೇಕಾಗಿದೆ. ಕೇಂದ್ರ ಸರಕಾರ ನಾವಿಕರಿಸಬಹುದಾದ ಸಂಪನ್ಮೂಲಗಳ ಬಳಕೆಗೆ ಉತ್ತೇಜನ ನೀಡುತ್ತಿದೆ. ಭವಿಷ್ಯದಲ್ಲಿ ಸೌರಾಶಕ್ತಿಯೇ ಎಲ್ಲರ ಆಶಾಕಿರಣವಾಗಲಿದೆ ಎಂದರು.
ಕಾರ್ಯಕ್ರಮದ ನಂತರ ರಸಪ್ರಶ್ನೆ ಮಾಡಿ ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು. ಶರಣಬಸವ ಇಂಜಿನಿಯರ್ ಕಾಲೇಜಿನ 30 ವಿದ್ಯಾರ್ಥಿಗಳು ವಿಷಯ ಹಂಚಿಕೊಂಡರು.
ಕಾರ್ಯಕ್ರಮದ ಸಾನಿದ್ಯವನ್ನು ಸಂಸ್ಥೆಯ ಅಧ್ಯಕ್ಷ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು.
ಉಪನ್ಯಾಸಕರಾದ ಜ್ಯೋತಿ ಹರಸೂರ, ಶಿವಲೀಲಾ ಕoಠಿಕಾರ, ಈಶ್ವರಗೌಡ ಪಾಟೀಲ್, ಸಿದ್ದಲಿಂಗ ಬಾಳಿ, ಶಿವಕುಮಾರ ಸರಡಗಿ, ಸುಗುಣ ಕೊಳಕೂರ, ಭುವನೇಶ್ವರಿ ಎಂ. ಉಪಸ್ಥಿತರಿದ್ದರು.