ಸರ್ಕಾರಿ ಶಾಲಾ-ಕಾಲೇಜು, ಕಚೇರಿಗಳಲ್ಲಿ ಸೊಳ್ಳೆಗಳ ಮೂಲ ತಾಣ ನಾಶಪಡಿಸಲು ಸಿಇಓ ಕರೆ

0
43

ಕಲಬುರಗಿ; ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ನಿಯಂತ್ರಣ ನಿಟ್ಟಿನಲ್ಲಿ ಜುಲೈ 13 ಶನಿವಾರ ಬೆಳಿಗ್ಗೆ 8 ಗಂಟೆಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಸೊಳ್ಳೆಗಳ ಮೂಲ ತಾಣಗಳನ್ನು ಸಂಪೂರ್ಣವಾಗಿ ನಾಶಪಡಿಸುವ ಅಭಿಯಾನದಲ್ಲಿ ಎಲ್ಲರು ಭಾಗಿಯಾಗಬೇಕು ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಕರೆ ನೀಡಿದರು.

ಶುಕ್ರವಾರ ವಿಡಿಯೋ ಕಾನ್ಫೆರೆನ್ಸ್ ಮೂಲಕ ಆರೋಗ್ಯ ಇಲಾಖೆ ಸೇರಿದಂತೆ ಜಿಲ್ಲಾ ಪಂಚಾಯತ್ ಅಧೀನದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸಾಮಾನ್ಯವಾಗಿ ಈಡಿಸ್ ಸೊಳ್ಳೆಗಳು ದಿನದಲ್ಲಿ ಕಚ್ಚುತ್ತವೆ. ದಿನದಲ್ಲಿ ಬಹುತೇಕರು ತಮ್ಮ ತಮ್ಮ‌ ಕಚೇರಿ, ಕಾರ್ಖಾನೆ, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಮಕ್ಕಳು ಶಾಲಾ-ಕಾಲೇಜುಗಳಲ್ಲಿ ಇರುವುದರಿಂದ ಇಲ್ಲಿಯೆ ಡೆಂಗ್ಯೂ ಹರಡುವ ಸಾಧ್ಯತೆ ಹೆಚ್ಚಿದ್ದು, ಹೀಗಾಗಿ ಇಲ್ಲಿಂದ ಸೊಳ್ಳೆಗಳ ತಾಣ ನಿರ್ಮೂಲನೆಗೆ ಸರ್ವರು ಕೈ ಜೋಡಿಸಬೇಕೆಂದರು.

Contact Your\'s Advertisement; 9902492681

ಸಭೆಯಲ್ಲಿ ಡಿ.ಎಚ್.ಓ ಡಾ.ರತಿಕಾಂತ ಸ್ವಾಮಿ‌ ಸೇರಿದಂತೆ ತಾಲೂಕಾ ಪಂಚಾಯತ್ ಇ.ಓ ಗಳು, ಟಿ.ಎಚ್.ಓ ಗಳು ಹಾಗೂ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here