ಕಲಬುರಗಿ: 35 ಜನ ವಿಶೇಷಚೇತನರಿಗೆ ತ್ರಿಚಕ್ರ ವಾಹನ ವಿತರಿಸಿದ ಶಾಸಕ‌ ಅಲ್ಲಮಪ್ರಭು ಪಾಟೀಲ

0
425

ನಮ್ಮ ಸರ್ಕಾರದ ಅವಧಿಯಲ್ಲಿ ಎಲ್ಲಾ ಅರ್ಹರಿಗೂ ತ್ರಿಚಕ್ರ ವಾಹನ

ಕಲಬುರಗಿ: ನಮ್ಮ ಸರ್ಕಾರದ ಅವಧಿಯಲ್ಲಿ ಗುಲಬರ್ಗಾ ದಕ್ಷಿಣ ಕ್ಷೇತ್ರದ ಎಲ್ಲ ಅರ್ಹ ವಿಶೇಷಚೇತನರಿಗೆ ಸುಗಮವಾಗಿ ಓಡಾಟಕ್ಕೆ‌ ತ್ರಿಚಕ್ರ ವಾಹನ ವಿತರಣೆ‌ ಮಾಡಲಾಗುವುದು ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.

ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ 2020-21ನೇ ಸಾಲಿನ ಡಿ.ಎಂ.ಎಫ್ ನಿಧಿಯಡಿ 35 ಜನ ವಿಶೇಷಚೇತನರಿಗೆ ತಲಾ 97 ಸಾವಿರ ರೂ. ಮೊತ್ತದ ತ್ರಿಚಕ್ರ ವಾಹನ ವಿತರಣೆ ಮಾಡಿ ಮಾತನಾಡಿದರು.

Contact Your\'s Advertisement; 9902492681

ಹಿಂದೆ ತಾವು ವಿಧಾನ ಪರಿಷತ್ ಶಾಸಕ ಮತ್ತು ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೂ ವಿಶೇಷ ಕಾಳಜಿ ವಹಿಸಿ ತ್ರಿಚಕ್ರ ವಾಹನ ವಿತರಣೆ ಮಾಡಿದ್ದೆ. ಈಗಲೂ ಸಹ ಅದನ್ನು ಮುಂದುವರೆಸಿದ್ದೇನೆ. ಮುಂದಿನ ಹಂತದಲ್ಲಿ ಉಳಿದ ಅರ್ಹ ವಿಶೇಷಚೇತನರಿಗೆ ವಾಹನ ವಿತರಣೆ ಮಾಡಲಾಗುವುದು. ಬಡವರ ಪರ ಸರ್ಕಾರ ನಮ್ಮದು ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಪಂಚ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಮಹಾನಗರ ಪಾಲಿಕೆ ಸದಸ್ಯರಾದ ರಾಜಕೀಯ ಇನಾಂದಾರ, ರಾಜು ಜಾನೆ, ಶೇಖ್ ಹುಸೇನಿ, ನಿಂಗಮ್ಮ ಕಟ್ಟಿಮನಿ, ರೇಣುಕಾ ಪಿ. ಹೋಳ್ಕರ್. ಲತಾ ರಾಠೋಡ, ಮುಖಂಡರಾದ ನೀಲಕಂಠ ಮೂಲಗೆ, ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್, ಹೀರೋ ಶೋರೂಮ್ ಅಧಿಕಾರಿ ದೇವರಾಜ ಬಿ. ಕುಲಕರ್ಣಿ, ಅಂಗವಿಕಲರ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ ಪ್ರಕಾಶ ಜಾಧವ, ಅಫಜಲ್, ಮೇಘಾಂಜಲಿ, ಪ್ರಕಾಶ ದ್ಯಾಬೇರಿ, ಪ್ರಕಾಶ ಜಗತಿ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here