ಕಲಬುರಗಿದ್ಯಂತ 2.90 ಲಕ್ಷ ಜಾನುವಾರುಗಳಿಕೆ ಲಸಿಕೆ: ಡಾ.ಎಸ್.ಡಿ.ಅವಟಿ

0
21
Dairy farm, simmental cattle, feeding cows on farm

ಕಲಬುರಗಿ; ಕಲಬುರಗಿ ಜಿಲ್ಲೆಯಾದ್ಯಂತ ಕಳೆದ‌ಜೂನ್ 20 ರಂದು ಆರಂಭಗೊಂಡು ಇದೇ ಜುಲೈ 20ರ ವರೆಗೆ ನಡೆಯುವ ಜಾನುವಾರುಗಳಿಗೆ ಲಸಿಕಾಕರಣ ಕಾರ್ಯಕ್ರಮದಡಿ ಇದೂವರೆಗೆ 3,61,700 ಜಾನುವಾರುಗಳ ಪೈಕಿ 2,90,000 ಜನುವಾರುಗಳಿಗೆ ಚರ್ಮಗಂಟು ರೋಗದ ವಿರುದ್ಧ ಉಚಿತ ಲಸಿಕೆ ಹಾಕಿಸಲಾಗಿದೆ ಎಂದು ಪಶುಸಂಗೋಪನಾ ಹಾಗೂ ಪಶುಪಾಲನಾ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಡಿ.ಅವಟಿ ತಿಳಿಸಿದ್ದಾರೆ.

ಇದಲ್ಲದೆ ಆಡು/ ಕುರಿಗಳಿಗೆ ಕರಳು ಬೇನೆ ರೋಗದ ವಿರುದ್ಧ ಉಚಿತ ಲಸಿಕೆ ಸಹ ನೀಡಲಾಗುತ್ತಿದ್ದು, ಇದೂವರೆಗೆ ಜಿಲ್ಲೆಯಲ್ಲಿ 5,25,000 ಆಡು/ ಕುರಿಗಳ ಪೈಕಿ 4,25,000 ಆಡು/ ಕುರಿಗಳಿಗೆ ಲಸಿಕೆ ಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಇನ್ನು ತುರದತು ಸಂದರ್ಭಗಳಲ್ಲಿ ಮನೆ ಬಾಗಿಲಿಗೆ ಹೋಗಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಜಿಲ್ಲೆಯಾದ್ಯಂತ ಗುತ್ತಿಗೆ ಆಧಾರದ ಮೇಲೆ ತಾಲೂಕಿಗೆ ಒಂದರಂತೆ ಒಟ್ಟು 11 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು (1962) ನೀಡಲಾಗಿದ್ದು, ಇದರ ನಿರ್ವಹಣೆ ಜವಾಬ್ದಾರಿ ಎಜುಸ್ಪಾರ್ಕ್ ಪ್ರೈ.ಲಿ. ಕಂಪನಿ ವಹಿಸಿಕೊಂಡಿದೆ ಎಂದಿರುವ ಅವರು ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಉಪ ನಿರ್ದೇಶಕರ ಪ್ರಕಾರ ಜಿಲ್ಲೆಯಲ್ಲಿ 216 ಅಲೆಮಾರಿ ಕುರಿಗಾರರಿದ್ದು, ಅವರಿಗೆ ಇನ್ನು ಗುರುತಿನ ಚೀಟಿ ನೀಡಿರುವುದಿಲ್ಲ ಎಂದು ಅವರು‌ ಸ್ಪಷ್ಟಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here