ಸುರಪುರ: ನಮ್ಮ ತಂದೆಯವರು ಯಾವಾಗಲೂ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವುದನ್ನು ನಾನು ನೋಡಿದ್ದೇನೆ,ಅವರಂತೆ ನಾನು ಕೂಡ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ನಗರದ ರಂಗಂಪೇಟೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿ,ಪ್ರತಿಯೊಬ್ಬ ವ್ಯಕ್ತಿಗೆ ಶಿಕ್ಷಣ ಎನ್ನುವುದು ತುಂಬಾ ಮುಖ್ಯವಾಗಿದೆ.ದೊಡ್ಡವರಾದ ಮೇಲೆ ಡಾಕ್ಟರ್ ಇಂಜಿನಿಯರ್ ಏನಾದರು ಆಗಬಹುದು ಆದರೆ ಪ್ರಾಥಮಿಕ ಹಂತದಲ್ಲಿ ದೊರೆಯುವ ಶಿಕ್ಷಣ ತುಂಬಾ ಮುಖ್ಯವಾಗಿದೆ ಎಂದರು.
ಅಲ್ಲದೆ ಈ ಶಾಲೆಗೆ ಕಂಪೌಂಡ್ ತುಂಬಾ ಅಗತ್ಯವಾಗಿರುವುದು ಗಮನಕ್ಕೂ ತಂದಿರುವಿರಿ,ಅಲ್ಲದೆ ನಾನು ಕೂಡ ಗಮನಿಸಿದ್ದೇನೆ,ಆದ್ದರಿಂದ ಶೀಘ್ರದಲ್ಲಿಯೇ ಕಂಪೌಂಡ್ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ಸಿದ್ದಣ್ಣ ಹೊಸಗೌಡರ್ ಹಾಗೂ ಎಸ್‍ಡಿಎಮ್‍ಸಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಶಾಲೆಗೆ ಅಗತ್ಯ ಪೀಠೋಪಕರಣಗಳನ್ನು ಒದಗಿಸುವಂತೆ ಮನವಿ ಸಲ್ಲಿಸಿದರು.ಕಾರ್ಯಕ್ರಮದ ಆರಂಭದಲ್ಲಿ ಶಾಸಕರು ಆಗಮಿಸುತ್ತಿದ್ದಂತೆ ಶಾಲಾ ಮಕ್ಕಳು ಶಾಸಕರಿಗೆ ಹೂ ಚೆಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದರು.ನಂತರ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನೆ ನೆರವೇರಿಸಿ,ನಂತರ ಶಿಲಾಫಲಕ ಅನಾವರಣಗೊಳಿಸಿ ಸರಸ್ವತಿ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಇದೇ ಸಂದರ್ಭದಲ್ಲಿ ಎಸ್‍ಡಿಎಮ್‍ಸಿ ವತಿಯಿಂದ ಶಾಸಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ,ನಯೋಪ್ರಾ ಮಾಜಿ ಅಧ್ಯಕ್ಷ ರಾಜಾ ವಾಸುದೇವ ನಾಯಕ,ವೆಂಕೋಬ ಯಾದವ್,ಮಲ್ಲಣ್ಣ ಸಾಹು ನರಸಿಂಗಪೇಟ,ರಾಜಾಆ ಸುಶಾಂತ ನಾಯಕ,ಗ್ಯಾನಚಂದ್ ಜೈನ್,ಬಿಇಓ ಯಲ್ಲಪ್ಪ ಕಾಡ್ಲೂರ,ಅಬ್ದುಲ್ ಗಫೂರ ನಗನೂರಿ,ನಗರಸಭೆ ಸದಸ್ಯ ನಾಸೀರ ಕುಂಡಾಲೆ,ಮಲ್ಲೇಶಿ,ಸುವರ್ಣ ಸಿದ್ರಾಮ ಎಲಿಗಾರ,ಶೇಖ ಮಹಿಬೂಬ ಒಂಟಿ,ನಾಗಪ್ಪ ಕಟ್ಟಿಮನಿ,ಲಕ್ಷ್ಮೀ ಮಲ್ಲು ಬಿಲ್ಲವ್,ಅಬ್ದುಲ್ ಅಲೀಂ ಗೋಗಿಪಿಡಬ್ಲ್ಯೂಡಿ ಎಇಇ ಎಸ್.ಜಿ ಪಾಟೀಲ್,ಗುತ್ತೇದಾರ ರಾಜು ಮಹೇಂದ್ರಕರ್,ಸಿಆರ್‍ಪಿ ಚನ್ನಪ್ಪ ಕ್ಯಾದಗಿ ಸೇರಿದಂತೆ ಅನೇಕರಿದ್ದರು.ಶಾಲೆಯ ಉಪ ಪ್ರಾಂಶುಪಾಲ ಸಿದ್ದಣ್ಣ ಹಿಸಗೌಡರ್ ಪ್ರಾಸ್ತಾವಿಕವಾಗಿ ಮಾತನಾಡಿದರು,ಶ್ರೀನಿವಾಸ ಕುಲಕರ್ಣಿ ನಿರೂಪಿಸಿದರು,ರಾಜಶೇಖರ ಹುಟಗೂರ ಸ್ವಾಗತಸಿದರು,ಮಲ್ಲಣ್ಣ ಮಾರ್ಪನಳ್ಳಿ ವಂದಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ 2 ಕೋಟಿ 50.70 ಲಕ್ಷ ರೂಪಾಯಿಗಳ ಅನುದಾನದಲ್ಲಿ ಸುಸಜ್ಜಿತವಾದ ಶಾಲೆ ನಿರ್ಮಾಣ ಮಾಡಲಾಗಿದ್ದು,11 ಕೊಣೆಗಳು ಹಾಗೂ 1 ಬಯಲು ಮಂಟಪ ನಿರ್ಮಾಣ ಮಾಡಲಾಗಿದೆ.ನೀರು ಸರಬರಾಜು ಮತ್ತು ಒಳಚರಂಡಿ ಸಂಪ್ ಟ್ಯಾಂಕ್ ಮತ್ತು ಸೆಪ್ಟಿಕ್ ಟ್ಯಾಂಕ್ ನಿರ್ಮಾಣ,ವಿದ್ಯುತ್ ಸಂಪರ್ಕ,ಬೊರವೆಲ್ ಮತ್ತು ಪಂಪಸೆಟ್ ಅಳವಡಿಸಬೇಕಿದೆ.