ಕಲಬುರಗಿ: ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ ವೇಳೆ ಜೀಪ್ ಪಲ್ಟಿಹೊಡೆದ್ದು ಇಬ್ಬರ ಸ್ಥತಿ ಚಿಂತಜನಕವಾಗಿ, 10ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಚಿಂಚೋಳಿ ಹೊರವಲಯದ ಪ್ರಿಂಸ್ ಧಾಬಾದ ತೀರುವಿನ ಹತ್ತಿರ ಶನಿವಾರ ನಡೆದಿದೆ.
ಚಿಂಚೋಳಿ ತಾಲ್ಲೂಕಿನ ಪೊಲಕಪಲ್ಲಿ ಗ್ರಾಮದ ನಿವಾಸಿಳಾದ ಲಕ್ಷ್ಮೀ, ಇಂದ್ರಮ್ಮಾ, ನರ್ಸಮ್ಮಾ, ರೇಸ್ಮಾ, ಕವಿತಾ, ಲಲಿತಾ ಮತ್ತು ಇಬ್ಬರು ಮಕ್ಕಳು ಸೇರಿದಂತೆ 13 ಜನ ಜೀಪ್ ನಲ್ಲಿ ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಇಬ್ಬರ ಸ್ಥತಿ ಚಿಂತಜನಕವಾಗಿದ್ದು, ಹತ್ತಕ್ಕೂ ಹೆಚ್ಚು ಮಂದಿಗೆ ಸಣ್ಣಪುಟಗಾಯಗಳಾಗಿವೆ. ಗಾಯಾಳುಗಳನ್ನು ಚಿಂಚೋಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪೊಲಕಪಲ್ಲಿಯಿಂದ ಶಿಕಾರಮೊತ್ತಕಪಲಿ ಗ್ರಾಮದ ಸಂಬಂಧಿಕನ ಅಂತ್ಯಕ್ರಿಯೆಗೆಂದು ಜೀಪ್ ನಲ್ಲಿ ತೆರಳುತ್ತಿರುವಾ ಪ್ರಿಂಸ್ ಧಾಬಾದ ಹತ್ತಿರ ತೀರುವುನಲ್ಲಿ ಚಾಲಕ ನಿಯಂತ್ರಣ ತಪ್ಪಿ ಜೀಪ್ ಪಲ್ಟಿಯಾಗಿದೆ. ಅಪಘಾತದಲ್ಲಿ ಜೀಪ್ ಎರಡು ಮೂರು ಪಲ್ಟಿ ಹೊಡೆದಿದೆ ಎಂದು ಹೇಳಲಾಗುತ್ತಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ, ಚಿಂಚೋಳಿ ಪೊಲೀಸ್ ಠಾಣೆಯ ಸಿಪಿಐ ಮತ್ತ ಪಿಎಸ್ಐ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.