ಶಾಸಕ ಡಾ. ಅಜಯಸಿಂಗ್ ಗೆ ಘೇರಾವ್ : ಮುತ್ತುಕೊಡ ಕೆರೆ ಉಳಿಸಲು ಒತ್ತಾಯ

0
108

ಜೇವರ್ಗಿ: ಮುತ್ತುಕೊಡ ಗ್ರಾಮದ ಕೆರೆ ಅಕ್ರಮ ಒತ್ತುವರಿ ಹಾಗೂ ಸರಕಾರದ ನಿಗಮದ ಹಣ ದುರುಪಯೋಗ ಸೇರಿದಂತೆ ಖೊಟ್ಟಿ ದಾಖಲೆ ಸೃಷ್ಟಿ ಮಾಡಿ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಅಕ್ರಮಕ್ಕೆ ಒತ್ತಾಯಿಸಿ ಹೋರಾಟಗಾರರು ಶಾಸಕರಾದ ಡಾ ಅಜಯಸಿಂಗ್ ಅವರು ಚಲಿಸುತ್ತಿದ್ದ ವಾಹನವನ್ನು ತಡೆದು ಇಲ್ಲಿನ ಬಿಜಾಪುರ ಕ್ರಾಸ್ ಹತ್ತಿರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಖೊಟ್ಟಿ ದಾಖಲೆ ಸೃಷ್ಟಿ ಮಾಡಿ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಅಕ್ರಮ ಮಾರ್ಗವಾಗಿ ದಾಸ್ತಾವೇಜು ಮಾಡಿಕೊಂಡಿರು ವ್ಯಕ್ತಿ ವಿರುದ್ಧ ಕ್ರಮ ಜರುಗಿಸುವಂತೆ ಶಾಂತಿಯುತವಾಗಿ ತಹಸೀಲ್ ಕಾರ್ಯಾಲಯದ ಹೋರಾಟ ಮಾಡಿದರು.

Contact Your\'s Advertisement; 9902492681

ಈ ಕುರಿತಂತೆ ಹಲವಾರು ಬಾರಿ ಇಲ್ಲಿನ ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸುವಂತೆ ಮನವಿ ಸಲ್ಲಿಸಿದರು ಪ್ರಯೋಜನಕ್ಕೆ ಬಂದಿಲ್ಲ, ತಾಲೂಕ ಆರಕ್ಷಕ ವೃತ್ತ ನಿರೀಕ್ಷಕರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು ಸಹ ಇದಕ್ಕೆ ಗಮನಹರಿಸಿಲ್ಲ, ಹಾಗೂ ಡಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಈ ಕುರಿತಂತೆ ಯಾವುದೇ ಸೂಕ್ತ ಕ್ರಮವನ್ನು ಕೈಗೊಳ್ಳುತ್ತಿಲ್ಲ, ಹಾಗೂ ಇಲ್ಲಿನ ಜೇವರ್ಗಿ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಹಗಲುದರೋಡೆ ನಡೆಯುತ್ತಿದ್ದು ಅಕ್ರಮವಾಗಿ ದಾಸ್ತೇವೇಜು ಮಾಡಿ ಅಕ್ರಮ ರೀತಿಯಲ್ಲಿ ಆಸ್ತಿ ವರ್ಗಾವಣೆ ಮಾಡಿದ್ದು  ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿನ ಒತ್ತಾಯಿಸಿದ್ದಾರೆ.

ಕೆರೆ ಉಳಿಯಬೇಕು ಹಾಗೂ ಪರಿಶಿಷ್ಟ ಜಾತಿ ಪಂಗಡದ ಫಲಾನುಭವ ಹೆಸರಿನಲ್ಲಿ ಜಮೀನು ನೋಂದಣಿ ಮಾಡಿದಂತೆ ನಾಟಕವಾಡಿ ಮತ್ತೆ ಅದನ್ನು ತಮ್ಮ ಹೆಸರಿಗೆ ಮಾಡಿಕೊಂಡ ಊರಿನ ವ್ಯಕ್ತಿಯ ಮೇಲೆ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಯಿತು.

ಜಾಗವನ್ನು ಕೆರೆ ಅಭಿವೃದ್ಧಿಗಾಗಿ ಬಿಟ್ಟುಕೊಡಲಾಗಿದ್ದು ಸರಕಾರದಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಕೆರೆ ಕಾಮಗಾರಿ ಮಾಡಲಾಗಿದ್ದು ಮತ್ತೆ ಅದೇ ಕೆರೆಯ ಜಾಗವನ್ನು ಕಂದಾಯ ಇಲಾಖೆ ಅಧಿಕಾರಿಗಳು ಕೃಷಿಗೆ ಯೋಗ್ಯವಾಗಿದೆ ಎಂದು ಹೇಳಿ ನಿಗಮಕ್ಕೆ ಮಾರಾಟ ಮಾಡಲು ಪ್ರೋತ್ಸಾಹ ನೀಡಿದ್ದು ,ಇಲ್ಲಿ ಸರ್ಕಾರಿ ಇಲಾಖೆಯ ಎಲ್ಲಾ ಅಧಿಕಾರಿಗಳು ಸೇರಿದಂತೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ಇದರಲ್ಲಿ ಪರೋಕ್ಷ ರೀತಿಯಲ್ಲಿ ಪಾಲ್ಗೊಂಡಿದ್ದು ಸರ್ಕಾರಿ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಯಿತು.

ಮಾತಿನ ಚಕುಮಕಿ ಅರ್ಧ 15 ನಿಮಿಷ ರಸ್ತೆ ತಡೆ ಪ್ರತಿಭಟನಾಕಾರರ ಮನವೊಲಿಕೆ: ಬಿಜಾಪುರ ಹತ್ತಿರ ಹೋರಾಟಗಾರರು ಹಾಗೂ ಶಾಸಕರ ಮಧ್ಯದಲ್ಲಿ 15 ನಿಮಿಷಗಳ ಕಾಲ ಮಾತಿನ ಚಟುವಕಿ ನಡೆಯಿತು ನಂತರ ಪ್ರತಿ ಪಟನಾಕಾರರ ಮನವೊಲಿಸಿದ ಶಾಸಕ ಡಾ. ಅಜಯ್ ಸಿಂಗ್ ಜೇವರ್ಗಿ ತಹಸಿಲ್ ಕಾರ್ಯಾಲಯದಲ್ಲಿ ಸಭೆ ನಡೆಸಿದರು.

ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಂಬಂಧಪಟ್ಟ ನೆಲೋಗಿ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಹಾಗೂ ಜೇವರ್ಗಿಯ ವೃತ್ತ ನಿರೀಕ್ಷಕರು ಇವರಿಗೆ ನಿರ್ದೇಶನವನ್ನು ನೀಡಿದರು.

ಕಾನೂನನ್ನು ಮೀರಿ ಅಕ್ರಮವಾಗಿ ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರ ಮೇಲು ಯಾವುದೇ ಮುಲಾಜಿ ಇಲ್ಲದೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು. ಅಲ್ಲದೆ ಅಕ್ರಮ ದಾಸ್ತಾವೇಜು ಹಾಗೂ ಆಸ್ತಿ ವರ್ಗಾವಣೆ ಕುರಿತು ಕ್ರಿಮಿನಲ್ ಮೋಕದ್ದಮೆ ದಾಖಲಿಸುವಂತೆ ನಿರ್ದೇಶನ ನೀಡಿದ್ದಾರೆ.

ಪ್ರತಿಭಟನೆ ನೇತೃತ್ವವನ್ನು ದಲಿತ ಹಕ್ಕುಗಳ ಆಂದೋಲನದ ಮುಖಂಡರಾದ ಮಹೇಶ್ ಕುಮಾರ್ ರಾಠೋಡ ಸೇರಿದಂತೆ, ಬಾಬು ಬಿ ಪಾಟೀಲ್ ಮುತ್ತುಕೋಡ, ಸಿ.ಪಿ.ಐ ಪಕ್ಷದ ಕಾರ್ಯದರ್ಶಿ ಮಲ್ಲಿಕಾರ್ಜುನ್ ದೊಡ್ಮನಿ, ಜಿಲ್ಲಾ ಮುಖಂಡರಾದ ಪ್ರಭುದೇವ ಯಳಸಂಗಿ ಹಾಗೂ ಭೀಮಾಶಂಕರ್ ಮಾಡಿಯಾಳ, ಸೇರಿದಂತೆ ಇಬ್ರಾಹಿಂ ಪಟೇಲ್ ಯಾಳವಾರ, ಗುರುನಾಥ್ ಸಾಹು ರಾಜವಾಳ ಹಾಗೂ ಮುತ್ತುಕೊಡ ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here