ಕಲಬುರಗಿ: ಜಿಲ್ಲೆಯ ಜೀವಜಲವಾಗಿರುವ ಭೀಮಾ ನದಿ ವರ್ಷದಿಂದ ವರ್ಷಕ್ಕೆ ಕಲುಷಿತಗೊಳ್ಳುತ್ತಿವುದರ ಜೊತೆಗೆ ಅಳಿವಿನ ಅಂಚಿಗೆ ಚಿಗೆ ತಲುಪುತ್ತಿದೆ. ಅತಿಯಾದ ಅಕ್ರಮ ಮರಳು ಸಾಗಾಟ, ಪ್ಲಾಸ್ಟಿಕ್ ತ್ಯಾಜ್ಯವನ್ನು ನದಿಗೆ ಬಿಡುವುದರಿಂದ ನಾನಾರೋಗಗಳು ಕೂಡ ಕಾಣಿಸಿಕೊಂಡ ಘಟನೆಗಳು ನಡೆದಿವೆ. ಹೀಗಾಗಿ ಸಂವಾದ ಯುವ ಸಂಪನ್ಮೂಲ ಕೇಂದ್ರ ಮತ್ತು ಕರ್ನಾಟಕ ಯುವ ಮುನ್ನಡೆ ತಂಡವು ಜೇವರ್ಗಿ ತಾಲೂಕಿನಾದ್ಯಾಂತ ಭೀಮಾ ನದಿ ಸಂರಕ್ಷಣೆ ಕುರಿತು ಅಭಿಯಾನ ಮಾಡುತ್ತ ಪರಿಸರ ನ್ಯಾಯದ ಅರಿವು ಮೂಡಿಸುತ್ತಿದ್ದಾರೆ.
ಜೇವರ್ಗಿಯ ಹಲವಾರು ಕಾಲೇಜುಗಳು ಸೇರಿದಂತೆ ಭೀಮಾ ಬ್ರಿಜ್ ಕಟ್ಟಿ ಸಂಗಾವಿ ಹಾಗೂ ಹಲವು ಗ್ರಾಮಗಳಲ್ಲಿ ಪ್ರತಿಯೊಬ್ಬರಿಗೂ ಸಸಿಗಳನ್ನು ನೀಡುವ ಮೂಲಕ ಗಿಡ ಮರ ಉಳಿಸುವಂತೆ ಅರಿವಿನ ಹಾಡುಗಳನ್ನು ಹಾಡುತ್ತ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಸಂವಾದ ಯುವ ಸಂಪನ್ಮೂಲ ಕೇಂದ್ರ ಮತ್ತು ಕರ್ನಾಟಕ ಯುವ ಮುನ್ನಡೆ ತಂಡದ ಮುಂದಾಳುಗಳಾದ ಅನುರಾಗ, ರಾಜಶ್ರೀ, ಅಶ್ಮಿತಾ, ವಿಜಯ್, ಶಾಂತು, ಸಾನ್ವಿ ಮುಂತಾದವರು ಪಾಲ್ಗೊಂಡಿದ್ದರು.