ಸಂವಿಧಾನದ ನಾಲ್ಕನೆ ಅಂಗ ಪತ್ರಕರ್ತರ ನಿರ್ಲಕ್ಷ್ಯ ಸಲ್ಲದು : ಶಶೀಲ್ ಜಿ ನಮೋಶಿ

0
131

ಪತ್ರಕರ್ತರಿಗೆ ಮಾಶಾಸನ, ದ್ವಿಚಕ್ರ ವಾಹನ ನಿರ್ವಹಣೆಗೆ/ ಖರೀದಿಗೆ ಅನುದಾನಕ್ಕೆ ನಮೋಶಿ ಒತ್ತಾಯ

ಕಲಬುರಗಿ: ಸಮಾಜದ ಸರಿ ತಪ್ಪುಗಳನ್ನು ಯತಾವತ್ ಆಗಿ ಜನಗಳ ಮುಂದಿಡುವ ಪತ್ರಕರ್ತರು ಸಮಾಜದ ಅತಿ ಮುಖ್ಯ ವರ್ಗವಾಗಿದೆ ಹಾಗು ಸಮಾಜದ ಏಳಿಗೆಯಲ್ಲಿ ಇವರುಗಳ ಪಾತ್ರ ಪ್ರಮುಖವಾಗುತ್ತದೆ ಹಾಗೆಯೇ ಪತ್ರಕರ್ತರ ಏಳಿಗೆಯ ಕುರಿತು ಸರ್ಕಾರದ ಕ್ರಮಗಳ ಕುರಿತು ವಿಧಾನ ಪರಿಷತ್ತಿನಲ್ಲಿ ಪ್ರಶ್ನಿಸಲಾಗಿ ಸರ್ಕಾರದ ಉತ್ತರವನ್ನು ನೋಡಿದರೆ ನಿವೃತ್ತ ಪತ್ರಕರ್ತರಿಗೆ ನೀಡುವ 2000 ಹೆಚ್ಚಳ ಬಿಟ್ಟರೆ ಈ ಹಿಂದಿನಿಂದ ಬಂದಂತಹ ಬಸ್ ಪಾಸ್ ಸೌಕರ್ಯ ಬಿಟ್ಟರೆ ನಂತರದಲ್ಲಿ ಯಾವುದೇ ಸೌಕರ್ಯ ನೀಡದಿರುವುದು ಪತ್ರಕರ್ತರ ಕಡೆಗಣನೆ ಎದ್ದು ಕಾಣುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಹೇಳಿದ್ದಾರೆ.

ಮುಖ್ಯ ಮಂತ್ರಿಗಳು ನನ್ನ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉತ್ತರಿಸುತಿದ್ದು ಗ್ರಾಮೀಣ ಭಾಗದಲ್ಲಿ ಸಾರಿಗೆ ವ್ಯವಸ್ಥೆಯ ಸರಿಯಾಗಿ ನಿರ್ವಹಸದಿರುವ ಸಮಯದಲ್ಲಿ ಇದು ಅವೈಜ್ಞಾನಿಕ ಎಂದೆನಿಸುತಿದ್ದು ಇದರ ಬದಲು ಸ್ಥಳೀಯ ಪತ್ರಕರ್ತರನ್ನು ಗುರುತಿಸಿ ಅವರಿಗೆ ಮಾಶಾಸನವನ್ನು ಹಾಗು ದ್ವಿಚಕ್ರ ವಾಹನ ನಿರ್ವಹಣೆಗೆ/ ಖರೀದಿಗೆ ಅನುದಾನ ನೀಡಬೇಕು ಹಾಗೂ ಮಾಸಾಶನ ನೀಡಲು ಇರುವ ನಿಯಮ ಅವೈಆಗ್ರಹಿಸಿದ್ದಾರೆ.ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ನಿಯಮ ಸರಳೀಕರಣ ಮಾಡಬೇಕು. ಮಾನ್ಯತೆ ಪಡೆದ ಅರ್ಹ ಪತ್ರಕರ್ತರಿಗೆ ಸರ್ಕಾರ ರಿಯಾಯಿತಿ ದರದಲ್ಲಿ ನಿವೇಶನ ಹಂಚಿಕೆ ಮಾಡ ಬೇಕು. ಪತ್ರಕರ್ತರ ಯೋಗಕ್ಷೇಮ ನೋಡಿಕೊಳ್ಳು ಹಣ ಮೀಸಲಿಟ್ಟು ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವ ಮೂಲಕ ಪತ್ರಕರ್ತರ ಪರ ಸರ್ಕಾರ ನಿಲ್ಲಬೇಕಿದೆ ಎಂದು ಒತ್ತಾಯಿಸಿದ್ದಾರೆ.

ನಿಯಮಿತ ವರಮಾನವಿಲ್ಲದ ಪತ್ರಕರ್ತರಿಗೆ ಬ್ಯಾಂಕ್ ಗಳಲ್ಲಿ ಸಾಲ ನೀಡಲೂ ಹಿಂದೇಟು ಹಾಕುತಿದ್ದು ಪತ್ರಿಕೋದ್ಯಮದಲ್ಲಿ ಹೊಸ ಅವಕಾಶಗಳಿಗೆ ಸರ್ಕಾರದಿಂದ ಸೂಕ್ತ ಆರ್ಥಿಕ ಸೌಲಭ್ಯ ನೀಡುವ ಕುರಿತು ಸರ್ಕಾರದ ಸೂಕ್ತ ನಿರ್ಧಾರ ತೆಗೆದುಕೊಂಡು ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಮತ್ತು ಚುನಾವಣೆಯ ಸಮಯದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ ಪತ್ರಕರ್ತರ ಯೋಗಕ್ಷೇಮಕ್ಕಾಗೆ ಎಲ್ಲ ಯೋಜನೆ ಜಾರಿಗೊಳಿಸಲು ಅವರು ಸರಕಾರಕ್ಕೆ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here