- ಎಂ.ಡಿ ಮಶಾಖ ಚಿತ್ತಾಪುರ
ಚಿತ್ತಾಪುರ: ತಾಲೂಕಿನ ರಂಗಭೂಮಿಯ ಯುವ ಕಲಾವಿದರ ನೇತೃತ್ವದಲ್ಲಿ ಹೊಸದಾಗಿ ನಾಗಾವಿ ನಾಡು ನಾಟ್ಯ ಸಂಘ ಅಸ್ತಿತ್ವಕ್ಕೆ ಬಂದಿದ್ದು ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾಗಿ ಚಂದರ್ ಚವ್ಹಾಣ, ಉಪಾಧ್ಯಕ್ಷರಾಗಿ ಭೀಮಾಶಂಕರ ಕೋಲಕುಂದಿ ಹಲಕಟ್ಟಿ, ಕಾರ್ಯದರ್ಶಿಯಾಗಿ ಕಾಶಿನಾಥ ಬಿರಾದಾರ ಬೆಳಗುಂಪಾ ಆಯ್ಕೆಯಾಗಿದ್ದಾರೆ.
ಬರುವ ದಿನಗಳಲ್ಲಿ ಇನ್ನೂ 40 ಕ್ಕೂ ಹೆಚ್ಚು ಕಲಾವಿದರನ್ನು ಆಯ್ಕೆ ಮಾಡಲಾಗುತ್ತದೆ ಹಾಗೂ ಪ್ರತಿ ವರ್ಷ ರಾಷ್ಟ್ರಕೂಟರ ಕುಲದೇವತೆ ಯಾದ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಜಾತ್ರೆಯ ನಿಮಿತ್ತವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಜೊತೆಗೆ ನಾಟಕ ಪ್ರದರ್ಶನ ಮಾಡಲಾಗುವುದು ಎಂದು ನೂತನ ಅಧ್ಯಕ್ಷ ಚಂದರ ಚವ್ಹಾಣ ತಿಳಿಸಿದ್ದಾರೆ.