ಕಲಬುರಗಿ: ನಗರದ ಬಿದ್ದಾಪೂರ ಕಾಲೋನಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷರು ಹಾಗೂ ರಾಜ್ಯ ಸಭೆಯ ವಿರೋದ ಪಕ್ಷದ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದ ನಿಮಿತ್ತ ದೇವೇಂದ್ರಪ್ಪ ಮರತೂರ ಅಭಿಮಾನಿ ಬಳಗದ ವತಿಯಿಂದ ನಿರ್ಗತಿಕರಿಗೆ ಅನ್ನದಾಸೋಹ ಹಾಗೂ ಹಣ್ಣು ಹಂಪಲ ವಿತರಿಸಲಾಯಿತು.
ಮುಖಂಡರಾದ ಅಭಿಷೇಕ್ ಅಲ್ಲಂಪ್ರಭು ಪಾಟಿಲ, ಶಿವಾನಂದ್ ಹೊನಗುಂಟಿ, ನೀಲಕಂಠ ಜಗದೇವ ಗುತ್ತೇದಾರ್, ಪ್ರದೀಪ್ ಪಾಟೀಲ್ ಹರವಾಳ, ಪ್ರವೀಣ್ ದೇವೇಂದ್ರಪ್ಪ ಮರತೂರ, ಪರಶುರಾಮ ನಾಟೀಕಾರ, ಲಕ್ಷ್ಮಣ ಪೂಜಾರಿ, ಧರ್ಮರಾಜ ಹೇರೂರ, ನಾಗೇಶ ಮುಚ್ಕೇಡ, ಮಲ್ಲಣ್ಣ ಬಿದನೂರು, ಶೌಕತಲಿ ಮರತೂರ, ಸಿದ್ದುಗೌಡ ಪಾಟೀಲ್ ಮರತೂರ, ಶರಣು ಜಬರಿ ಮರತೂರ, ಯಲ್ಲಾಲಿಂಗ ಮರತೂರ, ಸಚಿನ, ಮೋದಿ, ಅನಿಕೇತ, ಸುಶೀಲ, ಗಾಯಕವಾಡ, ಗೋವಿಂದರಾಜ, ಅಮಿತ್ ಶಿವಕೇರಿ, ಅಕ್ಷಯ, ಶ್ರೀಶೈಲ ಸೇರಿದಂತೆ ಕಾಂಗ್ರೆಸ್ ಪಕ್ಷದ ಯುವ ಮುಖಂಡರು, ಕಾರ್ಯಕರ್ತರು ಇದ್ದರು.