ಸುರಪುರ: ಕರ್ನಾಟಕ ಅಲ್ಪಸಂಖ್ಯಾತರ ಹಿಂದುಳಿದವರ ದಲಿತರ ಒಕ್ಕೂಟ ಅಹಿಂದ ಸುರಪುರ ತಾಲೂಕಾಧ್ಯಕ್ಷರಾಗಿ ಚನ್ನಪ್ಪ ಎಲಿಗಾರ ಅವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ಪ್ರಭುಲಿಂಗ ಎಲ್.ದೊಡ್ಡಿಣಿ, ಕಾರ್ಯಾಧ್ಯಕ್ಷ ಚಂದ್ರಶೇಖರ ಎಂ.ಕರಡಿಕೊಪ್ಪ , ಪ್ರಧಾನ ಕಾರ್ಯದರ್ಶಿ ಬೀರಲಿಂಗ ಎನ್.ಪೂಜಾರಿ ಅವರು ಆದೇಶಿಸಿದ್ದಾರೆ.
ಸಾಮಾಜಿಕ ಕಳಕಳಿಯ ಅಹಿಂದ ಒಕ್ಕೂಟದ ನಿಯಮಗಳಿಗೆ ಹಾಗೂ ಸಂವಿಧಾನ ಬದ್ಧರಾಗಿ ತಮಗೆ ವಹಿಸಿರುವ ಪದಾಧಿಕಾರದ ಕರ್ತವ್ಯ ವನ್ನು ಕೂಡಲೇ ಇಂದಿನಿಂದಲೇ ತಾಲೂಕಿನಲ್ಲಿ ಎಲ್ಲಾ ಹೋಬಳಿ ಮಟ್ಟ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಅಹಿಂದ ಬಲಪಡಿಸಬೇಕು ಎಂದು ತಿಳಿಸಿದ್ದಾರೆ.