ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಸಾರ್ವಜನಿಕರು 1912ಗೆ ದೂರು ಸಲ್ಲಿಸಿ; ರಫಿಕ್ ಎಇಇ 

0
31

ಸುರಪುರ: ತಾಲೂಕಿನ ವಾಗಣಗೇರಾ ಗ್ರಾಮದಲ್ಲಿ ಸುಟ್ಟ ಪರಿವರ್ತಕವನ್ನು ತೆಗೆದು ಹೊಸ ಪರಿವರ್ತಕವನ್ನು ರಅಳವಡಿಸಲಾಗಿದೆ,ಬೇರೆ ಯಾವುದೇ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಬೇಕಿದ್ದರೆ ದೂರು ನೀಡುವಂತೆ  ಜೆಸ್ಕಾಂನ ಶೋರಾಪುರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೊಹಮದ್ ರಫಿಕ್ ತಿಳಿಸಿದ್ದಾರೆ.

ನಗರದ ರಂಗಂಪೇಟೆಯ ಜೆಸ್ಕಾಂ ಕಚೇರಿಯಲ್ಲಿ ಸಿಬ್ಬಂದಿಗಳ ಸನ್ಮಾನ ಸ್ವೀಕರಿಸಿ ಮಾತನಾಡಿ,  ವಾಗಣಗೇರಾ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸುಟ್ಟ ವಿದ್ಯುತ್ ಪರಿವರ್ತಕ ಬದಲಾಯಿಸುವಂತೆ ಆಗ್ರಹಿಸಿ ಪರಿಶಿಷ್ಟರ ಕಾಲೋನಿಯ ಮಹಿಳೆಯರು ಖಾಲಿ ಕೊಡ ಹಿಡಿದು ನಗರದ ತಾಲೂಕ ಪಂಚಾಯಿತಿ ಮುಖ್ಯ ದ್ವಾರಕ್ಕೆ ಮುಳ್ಳು ಬೇಲಿ ಬಡಿದು ಪ್ರತಿಭಟನೆ ನಡೆಸಿದ್ದರು.

Contact Your\'s Advertisement; 9902492681

ಈ ವೇಳೆ ಸ್ಥಳಕ್ಕೆ ಆಗಮಿಸಿದ ತಾ. ಪಂ. ಇಒ ಹಾಗೂ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಇಂದೇ ಪರಿವರ್ತಕವನ್ನು ಅಳವಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಸುಟ್ಟ ವಿದ್ಯುತ್ ಪರಿವರ್ತಕವನ್ನು ತೆಗೆದು ಹೊಸ ಪರಿವರ್ತಕವನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು..

ಗ್ರಾಹಕರು ತಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಣಿ ಸಂಖ್ಯೆ 1912ಗೆ ಸಂಪರ್ಕಿಸಿ. ಇಲ್ಲವಾದರೆ 9480847593 ವಾಟ್ಸ್ಪ್ ಸಂಖ್ಯೆಯ ಮೂಲಕ ತಮ್ಮ ದೂರನ್ನು ನೊಂದಾಯಿಸಿಕೊಳ್ಳಿ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಎಇ ಸುನೀಲ್ ಕುಮಾರ್, ಕ್ಯಾಷಿಯರ್ ಮೈಲಾರ ಲಿಂಗ ದೇವಾಪುರ, ಗುತ್ತೇಗೆದಾರ್ ಅಯ್ಯಪ್ಪ ಅಕ್ಕಿ, ಲೈನ್ ಮೇನ್ ಗಳಾದ  ಕೊಟ್ರಪ್ಪ ಮಿಣಜಗಿ, ವೆಂಕಟೇಶ್ ಕಾಗೆ,ಏಕನಾಥ ಪುಲ್ಸೆ,ಸಂತೋಷ ಇಬ್ರಾಂಪುರ,ನೀಲಕಂಠ ಶಹಾಪುರ ,ಭೀಮುನಾಯಕ ಸೇರಿದಂತೆ ಇತರರು ನೂತನ ಎಇಇ ಅವರನ್ನು ಸನ್ಮಾನಿಸಿ ಗೌರವಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here