ಕಲಬುರಗಿ; ನಾಡಿನ ರಾಜಕೀಯ ಧೀಮಂತ ಮುತ್ಸದಿ ಅಪರೂಪದ ಸಾಧಕರು,ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮಹಾನ ಶಿಕ್ಷಣ ಶಿಲ್ಪಿಕಾರರು ಸಾಮಾಜಿಕ ರಂಗದಲ್ಲಿ ಪರಿವರ್ತನೆಯಹರಿಕಾರರು,ಧಾರ್ಮಿಕ ವಲಯದಲ್ಲಿ ಬುದ್ಧನನ್ನು ಮರಳಿ ಕಲಬುರಗಿಗೆ ಕರೆತಂದ ಶ್ರೇಷ್ಠ ದಾರ್ಶನಿಕರು, ಸಾಂಸ್ಕೃತಿಕದಲ್ಲಿಅಭಿರುಚಿ ಹೊಂದಿರುವ, ದೀನರ, ದುರ್ಬಲರ ಸಂಜೀವಿನಿಯಾದ ಮಲ್ಲಿಕಾರ್ಜುನ ಖರ್ಗೆ ಅವರೆಂದು ನಿವೃತ್ತ ಉಪನ್ಯಾಸಕರಾದ ಡಾ.ಕೆ.ಎಸ್.ಬಂಧು.ಸಿದ್ದೇಶ್ವರ ರವರು ನುಡಿದರು.
ಸಾಂಚಿನಗರದ ಕರ್ನಾಟಕ ಪೀಪಲ್ಸ್ ಎಜುಕೇಷನ ಸಂಸ್ಥೆಯ, ಪ್ರಿಯದರ್ಶಿನಿ ಕನ್ಯಾ ಪ್ರೌಢಶಾಲೆಯಲ್ಲಿ,ಮಲ್ಲಿಕಾರ್ಜುನ ಖರ್ಗೆ ಅವರ 82ನೇ ಹುಟ್ಟುಹಬ್ಬದ ಪ್ರಯುಕ್ತ, ಸಾಂಚಿನಗರ ,ಸಿದ್ಧಾರ್ಥ ಪ್ರಕಾಶನ ದವರು 82 ಪುಸ್ತಕ, ಕಾಫಿ,ಪೆನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ….ಖರ್ಗೆ ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಯೂ,ಬೀದರ, ರಾಯಚೂರ, ಕಲಬುರಗಿ,ಬೆಂಗಳೂರಿನಲ್ಲಿ ಶಾಲಾ ಕಾಲೇಜಿನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಅಕ್ಷರ, ಅರಿವಿನ ಜ್ಞಾನ ,ಪಡೆದ ವಿದ್ಯಾರ್ಥಿಗಳು ಪ್ರಪಂಚದ ತುಂಬ ಕಾಣಬಹುದು. ಅಚಾರ,ವಿಚಾರ, ಪ್ರಚಾರ, ಸಿದ್ಧಾಂತದ ಕೈವಾರಿ ಖರ್ಗೆ ಸಾಹೇಬರ ಜೀವನ, ದರ್ಶನ, ಸಾಧನೆ ಮತ್ತು ಅವರು ನುಡಿದ ,ನಡೆದ ಮಾರ್ಗದರ್ಶನ ಮುಂದಿನ ಯುವ ಜನಾಂಗಕ್ಕೆ ದಾರಿದೀಪವಾಗಿದೆಂದು ಬಂಧು.ಸಿದ್ದೇಶ್ವರ ರವರು ನುಡಿದರು.
ಸಿಂಧುಮತಿ ಭೋಸಲೆ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಜೀವನ,ದರ್ಶನ, ನಾಡಿಗೆ ನೀಡಿದ ಸಾಧನೆಯನ್ನು ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರು.
ಕಾವೇರಿ,ಸೌಮ್ಯ, ದೇವಿ ,ಖರ್ಗೆ ಅವರ ಕುರಿತು ಭಾಷಣ ಮಾಡಿದರು,ಮೊದಲಿಗೆ ಮಕ್ಕಳಿಂದ ತ್ರಿಸರಣ, ಪಂಚಶೀಲ ಪಟ್ಟಿಸಿದರು, ಹುಟ್ಟುಹಬ್ಬದ ಕೇಕ್ ಕತ್ತರಿಸುವ ಮೂಲಕ ಶುಭಾಷಯಗಳು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಮುಖ್ಯ ಗುರುಗಳಾದ ಚಂದ್ರಶೇಖರ ಪೋಲಕಪಲ್ಲಿ ವಹಿಸದರು. ಲಕ್ಷ್ಮಣ ರಾವ ಗವಾಂಡಿ ,ಪ್ರದೀಪ ಕುಮಾರ ಅತಿಥಿಗಳಾಗಿ ಉಪಸ್ಥಿತ ರಿದರು. ರೋಹಿಣಿ ಪ್ರಾರ್ಥನೆ ಗೀತೆ ಹಾಡಿದರೆ, ಮಹೇಶ ಕುಮಾರ ವಂದನಾಪರಣೆ ಗೈದರು .8ನೇ ಮಕ್ಕಳಿಗೆ ಹೂ ಗೂಚ ನೀಡುವ ಮೂಲಕ ಸ್ವಾಗತ ಕೋರಿ, @ಸಿಹಿ ತಿಂಡಿ ವಿತರಿಸಲಾಯಿತು.