ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕೆ.ಎಚ್.ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ ದುರಸ್ತಿ, ಬೀದಿ ದೀಪಗಳ ಅಳವಡಿಕೆ, ಒಳಚರಂಡಿ, ಲಿಪ್ಟಗಳ ಚಾಲನೆ, ಕೆ.ಇ.ಬಿ ಮೀಟರ್ ಅಳವಡಿಕೆ ಹಾಗೂ ಉದ್ಯಾನವನಗಳ ಸ್ವಚ್ಚತೆ ಮತ್ತು ಸೌಂದರ್ಯಿಕರಣ ಇತ್ಯಾದಿ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಕರ್ನಾಟಕ ಗೃಹ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಮಂಗಳವಾರ ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಜನರ ಸಮಸ್ಯೆಗಳನ್ನು ಬೇಗನೆ ಈಡೆರಿಸದಿದ್ದರೆ ಬಡಾವಣೆಯ ಎಲ್ಲಾ ನಿವಾಸಿಗಳು ಕಾರ್ಯಾಲಯದ ಮುಂದೆ ಉಗ್ರ ಹೋರಾಟ ನಡೆಸುತ್ತೆವೆ ಎಂದು ಎಚ್ಚರಿಕೆ ನೀಡಿದರು.
ಈ ಸಂಧರ್ಭದಲ್ಲಿ ಬಡಾವಣೆಯ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ, ಬಾಲಕೃಷ್ಣ ಕುಲಕರ್ಣಿ, ಚಂದ್ರಕಾಂತ ತಳವಾರ, ಶ್ರೀನಿವಾಸ ಬುಜ್ಜಿ, ಹಣಮಂತ್ರಾಯ ಅಟ್ಟೂರ್, ಸಂಗಮೇಶ ಸರಡಗಿ, ಶಿವಾನಂದ ಪಾಟೀಲ್, ಕೆ.ವಿ.ಕುಲಕರ್ಣಿ, ಪದ್ಮಣ್ಣ ವಗ್ಗೆ, ನಾಗಭೂಷಣ ಸ್ವಾಮಿ, ಹಣಮಂತ್ರಾಯ ಪಾಟೀಲ್, ರಾಜಶೇಖರ ಜಕ್ಕಾ, ಜಿತೇಂದ್ರಸಿಂಗ್ ಠಾಕೂರ್ ಹಾಗೂ ಇನ್ನಿತರ ನಿವಾಸಿಗಳು ಇದ್ದರು.