ಕಲಬುರಗಿ: ಅಗಸ್ಟ್ ನಲ್ಲಿ `ರಾಜ್ಯ ಮಟ್ಟದ ಪ್ರಥಮ ಗಜಲ್ ಸಮ್ಮೇಳನ’

1
197

ಕಲಬುರಗಿ; ಆಗಸ್ಟ್ ತಿಂಗಳ ಕೊನೆ ವಾರದಲ್ಲಿ ಕಲಬುರಗಿ ನಗರದಲ್ಲಿ ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನ ಮಾಡಲಾಗುವುದು ಎಂದು ಕರ್ನಾಟಕ ಗಜಲ್ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನವನ್ನು ಕಲಬುರಗಿಯಲ್ಲಿಯೇ ಆಯೋಜಿಸಬೇಕೆನ್ನುವ ಬಹುದಿನದ ಕನಸು ಈಗ ಈಡೇರಿಸುವ ಸಮಯ ಬಂದಿದ್ದು, ಆಗಸ್ಟ್ ತಿಂಗಳ ಕೊನೆ ವಾರದಲ್ಲಿ ಗಜಲ್ ಸಮ್ಮೇಳನ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ರಾಯಚೂರಿನ ಹಿರಿಯ ಕವಿ, ಗಜಲ್ ಗಾರುಡಿಗ ಶಾಂತರಸ ಅವರ ಮೂಲಕ ಗಜಲ್ ಕನ್ನಡದಲ್ಲಿ ಪರಿಚಯವಾಗಿದ್ದು, ಇದೀಗ ರಾಜ್ಯದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಗಜಲಕಾರರು ಕನ್ನಡದಲ್ಲಿದ್ದಾರೆ. ಈ ಎಲ್ಲ ಗಜಲಕಾರರನ್ನು ಒಂದೆಡೆ ಸೇರಿಸುವ ನಿಟ್ಟಿನಲ್ಲಿ ಸಮ್ಮೇಳನ ಮಾಡಲಾಗುತ್ತಿದೆ ಎಂದು ತಿಳಿಸಿರುವ ಅವರು, ಸಮ್ಮೇಳನದ ದಿನಾಂಕ, ಸ್ಥಳ, ಉಪನ್ಯಾಸ, ಗೋಷ್ಠಿ ಮತ್ತು ಇತರೆ ಮಾಹಿತಿಗಳನ್ನು ಶೀಘ್ರದಲ್ಲಿ ನೀಡಲಾಗುವುದು ಎಂದಿದ್ದಾರೆ.

ಸಮ್ಮೇಳನದ ಸಂಘಟನೆಯಲ್ಲಿ ಗಜಲ್ ಅಕಾಡೆಮಿ ಅಧ್ಯಕ್ಷ ರಂಗಸ್ವಾಮಿ ಸಿದ್ದಯ್ಯ, ಗಜಲ್ ಕವಿ, ವಿಮರ್ಶಕ ಅಬ್ದುಲ್ ಹೈ. ತೋರಣಗಲ್, ನಂರುಶಿ ಕಡೂರು ಇತರರು ಭಾಗವಹಿಸಲಿದ್ದಾರೆ. ಈ ಗಜಲ್ ಸಮ್ಮೇಳನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದ ಬಗ್ಗೆ ಚರ್ಚೆ ನಡೆದಿದೆ.

ವಾರದೊಳಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದ್ದು, ನಂತರ ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಲು ವಿವಿಧ ಸಮಿತಿಗಳನ್ನು ನೇಮಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

1 ಕಾಮೆಂಟ್

  1. ಇದು ಅತ್ಯಂತ ಹರ್ಷದಾಯಕ ಸುದ್ದಿ. ಬಹಳ ದಿನಗಳಿಂದ ಎದುರು ನೋಡುತ್ತಿದ್ದ ಗಜಲ್ ಸಂಬಂಧಿತ ಸಮ್ಮೇಳನದ ಸಂಭ್ರಮ ನೆರವೇರುವ ಭರವಸೆಗೆ ಕಾರಣರಾದ ಮಹನೀಯರಿಗೆ ಧನ್ಯವಾದಗಳು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here