ಕಲಬುರಗಿ : ತಾಲೂಕಿನ ಸೀತನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇರುವದರಿಂದ ಸಿಟ್ಟಾದ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಶಾಲೆಯಲ್ಲಿ ಪಾಠ ಕೇಳಲು ಮಕ್ಕಳು ತಯ್ಯಾರಿದ್ದರೆ ಪಾಠ ಹೇಳಲು ಶಿಕ್ಷಕರು ಇಲ್ಲಾ ಇದೆಂತ ಪರಿಸ್ಥಿತಿ ಎಂದು ಗ್ರಾಮಸ್ಥರು ಶಿಕ್ಷಣಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಮಾಧ್ಯಮ ಶಾಲೆಯಲ್ಲಿ 1 ನೇ ತರಗತಿಯಿಂದ 7ನೇ ತರಗತಿ ವರೆಗೇ 146 ಮಕ್ಕಳಿದ್ದು, ಇನ್ನು ಉರ್ದು ಮಾಧ್ಯಮ ದಲ್ಲಿ 1 ರಿಂದ 5 ನೇ ತರಗತಿ ವರೆಗೆ 26 ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಆದರೆ ಕೇವಲ 4 ರಿಂದ 5 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಿಕ್ಷಕರ ಕೊರತೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮದ ಮುಖಂಡ ಗೌತಮ್ ಎಸ್ ಶೃಂಗೇರಿ ಶಿಕ್ಷಕರ ಕೊರತೆ ಇದೆ ಆದಷ್ಟು ಬೇಗನೆ ಸರಿ ಪಡಿಸಿ ಎಂದು ಹಲವು ಬಾರಿ ಅಧಿಕಾರಿಗಳೇ ಮನವಿ ಮಾಡಿದರು ಕೂಡ ಇಲ್ಲಿಯವರೆಗೆ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ಕೊಂಡಿಲ್ಲ ಇದರಿಂದ ನಮ್ಮ ಶಾಲೆಯ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ ಹಾಗಾಗಿ ಈಗಲಾದ್ರೂ ಕೂಡ ಸಮಯ ಮಿಂಚಿಲ್ಲ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ವಿಷಯ ತಿಳಿದ ಆಧಿಕಾರಿಗಳು ಸ್ಥಳಕ್ಕೆ ಧಾವಿಸಿದ ಆದಷ್ಟು ಬೇಗ ಶಾಲೆಯಲ್ಲಿನ ಶಿಕ್ಷಕರ ಕೊರತೆ ನಿಗಿಸುತ್ತೇವೆ ಎಂದರು.