ಕಲಬುರಗಿ: ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹತ್ತಿರ ಗುಲಬರ್ಗಾ ಸಿಮೆಂಟ್ ಲಿಮಿಟೆಡ್ ಕಂಪನಿ ವತಿಯಿಂದ ಶುಕ್ರವಾರ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗುಲಬರ್ಗಾ ಸಿಮೆಂಟ್ ಲಿಮಿಟೆಡ್ ಕಂಪನಿ ವತಿಯಿಂದ ನೂತನ ನಿರ್ಮಿಸಲಾದ ಬಸ್ ನಿಲ್ದಾಣ, ಶಾಲಾ ಕಂಪೌಂಡ್, ಆರ್ಚ, ಕೊಳವೆ ಬಾವಿ, ಆರ್ ಓ ಪ್ಲಾಂಟ್ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಹೊನ್ನಕಿರಣಗಿ ಗ್ರಾಪಂ ಅಧ್ಯಕ್ಷ ಮಲ್ಲಿನಾಥ ಭೂಸಾ ಅವರು ಸಸಿಗೆ ನೀರು ಹಾಕಿ ಉದ್ಘಾಟಿಸಿದರು.
ಸಮಾರಂಭದಲ್ಲಿ ಗ್ರಾದ ವಿವಿಧ ಶಾಲೆಗಳಿಗೆ ಕುರ್ಚಿಗಳು ಹಾಗೂ ಮೇಜು ಟೇಬಲ್ ಮಕ್ಕಳಿಗಾಗಿ ಊಟದ ತಟ್ಟೆ, ಗ್ಲಾಸ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ಗುಲಬರ್ಗಾ ಸಿಮೆಂಟ್ ಲಿಮಿಟೆಡ್ ಕಂಪನಿ ವತಿಯಿಂದ ವಿತರಣೆ ಮಾಡಲಾಯಿತು.
ಕಲಬುರಗಿ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಜಮಖಂಡಿ ಅವರು ಮಾತನಾಡುತ್ತಾ ಕಂಪನಿಯವರು ಗ್ರಾಮದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದು ಗ್ರಾಮಸ್ಥರಿಗೆ ತುಂಬಾ ಅನುಕಲವಾಗಲದೆ ಎಂದರು.
ಕಂಪನಿಯ ಮುಖ್ಯಸ್ಥ ಸುನೀಲಕುಮಾರ ಅವರು ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಗ್ರಾಮದ ಅಭಿವೃದ್ದಿ ನಮ್ಮ ಕರ್ತವ್ಯವಾಗಿದೆ. ಮುಬರುವ ದಿನಗಳಲ್ಲಿ ಹೆಚ್ಚಿನ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಮಾರಣಭದಲ್ಲಿ ಜಿಲ್ಲಾ ಇಂಡಸ್ಟ್ರೀಯಲ್ ಸೆಂಟರ್ ಜಂಟಿನರ್ದೇಶಕ ಸತೀಶ . ಗುಲಬರ್ಗಾ ಸಿಮೆಂಟ್ ಲಿಮಿಟೆಡ್ ಕಂಪನಿ ಪ್ರೊಜೆಕ್ಟ್ ಡೈರೆಕ್ಟರ್ ಆರ್ ಕೆ ನಾಗೇಶ, ಜನರಲ್ ಮ್ಯಾನೇಜರ್ ಪಿ ಶ್ರೀನಿವಾಸ್, ದಿನೇಶ ಭೊಹರಾ, ಕವಿತಾ ಕಾಗೆ ಮೋನ್ನಮ್ಮ ಭಜಂತ್ರಿ ಮುಖಮಡರಾದ ವಿಶ್ವನಾಥ ಹಿರೇಮಠ, ನಿಂಗರಾಜ್ ಕೋಣಿನ್, ಶಿವಪ್ಪ, ಮಲ್ಲಿನಾಥ ಯಲ್ಲಪ್ಪ, ಹಯ್ಯಾಳಿ ಪೂಜಾರಿ ರಹೀಮ್ ಶಹಾಬಾದ ಅಶೋಕ ಕಂತೆ ಗೋಳ ಶಾಲೆಯ ಸಿಬ್ಬಂದಿವರ್ಗದವರು ಮಕ್ಕಳು ಗ್ರಾಮದವರು ಮುಂತಾದವರು ಉಪಸ್ಥಿತರಿದ್ದರು.
ಕು ಸಿಂಧೂ ಮತ್ತು ಸಂಗಿಡಿಗರು ಪ್ರಾರ್ಥನಾಗೀತೆ ಹಾಡಿದರು ಬಾಬು ದಸರಾಗೋಳ ಸ್ವಾಗತಿಸಿದರು. ಆರ್ ಕೆನಾಗೇಶ ಪ್ರಾಸ್ತಾವಿಕ ಮಾತನಾಡಿದರು.
ಸರಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಕ ರಘುನಾಥ ಮಸರಬೊ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.