ಕಲಬುರಗಿ; ಕೃಷಿ ವಿಜ್ಞಾನ ಕೇಂದ್ರ ರದೇವಾಡಗಿ ಮತ್ತು ಕೃಷಿ ಇಲಾಖೆ ಸೇಡಂ, ಚಿತ್ತಾಪೂರ ಸಹಭಾಗಿತ್ವದಲ್ಲಿ ಮಾಡ್ಬಳ್, ಗುಂಡಂಪಾಳ್ಳಿ, ಗುಂಡಹಳ್ಳಿ, ಮುಧೋಳ್ ಮತ್ತು ಬೀರನಳ್ಳಿ ಸಮಸ್ಯಾತ್ಮಕ ಕ್ಷೇತ್ರಗಳಿಗೆ ಭೇಟಿ ನೀಡಿ, ಹೆಚ್ಚಾಗಿ ಮಳೆ ಆಗುತ್ತಿರುವುದರಿಂದ ಉದ್ದು ಹೆಸರು ಮತ್ತು ತೊಗರಿ ಬೆಳೆಯಲ್ಲಿ ನೀರು ನಿಂತು ಬೆಳೆ ಹಾಳಾಗಿದ್ದು ಕಂಡು ಬಂದಿದ್ದು ಹಾಗೆಯೇ ಹೇನಿನ ಬಾಧೆ ಕಂಡು ಬಂದಿರುವುದರಿಂದ ಬೆಳೆಗೆ ಸಂರಕ್ಷಿಸಲು ಸೂಕ್ತವಾದ ಸಂರಕ್ಷಣಾ ಕ್ರಮಗಳನ್ನು ವಿವರಿಸಿದರು.
ಕ್ಷೇತ್ರ ಭೇಟಿಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಗಳಾದ ಡಾ. ಚಂದ್ರಕಾಂತ ಮಣ್ಣು ವಿಜ್ಞಾನಿ, ಡಾ.ಮಲ್ಲಪ್ಪ ಬೇಸಾಯ ಶಾಸ್ತ್ರ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ಸಮದ್ ಪಟೇಲ್, ಕೃಷಿ ಉಪನಿರ್ದೇಶಕರಾದ ಶ್ರೀಮತಿ. ಅನುಸೂಯ ಹೂಗಾರ್, ಸಹಾಯಕ ಕೃಷಿ ನಿರ್ದೇಶಕರು ಹಂಪಣ್ಣ, ಕೃಷಿ ಇಲಾಖೆಯ ಸಿಬ್ಬಂದಿಗಳು ಹಾಗೂ ರೈತರು ಉಪಸ್ಥಿತರಿದ್ದರು.