ವಚನ ಮಂಟಪ ನಿರ್ಮಾಣಕ್ಕೆ ಸ್ಥಳಪರಿಶೀಲನೆ; ಸಿಎಂ ಜೊತೆ ಚರ್ಚಿಸಿ ಕಲಬುರಗಿಯಲ್ಲಿ ಜನಸ್ಪಂದನ ದಿನಾಂಕ ನಿರ್ಧಾರ

0
75

ಜನಸ್ಪಂದನ: ಸಿಎಂ ಆದೇಶದಂತೆ ವಿಭಾಗೀಯ ಕೇಂದ್ರದಲ್ಲಿ‌ ಜನಸ್ಪಂದನೆ ಮಾಡಬೇಕು ಕಲಬುರಗಿಯಲ್ಲಿ ನಡೆಯಲಿರುವ ಜನಸ್ಪಂದನೆಯಲ್ಲಿ ಖುದ್ದಾಗಿ ಸಿಎಂ ಸೇರಿದಂತೆ ಇತರೆ ಸಚಿವರು ಇರಲಿದ್ದಾರೆ. ಸಿಎಂ ಜೊತೆಗೆ ಮಾತಮಾಡಿ ಅಗಸ್ಟ್ 2 ಅಥವಾ 3. ನೇ ವಾರದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುವುದು.

ಕಲಬುರಗಿ; ಬಜೆಟ್ ನಲ್ಲಿ ನೀಡಿದ ಭರವಸೆಯಂತೆ ವಚನ ಮಂಟಪ ನಿರ್ಮಾಣ‌ ಮಾಡುವ ಉದ್ದೇಶದಿಂದ ಜಾಗ ಪರಿಶೀಲನೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.

Contact Your\'s Advertisement; 9902492681

ನಗರದ ವಿವಿದೆಡೆ ಇತರೆ ಯೋಜನೆಗಳಿಗೆ ಸ್ಥಳ ಪರಿಶೀಲನೆ ನಡೆಸಿದ ನಂತರ ಜಿಲ್ಲಾಧಿಕಾರಿ‌ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಕೆರೆ ಭೋಸ್ಗಾ ಅಭಿವೃದ್ದಿ, ಮಹಿಳೆಯರಿಗಾಗಿ ಹಾಸ್ಟೆಲ್, ಮಹಿಳೆಯರ ಒಳಾಂಗಣ ಕ್ರೀಡಾಂಗಣ ಸೇರಿದಂತೆ ಹಲವಾರು ಯೋಜನೆಗಳ ಜಾರಿಗೆ ಕುರಿತಂತೆ ಜಾಗ ವೀಕ್ಷಣೆ ಮಾಡಲಾಗಿದೆ.

ಐತಿಹಾಸಿಕ ಕೋಟೆ ಜಾಗ ಒತ್ತುವರಿ ತೆರವು: ಐತಿಹಾಸಿ‌ಕ ಕಲಬುರಗಿ ಕೋಟೆಗೆ ಸಂಬಂಧಿಸಿದ ಜಾಗ ಒತ್ತುವರಿ ತೆರವಿಗೆ ಕ್ರಮ‌ಕೈಗೊಳ್ಳಲಾಗುವುದು ಎಂದ ಸಚಿವರು ಹೊರ ಭಾಗದ ಎಎಸ್ ಐ ಜಾಗದಲ್ಲಿ ಮನೆಗಳನ್ನು ನಿರ್ಮಾಣ ಮಾಡಿದ್ದರೆ ತೆರವುಗೊಳಿಸಲಾಗುವುದು.

ಅಂತರಾಷ್ಟ್ರೀಯ ಗುಣಮಟ್ಟದ ಮತ್ತೊಂದು ಸ್ಟೇಡಿಯಂ ನಿರ್ಮಾಣ ಮಾಡುವ ಉದ್ದೇಶದಿಂದ ರೂ 30 ಕೋಟಿ ಅನುದಾನ ಬಿಡುಗಡೆಯಾಗಿದೆ. ಹಾಕಿ ಸ್ಟೇಡಿಯಂ ಅಭಿವೃದ್ದಿ ಮಾಡಲಾಗುವುದು. ರಾಹುಲ್‌ ದ್ರಾವಿಡ್ ಹಾಗೂ ಪ್ರಕಾಶ ಪಡುಕೋಣೆ ಕ್ರೀಡಾ ತರಬೇತಿ ಸಂಸ್ಥೆ ಮಾಡಿದವರನ್ನೇ ಕರೆಸಿ‌ ಇಲ್ಲಿಯೂ ಕೂಡಾ ತರಬೇತಿ‌ ನೀಡುವುದಕ್ಕೆ ಬೇಕಾಗುವ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು.

ಎಲೆಕ್ಟ್ರಾನಿಕ್ಸ್ ಕ್ಲಷ್ಚರ್; ಮೂಲಸೌಕರ್ಯ ಅಭಿವೃದ್ದಿ ಹಾಗೂ ಮಧ್ಯಮ ಕೈಗಾರಿಕೆ‌ ಸಚಿವ ಎಂ.ಬಿ.ಪಾಟೀಲರ ಜತೆ ಸೇರಿ ಕಕ ಭಾಗದಲ್ಲಿ ಎಲೆಕ್ಟ್ರಾನಿಕ್ ಕ್ಲಷ್ಚರ್ ಮ್ಯಾನಿಫಾಕ್ಷರಿಂಗ್ ನಿರ್ಮಾಣ ಮಾಡಲು ಉದ್ದೇಶ ಹೊಂದಲಾಗಿದೆ. ಈ ಬಗ್ಗೆ ನೀಲಿ ನಕ್ಷೆ ಹಾಕಲಾಗುವುದು.

ಕೌಶಲ್ಯಾಭಿವೃದ್ದಿ ಹಾಗೂ ಐಟಿ ಬಿಟಿ ಸಚಿವಾಲಯದಿಂದ ಉದ್ಯಮ ಶೀಲತೆ ಹೆಚ್ಚಿಸಲು ಅವರಿಗೆ ಉದ್ಯೋಗ ಪಡೆದುಕೊಳ್ಳಲು ಮಲ್ಟಿ ಸ್ಕಿಲ್ ಇನ್ಕ್ಯೂಬೇಷನ್ ಸೆಂಟರ್ ಸ್ಥಾಪನೆಗೆ ಸ್ಥಳ‌ ಪರಿಶೀಲನೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಜಿಡಿಎ ವತಿಯಿಂದ ಹೊಸ ಕಲಬುರಗಿ ನಗರದ ನೀಲಿ ನಕ್ಷೆ ಹಾಕಲಾಗುವುದು.

ಘನತ್ಯಾಜ್ಯ ನಿರ್ವಹಣೆ: ಘನತ್ಯಾಜ್ಯ ನಿರ್ವಹಣೆಗೆ ವಾಹನ‌ ಖರೀದಿ‌ ಮಾಡಲಾಗಿದೆ. ರೂ 6.68 ಕೋಟಿ‌ ವೆಚ್ಚದಲ್ಲಿ ನಗರ ಸ್ವಚ್ಛತೆಗೆ ಬೇಕಾಗುವ ಯಂತ್ರಹೊಂದಿದ ವಾಹನಗಳನ್ನು ನೀಡಲಾಗುತ್ತಿದೆ.

ಕ್ರೀಡಾಗ್ರಾಮ: ಕೆಎಸ್ ಸಿ ಅವರಂತೆ ಕ್ರೀಡಾ ಗ್ರಾಮ ನಿರ್ಮಾಣ ಮಾಡಬೇಕಿತ್ತು. ಜಾಗ ನಮ್ಮಿಂದ‌ ಕೊಡಲಾಗುವುದು‌ ಆದರೆ‌ ನೀವೇ ನಿರ್ಮಾಣ ಮಾಡಬೇಕು ಹಾಗೂ ತರಬೇತಿ ನೀಡುವಂತೆ ಕೂಡಾ ಬೇಡಿಕೆ ಇಡಲಾಗಿತ್ತು. ಆದರೆ ಆಗ ಸರ್ಕಾರ ಪತನವಾಗಿದ್ದರಿಂದ ಯೋಜನೆನಿಂತು ಹೋಗಿತ್ತು. ಈಗ ಅವರೊಂದಿಗೆ ಮಾತನಾಡಲಾಗಿದೆ. ಕಾಲಾವಕಾಶ ಬೇಕಿದ್ದು ಸಾಕಷ್ಟು ಅವಶ್ಯಕವಿರುವ ಜಾಗದಲ್ಲಿ ನಿರ್ಮಾಣ ಮಾಡಲಾಗುವುದು ಎಂದರು.

ಈ ಮೊದಲು ಎನ್ ವಿ ಕಾಲೇಜು ಆವರಣದಲ್ಲಿ‌ ನಡೆಸಲು ಉದ್ದೇಶಿಸಲಾಗಿತ್ತು.‌ ಆದರೆ ವಿಭಾಗೀಯ ಮಟ್ಟದಲ್ಲಿ ನಡೆಸಲಾಗುತ್ತಿರುವುದರಿಂದ ಹೆಚ್ಚಿನ ಜಾಗದ ಅವಶ್ಯಕತೆ ಇರುವುದರಿಂದ ಗುಲಬರ್ಗಾ ವಿವಿನಲ್ಲಿ ನಡೆಸಲಾಗುವುದು.

ಬೆಳೆ ವಿಮೆ: ಜಿಲ್ಲೆಯಲ್ಲಿ ಇದೂವರೆಗೆ 1.58 ಲಕ್ಷ ರೈತರು ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡಿದ್ದು ಇದೇ ಜುಲೈ 31 ಕ್ಕೆ ಕೊನೆಯ ದಿನವಾಗಿದ್ದು ಇನ್ನೂ ಹೆಚ್ಚಿನ ಸಂಖ್ಯೆಯ ರೈತರು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here