ಕಲಬುರಗಿ: ಪ್ರಗತಿಪರ ಯುವ ಚಿಂತಕ ಕನ್ಹಯ್ಯ ಕುಮಾರ ಅವರು ಅಕ್ಟೋಬರ್ 15ರಂದು ಕಲಬುರಗಿಗೆ ಆಗಮಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿಯ ವಿವಿಧೆಡೆ ಅವರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಯುವಜನತೆ, ಸಂವಿಧಾನ ಕುರಿತು ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನಗರದ ನ್ಯಾಷನಲ್ ಸ್ಕೂಲ್, ಗುಲ್ಬರ್ಗ ವಿವಿ ಹಾಗೂ ಜಗತ್ ಸರ್ಕಲ್ ಬಳಿ ಅವರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.