ವಿಶ್ವ ಸ್ತನ್ಯಪಾನ ಸಪ್ತಾಹ

0
59

ಕಲಬುರಗಿ; ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ರತಿಕಾಂತ ಸ್ವಾಮಿ, ಹಾಗೂ ಜಿಲ್ಲಾ ಆರ್ ಸಿ ಎಚ್ ಅಧಿಕಾರಿಗಳಾದ ಡಾ. ಶರಣಬಸಪ್ಪ ಕ್ಯಾತನಾಳ ರವರು ಕಾರ್ಯಕ್ರಮವನ್ನು ಸಸಿಗೆ ನೀರೂಣಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಹುಟ್ಟಿದ ಮಗುವಿಗೆ ಬಾಟಲ್ ಹಾಲು ಉಣಿಸುವುದು ತಾಯಂದಿರು ಬಿಡಬೇಕು ತಾಯಿ ಎದೆಹಾಲು ಮಗುವಿಗೆ ಬಾಳ ಮುಖ್ಯ ಪ್ರಕೃತಿಯ ಮೊದಲ ಲಸಿಕೆ ತಾಯಿಯ ಮೊದಲ ಹಾಲು ( ಕೊಲೊಸ್ರ್ಟಮ್ ) ಎಂದು ಡಿಹೆಚ್ಓ ಡಾ. ರತಿಕಾಂತ ಸ್ವಾಮಿ ಹೇಳಿದರು.

ನಗರದ ತಾಜ್ ನಗರದ ಸರ್ಕಾರಿ ಪ್ರಾಸುತಿ ಆರೋಗ್ಯ ಆಸ್ಪತ್ರೆಯಲ್ಲಿ ನಡೆದ ವಿಶ್ವ ಸ್ತಾನ್ಯಪಾನ ದಿನ ಸಪ್ತಾಹ ದಿ : 1-8-2024 ರಿಂದ 7-8-2024 ರವರಗೆ .ಸಪ್ತಾಹ ನಡೆಯಲಿದೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಾಯಿಯ ಸಾಧಾರಣ ಹೆರಿಗೆ ಆದ ನಂತರ ಅರ್ಧ ಗಂಟೆಯಲ್ಲಿ ನಂತರ ಮಗುವಿಗೆ ಹಾಲುಣಿಸಬೇಕು ಮತ್ತು ಶಸ್ತ್ರ ಚಿಕ್ಸಿತೆ ಮಾಡಿಕೊಂಡ ತಾಯಂದಿರು ಮಗುವಿಗೆ ಒಂದು ಹೆರಿಗೆ ಆದ ನಂತರ ಅರ್ಧ ಗಂಟೆಯಲ್ಲಿ ನಂತರ ಮಗುವಿಗೆ ಹಾಲುಣಿಸಬೇಕು ಮತ್ತು ಶಸ್ತ್ರಚಿಕ್ಸತೆ ಮಾಡಿಕೊಂಡ ತಾಯಂದಿರು ಮಗು ಜನಸಿದ ಒಂದು ಗಂಟೆಯ ಒಳಗಾಗಿ ಎದೆ ಹಾಲನ್ನು ಉಳಿಸಬೇಕು ಇದರಿಂದ ತಾಯಿ ಮತ್ತು ಮಗು ಆರೋಗ್ಯವಾಗಿರುವುದು ಸಾಧ್ಯ ಕೆಲವರು ತಾಯಂದಿರು ಕೆಲ ಗಂಟೆಗಳ ನಂತರ ಮಗುವಿಗೆ ಹಾಲು ಉಣಿಸಲು ಹೋದರೆ ಎದೆ ಹಾಲಿನಲ್ಲಿ ಹೆಪ್ಪುಗಟ್ಟಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಎಂದರು.

Contact Your\'s Advertisement; 9902492681

ಡಾ. ಶರಣಬಸಪ್ಪ ಕ್ಯಾತನಾಳ ಮಾತಾನಡುತ್ತ ಅವರು ಮಗುವಿಗೆ ಎಷ್ಟು ಬೇಕೋ ಅಷ್ಟೇ ಹುಟ್ಟಿದ ಮಗುವಿಗೆ ಎದೆ ಹಾಲು ಉಣಿಸಬೇಕು ಎದೆ ಹಾಲಿನಲ್ಲಿ ಪೌಷ್ಟಿಕಾಂಶ ಇರುತ್ತದೆ ಇದರಿಂದ ಮಗು ಆರೋಗ್ಯಕರವಾಗಿರುತ್ತದೆ , ಕೊರತೆಗಳನ್ನು ಕೊನೆಗೊಳಿಸಿ : ಸರ್ವರಿಗೂ ಸ್ತನ್ಯಪಾನದ ಬೆಂಬಲ ನೀಡಿ ಹಾಗೆ, ಹೆರಿಗೆ ಆದ ತಾಯಂದಿರು ಹುಟ್ಟಿದ ಮಗು ಮತ್ತು ತಾಯಂದಿರು ಬೆಚ್ಚಗೆ ಇರಬೇಕು ತಾಯಿ ಮಗು ಒಂದೇ ಕಡೆ ಇರಬೇಕು ಆದ್ದರಿಂದ ಮಗುವಿಗೆ ಹಾಲು ಉಣಿಸುವುದರಿಂದ ಹಾಲಿನ ಉತ್ಪಾದನೆ ಹೆಚ್ಚಳವಾಗಿರುತ್ತದೆ ಇದರಿಂದ ತಾಯಿಗಳಿಗೆ ಅನುಕೂಲವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ನಂದಿನಿ ಬೋಸಗಿ ಹಾಗೂ ಮಕ್ಕಳ ತಜ್ಞರಾದ ಡಾ. ಕಾವ್ಯ ಶೇಖಾಜಿ ರವರು ಫಲಾನುಭವಿಗಳಾದ ಹಾಲುಣಿಸುವ ತಾಯಂದಿರಿಗೆ ಎದೆ ಹಾಲಿನ ಮಹತ್ವದ ಬಗ್ಗೆ ತಿಳಿಸಿಕೊಟ್ಟರು, ತಾಜನಗರ್ ಪ್ರಸೂತಿ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ ವೇಣುಗೋಪಾಲ್ ದೇಶಪಾಂಡೆ, ಹಾಗೂ ನಗರ ಆರೋಗ್ಯ ಕೇಂದ್ರ ಶಿವಾಜಿ ನಗರದ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಸಂಧ್ಯಾ ಪುರಾಣಿಕ್ ರವರು ತಾಯಿ ಎದೆ ಹಾಲಿನ ಮಹತ್ವದ ಕುರಿತು ಮಾತನಾಡಿ ಹಾಗೂ ಬಂದ ಫಲಾನುಭವಿಗಳಿಗೆ ಹಣ್ಣು, ವಿಟಮಿನ್ ಹಾಗೂ ಪ್ರೋಟೀನ್ ಪೊಟ್ಟನಗಳನ್ನು ವಿತರಿಸಿದರು.

ಸ್ತನ್ಯಪಾನ ಪ್ರತಿಜ್ಞ ನುಡಿಯನ್ನು ಬಂದ ಫಲನುಭವಿಗಳಿಗೆ ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಹೇಳಿಸಲಾಯಿತು. ಅರ್ ಸಿ ಹೆಚ್ ಕಚೇರಿಯ ಜಿಲ್ಲಾ ಕಾರ್ಯಕ್ರಮ ಸಂಯೋಜಕರು,ರವೀಂದ್ರನಾಥ್ ಠಾಕೂರ್ . ಫಾರ್ಮಸಿಸ್ಟ್ ಮಹ್ಮದ್ ಆಶಫಾಕ್, ಲ್ಯಾಬ್ ಟೆಕ್ನಿಷಿಯನ್ ಅಬ್ದುಲ್ ಹಕೀಮ್, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ರೇಣುಕಾ. ಎಲ್ಲಾ ಆರೋಗ್ಯ ಸಿಬ್ಬಂದಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here