ರಟಕಲ್ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಒಂದು ತಿಂಗಳ ಪರ್ಯಂತ ಶರಣಬಸವೇಶ್ವರ ಪುರಾಣ

0
235

ಕಾಳಗಿ: ತಾಲ್ಲೂಕಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ರೇವಗ್ಗಿ (ರಟಕಲ್) ಗ್ರಾಮದ ಜಗದ್ಗುರು ಶ್ರೀರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸ ಹಾಗೂ ಬೆಳ್ಳಿ ಪಲ್ಲಕ್ಕಿ ಉತ್ಸವ ನಿಮಿತ್ತ ಒಂದು ತಿಂಗಳ ಪರ್ಯಂತ ಮಹಾದಾಸೋಹಿ ಶರಣಬಸವೇಶ್ವರ ಪುರಾಣ ಹಮ್ಮಿಕೊಳ್ಳಲಾಗಿದೆ.

ಅ. 5 ರಿಂದ ಸೆಪ್ಡೆಂಬರ್ 6 ವರೆಗೆ ಎಂದು ದೇವಸ್ಥಾನದ ಕಾರ್ಯದರ್ಶಿ ಸದಾಶಿವ ಬಗ್ಗೆ ಮಾಹಿತಿ ನೀಡಿದರು. ಪ್ರತಿ ನಿತ್ಯ ರಾತ್ರಿ 8: 30 ಗಂಟೆಗೆ ಪ್ರಾರಂಬದ ಪುರಾಣ ಕಾರ್ಯಕ್ರಮಕ್ಕೆ ರಟಕಲ್ ರೇವಣಸಿದ್ದೇಶ್ವರ ಹಿರೇಮಠದ ಪೂಜ್ಯ ಶ್ರೀ ರೇವಣಸಿದ್ದ ಶಿವಾಚಾರ್ಯರು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಮಹಾದಾಸೋಹಿ ಶರಣಬಸವೇಶ್ವರರ ಪುರಣ ಕೇಳುವುದೆ ಸೌಭಾಗ್ಯ. ಶರಣಬಸವೇಶ್ವರರು ಅನ್ನಾ ದಾಸೋಹಿ, ಪ್ರಾಣಿ ಪಕ್ಷಿಗಳಿಗೆ ಅರವಟಿಗೆ ಇಟ್ಟು ಶರಣ ಭಕ್ತರಿಗೆ ದಾಸೋಹದ ಮಹತ್ವವನ್ನು ಗಡಿಗಳನ್ನೇ ಇಮ್ಮಡಿಗೊಳ್ಳಿಸಿ ಜೀವನದಲ್ಲಿ ದಾಸೋಹದ ಪ್ರಾಮುಖ್ಯತೆ ಸಂದೇಶವನ್ನು ಸಮಾಜಕ್ಕೆ ನೀಡಿದರು.

ಪಾವನಕ್ಷೇತ್ರವಾದ ರಟಕಲ್ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರಾವಣ ಬಂದರೆ ಸಾಕು ಭಕ್ತ ಜನ ಸಾಗರವೇ ಹರಿದು ಬರುತ್ತದೆ. ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದ ಪುರಾಣ ಕಾರ್ಯಕ್ರಮ ಕರೋನ ಸಮಯದಲ್ಲಿ ನಿಂತು ಹೋಗಿತ್ತು, ಹೀಗಾಗಿ ಮತ್ತೆ ಪುರಾಣ ಪ್ರಾರಂಭ ಮಾಡಿದ್ದು ಭಕ್ತರಿಗೆ ಸಂತೋಷ ನೀಡಿದೆ ಹೀಗಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಆಲಿಸಬೇಕು ಎಂದು ಆರ್ಶಿವಚನ ನೀಡಿದರು.

ಗುರುಶಾಂತಯ್ಯ ಸ್ಥಾವರಮಠ ಪ್ರಾರ್ಥಿಸಿದರು, ಶಿವಕುಮಾರ ಸ್ವಾಮಿ ತಬಲಾ ನುಡಿಸಿದರು, ವೇದಮೂರ್ತಿ ಮಲ್ಲಯ್ಯ ಶಾಸ್ತ್ರೀ ಐನಾಪೂರ ಪುರಾಣ ಹೇಳಿದರು. ರೈತ ಸೇನಾಧ್ಯಕ್ಷ ವೀರಣ್ಣ ಗಂಗಾಣಿ ನೀರೂಪಿಸಿ ವಂದಿಸಿದರು.

ದೇವಸ್ಥಾನ ಕಾರ್ಯದರ್ಶಿ ಸದಾಶಿ ವಗ್ಗೆ, ಚನ್ನಬಸಪ್ಪ ದೇವರಮನಿ, ರೇವಗಿ. ಶಿವರಾಜ ಚೌಕ, ರಟ್ಕಲ್ ಸಂಗಣ್ಣ ಕೋಲ್ಡ ಅರಣಕಲ, ಸಿದ್ದಣ್ಣ ಮಾಸ್ಟರ್ ಭೀಮನಳ್ಳಿ ಬೆಡಸೂರು, ಅಪ್ಪಣ್ಣ ದೊಡ್ಡಮನಿ ಗೊಣಗಿ ಮಾವಿನಸೂರ ಮಕರoಬಿ ಕಂದಗೋಳ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಆಗಮಿಸಿದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here