9 ವರ್ಷದ ಮಗುವಿನ ಮೇಲೆ ನಾಯಿ ದಾಳಿ: ಗಂಭೀರ ಗಾಯ

0
24

ಕಲಬುರಗಿ: ಶಹಬಾದ್ ಪಟ್ಟಣದಲ್ಲಿ ಬಾಲಕಿ ಮೇಲೆ ಬೀದಿನಾಯಿ ದಾಳಿ ಮಾಡಿರುವ ಘಟನೆ ವಾರ್ಡ್ 16 ರಲ್ಲಿ ನಡೆದಿದೆ.

ಶರಣನಗರದ ನಿವಾಸಿ ದೀಪಾಲಿ 9 ವರ್ಷದ ಬಾಲಕಿ. ಬೆಳಿಗ್ಗೆ ದೇವಸ್ಥಾನಕ್ಕೆ ಹೋಗುತ್ತಿದ್ದಳು, ಈ ವೇಳೆ ಪಕ್ಕದ ಸಾಕು ಬೀದಿನಾಯಿ ಏಕಾಏಕಿ ದಾಳಿ ಮಾಡಿ ಬಾಲಕಿಯ ಕಣ್ಣು, ಕಿವಿ, ಹಣೆ ಸೇರಿದಂತೆ ವಿವಿಧ ಭಾಗಗಳಲ್ಲಿ ಕಚ್ಚಿ ಗಂಭೀರ ಗಾಯಗೊಳಿಸಿದೆ ಎನ್ನಲಾಗಿದೆ.

Contact Your\'s Advertisement; 9902492681

ಗಂಭೀರ ಸ್ಥಿತಿಯಲ್ಲಿರೋ ಬಾಲಕಿಯನ್ನ ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಕುರಿತು ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here