ವಿದ್ಯಾರ್ಥಿಗಳು ಕೇವಲ ಅಂಕಕ್ಕಾಗಿ ಓದದೆ ಜ್ಞಾನಕ್ಕಾಗಿ ಓದಬೇಕು

0
26
????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಸುರಪುರ: ವಿದ್ಯಾರ್ಥಿಗಳು ಅಂಕಕ್ಕಾಗಿ ಓದದೆ ಜ್ಞಾನಕ್ಕಾಗಿ ಓದಬೇಕು ಎಂದು ಶಾಸಕರು ಹಾಗೂ ಕಾಲೇಜು ಅಭಿವೃಧ್ಧಿ ಸಮಿತಿ ಅಧ್ಯಕ್ಷರಾದ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.

ನಗರದ ಕಮಲ ಕಿಶೋರ ಗೋವರ್ಧನ ದಾಸ್ ಲಡ್ಡಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ವಿಭಾಗ ಸುರಪುರ ಇವರುಗಳ ವತಿಯಿಂದ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ,ಮನುಷ್ಯನಿಗೆ ಜೀವನ ನಡೆಸಲು ಕೇವಲ ಅಂಕಗಳು ಸಾಕಾಗುವುದಿಲ್ಲ ಜ್ಞಾನ ತುಂಬಾ ಅಗತ್ಯವಾಗಿದೆ.ತಾವೆಲ್ಲರು ಉತ್ತಮವಾಗಿ ಅಭ್ಯಾಸ ಮಾಡಿ ನಮ್ಮ ಸುರಪುರ ಹೆಸರನ್ನು ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಕೊಂಡಯ್ಯುವಂತೆ ಆಶಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಪತ್ರಾಂಕಿತ ಉಪ ಖಜಾನೆ ಇಲಾಖೆಯ ಸಹಾಯಕ ಖಜಾನಾಧಿಕಾರಿ ಸಣ್ಣಕೆಪ್ಪ ಕೊಂಡಿಕಾರ ಮಾತನಾಡಿ,ಜಗತ್ತಿನಲ್ಲಿ ಯಾರಾದರು ನಮ್ಮಲ್ಲಿರುವ ಆಸ್ತಿ,ಅಂತಸ್ತು,ಬೇರೆ ವಸ್ತುಗಳನ್ನು ಕದಿಯಬಹುದು ಆದರೆ ಕದಿಯಲಾಗದ ಅಮುನ್ಯವಾದ ಸಂಪತ್ತು ಎಂದರೆ ಅದು ಜ್ಞಾನ.ಅಂತಹ ಜ್ಞಾನವನ್ನು ತಾವೆಲ್ಲರು ಪಡೆದುಕೊಳ್ಳುವಂತೆ ತಿಳಿಸಿದರು.

ಇಂದು ಸಾಮಾಜಿಕ ಜಾಲತಾಣಗಳು ಅನೇಕ ಬಗೆಯಲ್ಲಿ ಉಪಯೋಗವಾಗುತ್ತಿವೆ.ಆದರೆ ಜಾಲತಾಣವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ ಅದರಿಂದ ಉನ್ನತ ಶ್ರೇಣಿಯ ಪರೀಕ್ಷೆಗಳನ್ನು ಪಾಸು ಮಾಡಬಹುದು ಎಂದರು.ವಿದ್ಯಾರ್ಥಿ ಜೀವನ ಎನ್ನುವುದು ತುಂಬಾ ಮುಖ್ಯವಾದದು,ತಾವೆಲ್ಲರು ಜೀವನದ ಮೊದಲ 25 ವರ್ಷ ಕಷ್ಟಪಟ್ಟರೆ ಮುಂದಿನ 75 ವರ್ಷಗಳು ಸುಖ ದಿಂದ ಇರಬಹುದಾಗಿ ಎಂದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲ ಆನಂದಕುಮಾರ ಜೋಷಿ ಮಾತನಾಡಿದರು.ನಂತರ ಕಾಲೇಜಿನಲ್ಲಿ ನಡೆಸಲಾದ ವಿವಿಧ ಕ್ರೀಡೆಗಳಲ್ಲಿ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ವೆಂಕೋಬ ಯಾದವ್,ನಯೋಪ್ರಾ ಮಾಜಿ ಅಧ್ಯಕ್ಷ ರಾಜಾ ವಾಸುದೇವ ನಾಯಕ,ಎಪಿಎಮ್‍ಸಿ ಮಾಜಿ ಸದಸ್ಯ ಮಲ್ಲಣ್ಣ ಸಾಹು ಮುಧೋಳ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ಬಾಚಿಮಟ್ಟಿ,ಕಾಲೇಜಿನ ಉಪನ್ಯಾಸಕರಾದ ಪ್ರೋ.ವಿಶ್ವನಾಥರೆಡ್ಡಿ,ಪ್ರೋ.ವೆಂಕೋಬ ಬಿರಾದಾರ,ಪ್ರೋ.ಬಲಭೀಮ ದೇಸಾಯಿ,ಪ್ರೋ.ಗುರುರಾಜ ನಾಗಲಿಕರ,ಪ್ರೋ.ಹೆಚ್.ಎಮ್ ವಗ್ಗರ,ಪ್ರೋ.ದೇವಿಂದ್ರ ಪಾಟೀಲ್,ಪ್ರೋ.ಶಾಜಿಯಾ ಅಂಜುಮ್ ಶೇಖ್,ಪ್ರೋ.ಪ್ರಮೋದ ಕುಲಕರ್ಣಿ,ಅತಿಥಿ ಉಪನ್ಯಾಸಕ ಪರಮಣ್ಣ ದಿವಾನ ಉಪಸ್ಥಿತರಿದ್ದರು.ಕಾಲೇಜು ಆವರಣಕ್ಕೆ ಶಾಸಕರು ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳು ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು.

ಉಪನ್ಯಾಸಕರಾದ ದೇವು ಹೆಬ್ಬಾಳ ನಿರೂಪಿಸಿದರು,ಡಾ.ಹಣಮಂತ್ರಾಯ ದೊಡ್ಮನಿ ಸ್ವಾಗತಿಸಿದರು,ಪ್ರೋ.ಬಲಭೀಮ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು,ಶಾಂತು ನಾಯಕ ವಂದಿಸಿದರು.ಕಾಲೇಜಿನಲ್ಲ ಅನೇಕ ಜನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here