ಕಲಬುರಗಿ: ನಗರದ ಜಿಲ್ಲಾ ಸರಕಾರಿ ಜಿಮ್ಸ್ ಆಸ್ಪತ್ರೆ ಮಹಿಳಾ ವಾರ್ಡಿನಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ ಅಂಗವಾಗಿ ಜಿಮ್ಸ್ ಆಸ್ಪತ್ರೆ ಹಾಗೂ ಇನ್ನರ್ ವೀಲ್ ಕ್ಲಬ್ ಆಫ್ ನಾರ್ತ್ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮ ಜರುಗಿತು.
ಮಗು ಜನಿಸಿದ ಅರ್ಧ ಗಂಟೆಯಿಂದ ಒಂದು ಗಂಟೆ ಒಳಗಾಗಿ ಕಡ್ಡಾಯವಾಗಿ ತಾಯಿ ಹಾಲು ನೀಡಬೇಕು ಹಾಗೆ ಕನಿಷ್ಠ ಆರು ತಿಂಗಳು ಮಗು ಜನಿಸಿದ ಅರ್ಧ ಗಂಟೆಯಿಂದ ಒಂದು ಗಂಟೆ ಒಳಗಾಗಿ ಕಡ್ಡಾಯವಾಗಿ ತಾಯಿ ಹಾಲು ನೀಡಬೇಕು ಹಾಗೆ ಕನಿಷ್ಠ ಆರು ತಿಂಗಳು ನಿಯಮಿತವಾಗಿ ಕುಡಿಸಬೇಕು ಇದರಲ್ಲಿ ನಿರ್ಲಕ್ಷ ತೋರಬಾರದು ಎಂದು ಸ್ತ್ರೀ ರೋಗ ತಜ್ಞರು ಡಾ.ಪೂಜಾ ಮೀಸೆ ಸಲಹೆ ನೀಡಿದರು.
ತಾಯಿಯ ಹಾಲು ಅಮೃತಕ್ಕೆ ಸಮಾನವಾದದ್ದು ಮಗುವಿನ ಬೆಳವಣಿಗೆ ಅಗತ್ಯ ಇರುವ ಪೌಷ್ಟಿಕತೆಯ ಜತೆಗೆ ರೋಗ ನಿರೋಧಕ ಶಕ್ತಿನ ನೀಡುತ್ತದೆ ಮಗುವಿಗೆ ತಾಯಿಯ ಹಾಲು ನೀಡುವುದರಿಂದ ತಾಯಿ ಮಗುವಿನ ನಡುವೆ ಭಾವನಾತ್ಮಕ ಸಂಬಂಧ ಗಟ್ಟಿಯಾಗುತ್ತದೆ. ಇಂತಹ ತಾಯಂದಿರಿಗೆ ಸ್ತನ ಕ್ಯಾನ್ಸರ್ ಗರ್ಭಕೋಶದ ಕ್ಯಾನ್ಸರ್ ಸೇರಿ ಗಂಭೀರ ಕಾಯಿಲೆಗಳು ಬರುವುದು ಅಪರೂಪ ಹಾಗೆ ಇನ್ನರ್ ವೀಲ್ ಕ್ಲಬ್ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ನಂತರ ಪ್ರಾಸ್ತವಿಕವಾಗಿ ನುಡಿಯನ್ನು ಡಾ. ಸಂಧ್ಯಾ ಮಾತನಾಡುತ್ತ ಮೂಢನಂಬಿಕೆ ಧೋರಣೆ ಬಿಡಿ ಮಗುವಿಗೆ ಹಾಲುಣಿಸುವುದನ್ನು ಹೊಸತಲ್ಲ ಶತಮಾನದಿಂದಲ್ಲು ಇದು ನಡೆದು ಬಂದಿದೆ ಪ್ರಾಣಿಗಳಲ್ಲಿಯೂ ಇದನ್ನು ಕಾಣಬಹುದು. ಆದರೆ ಇತ್ತೀಚೆಗೆ ಆಧುನಿಕತೆಯ ಪ್ರಭಾವ ಹೆಚ್ಚಾಗುತ್ತಿದ್ದಂತೆ ಮಹಿಳೆಯರ ಕಾರ್ಯಕ್ಷೇತ್ರವೂ ಬದಲಾಗುತ್ತಿದ್ದು ತಾಯಿ ಮತ್ತು ಮಗುವಿನ ಸುಮಧುರ ಬಾಂಧವ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಾರ್ಯಕ್ಷೇತ್ರ ಏನೇ ಆದರೂ,ಎಷ್ಷೆ ಕೆಲಸದ ಒತ್ತಡಗಳಿದ್ದರೂ ಮಗುವಿನ ತಾಯಿ ಎಂಬುದನ್ನು ಮಹಿಳೆ ಮರೆಯಬಾರದು. ಸ್ತನ್ಯಪಾನದ ಕುರಿತು ಮೂಢನಂಬಿಕೆ ಮತ್ತು ಪೂರ್ವಾಗ್ರಹ ಪೀಡಿತ ಧೋರಣೆಗಳನ್ನು ಬಿಡಬೇಕು ಎಂದು ಹೇಳಿದರು.
ಸ್ತನ್ಯಪಾನ ಮಹಾತ್ವ ಬಾಂಣoತೀಯರಿಗೆ ಅರಿವು ಮೂಡಿಸ ,ಜಾಗೃತಿ ಕುರಿತ ಪೊಸ್ಟರ್ ಗಳನ್ನು ಬಿಡುಗಡೆಗೊಳಿಸಿ ನಂತರ ಹಾಲು ಬೆಲ್ಲವನ್ನು ತಾಯಂದಿರಿಗೆ , ಇನ್ನರ್ ವೀಲ್ ಕ್ಲಬ್ ಆಫ್ ನಾರ್ತ್ ಕಲಬುರಗಿ ಕ್ಲಬ್ ಅಧ್ಯಕ್ಷರು ಸವಿತಾ ಹುಂಗೋದಿಮಠ , ಕಾರ್ಯದರ್ಶಿ ನಮ್ರತಾ ಪಾಥಾಟೆ , ಬೋರ್ಡ್ ಸದಸ್ಯ ಅನುರಾಧ ಹಾಡಗಲಿಮಠ, ಸದಸ್ಯರಗಳಾದ ಡಾ. ಸಂಧ್ಯಾ ಕಾನೇಕರ್, ಶ್ರೀದೇವಿ. ಅವರು ಹಂಚಿದರು. ಡಾ ಸಂಗಮ್ಮ ವಂದನಾರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಮಗುವಿನ ತಾಯಂದಿರಿಯರು. ಆರೋಗ್ಯ ಇಲಾಖೆ ಸಿಬಂದಿ ಇದ್ದರು.