ಕಲಬುರಗಿ: ಸ್ಲಂ ಜನರ ಸಂಘಟನೆ -ಕರ್ನಾಟಕ ವತಿಯಿಂದ ಬಸವ ಪಂಚಮಿಯನ್ನು ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ಅಲೆಮಾರಿ ಸಮುದಾಯದ ಮಕ್ಕಳಿಗೆ ಹಾಲು ಕೊಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಲಕರಾದ ಸುರೇಶ್ ಹಾದಿಮನಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸ್ಲಂ ಜನರ ಸಂಘಟನೆಯ ಜಿಲ್ಲಾ ಸಂಚಾಲಕ ಅಲ್ಲಮಪ್ರಭು ನಿಂಬರ್ಗಾ, ಶಿವ ಶರಣಪ್ಪ ದೇವನೂರ, ಮಲ್ಲಿಕಾರ್ಜುನ್ ಸಿಂಗೆ, ಬ್ರಹ್ಮಾನಂದ ಮಿಂಚ, ಕರಣ ಬಂದರವಾಡ್, ಶಿವಕುಮಾರ್ ಚಿಂಚೋಳಿ, ಪಂಡಿತ್ ಬೈರಾಮಡಗಿ, ರಾಘವೇಂದ್ರ ಮಿಂಚ ಸೇರಿದಂತೆ ಅಲೆಮಾರಿ ಸಮುದಾಯದ ಮುಖಂಡರು ಮತ್ತು ಮಕ್ಕಳು ಉಪಸ್ಥಿತರಿದ್ದರು.