19 ರಂದು ರಟಕಲ್ ಶ್ರೀ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ: ಪೂರ್ವಿಭಾವಿ ಸಭೆ

0
244

ಕಲಬುರಗಿ: ಕಾಳಗಿ ತಾಲೂಕಿನ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ರೇವಗ್ಗಿ (ರಟಕಲ್) ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷ ಶ್ರಾವಣ ಮಾಸ ನಡುವಿನ ಸೋಮವಾರ (19ರಂದು) ನಡೆಯುವ ಗುಡ್ಡದ ಜಾತ್ರೆ ಪೂರ್ವ ಸಿದ್ಧತಾ ಸಭೆಯು ಸೇಡಂ ಸಹಾಯಕ ಆಯುಕ್ತ ಹಾಗೂ ದೇವಸ್ಥಾನ ಅಧ್ಯಕ್ಷರೂ ಆಗಿರುವ ಪ್ರಭುರೆಡ್ಡಿ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಪ್ರಭುರೆಡ್ಡಿ ಮಾತನಾಡಿ, 19ರಂದು ಶ್ರಾವಣ ಮಾಸದ ನಡುವಿನ ಸೋಮವಾರ ಜಾತ್ರಾ ಮಹೋತ್ಸವ ನಡೆಯಲಿದ್ದು, ಜಗದ್ಗುರು ರೇವಣಸಿದ್ದೇಶ್ವರರ ಬೆಳ್ಳಿ ಪಲ್ಲಕ್ಕಿ ಉತ್ಸವ ನೆರವೇರಲಿದೆ ಎಂದರು.

Contact Your\'s Advertisement; 9902492681

ಶರಣಬಸಪ್ಪ ಮಾಮಶೆಟ್ಟಿ ಮತ್ತು ವೀರಣ್ಣ ಗಂಗಾಣಿ ರಟಕಲ್ ದೇವಸ್ಥಾನಕ್ಕೆ ಬಂದ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಸ್ವಚ್ಛತೆಯಾಗಲಿ ನೀರಾಗಲಿ ಬೀದಿ ದೀಪಗಳಾಗಲಿ ವ್ಯಾಪಾರಿಸ್ಥರ ಅಂಗಡಿಗಳು ಬಗ್ಗೆ ಇನ್ನಿತರ ಅನೇಕ ಕುಂದು ಕೊರತೆ ಬಗ್ಗೆ ಮಾತನಾಡಿದರು.

ಹಾಳಾದ ಸಿಸಿ ಕ್ಯಾಮರಾ ರಿಪೇರಿ ಮಾಡುವುದು. ಜಾತ್ರಾ ಮಹೋತ್ಸವ ವೇಳೆ ಬಿದ್ದ ಕಸವನ್ನು ನಂತರ ಸ್ವಚ್ಛತೆ ಮಾಡಬೇಕು. ದೇವಸ್ಥಾನದಲ್ಲಿ ಹಾಳಾದ ಕೋಣೆಗಳನ್ನು ದುರಸ್ತಿ ಮಾಡಬೇಕು. ಭಾರಂಬಾವಿ ಪಕ್ಕದಲ್ಲಿ ಬಟ್ಟೆ ಬದಲಾಯಿಸಲು ಕೋಣೆ ನಿರ್ಮಿಸಬೇಕು. ವಿವಿಧೆಡೆ ಬೀದಿ ದೀಪ ಹಾಕಬೇಕು. ದೇವಸ್ಥಾನ ಸುತ್ತಲೂ ಕೆಲ ಭಾಗಗಳಲ್ಲಿ ಹೈ ಮಾಸ್ಕ್ ದ್ವೀಪ ಹಾಕಬೇಕು.

ಬೇಕಾದ ಕ್ರಮಗಳನ್ನು ನಮ್ಮ ಇಲಾಖೆ ಅಚ್ಚುಕಟ್ಟಾಗಿ ನಿಭಾಯಿಸುತ್ತದೆ. ತಾವು ತಿಳಿಸಿದ ಹಾಗೆ ಮಧ್ಯ ಮಾರಾಟ, ಜೂಜಾಟ, ಅಕ್ರಮ ಚಟುವಟಿಕೆಗಳಿಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ.

ಮದ್ಯ ಮಾರಾಟ ನಿಷೇಧಕ್ಕೆ ಮನವಿ: ವ್ಯವಸ್ಥಿತ ಜಾತ್ರಾ ಮಹೋತ್ಸವಕ್ಕೆ ಕೆಲವು ಸಲಹೆ ಸೂಚನೆಗಳನ್ನು ನೀಡಿದ ಸಾರ್ವಜನಿಕರು, ಪಲ್ಲಕ್ಕಿ ಉತ್ಸವ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಬೇಕು. ಸ್ವಚ್ಛತೆಗಾಗಿ 50 ಮಹಿಳಾ, 50ಪುರುಷ ಶೌಚಾಲಯ ನಿರ್ಮಾಣ ಮಾಡಬೇಕು.

ಕುಡಿಯುವ ನೀರಿನ ಟ್ಯಾಂಕರ್‌ಗೆ ನಳಗಳ ಸಂಪರ್ಕ ಮಾಡಬೇಕು, ಜಾತ್ರಾ ಮಹೋತ್ಸವದಲ್ಲಿ ಹಾಗೂ ಸುತ್ತಮುತ್ತಲಿನ ಏಳು ಗ್ರಾಮಗಳಲ್ಲಿ ಎಲ್ಲೆಂದರಲ್ಲಿ ಸರಾಯಿ ಮಾರಾಟ ಜೋರು ನಡೆಯುತ್ತದೆ. ಅಂಗಡಿಗಳಲ್ಲಿ ಸಾರಾಯಿ ಮಾರಾಟ ಹೆಚ್ಚಾಗಿದೆ. ಇದರಿಂದ ಕುಟುಂಬಗಳು ಬೀದಿಗೆ ಬರುತ್ತಿವೆ ಇದನ್ನು ತಡೆಯುವಂತೆ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಆಯುಕ್ತರು, ಸೂಕ್ತ ಕ್ರಮಕೈಗೊಳ್ಳಲು, ಪೋಲಿಸ್ ಹಾಗೂ ಅಬಕಾರಿ ಕಾಳಗಿ ತಾಲೂಕಿನ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ರೇವಗ್ಗಿ (ರಟಕಲ್) ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸ ನಡುವಿನ ಸೋಮವಾರ ನಡೆಯುವ ಗುಡ್ಡದ ಜಾತ್ರೆ ಪೂರ್ವ ಸಿದ್ಧತಾ ಸಭೆಯಲ್ಲಿ ಸೇಡಂ ಸಹಾಯಕ ಆಯುಕ್ತ ಹಾಗೂ ದೇವಸ್ಥಾನ ಅಧ್ಯಕ್ಷರೂ ಆಗಿರುವ ಪ್ರಭುರೆಡ್ಡಿ ಮಾತನಾಡಿದರು.

ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಮಾತನಾಡಿದರು. ಸೇಡಂ ಸಹಾಯಕ ಆಯುಕ್ತರ ಕಚೇರಿ ತಹಸೀಲ್ದಾರ್ ನಾಗನಾಥ ತರಗೆ, ಡಿವೈಎಸ್ಪಿ ಶಂಕರಗೌಡ ಪಾಟೀಲ, ಜೆಸ್ಕಾಂ ಎಇಇ ಪ್ರಭು ಮಡ್ಡಿತೊಟ, ಸಂಸ್ಥಾನಿಕರು ಚನ್ನಬಸಪ್ಪ ದೇವರಮನಿ, ಗ್ರೇಡ್-2 ತಹಸೀಲ್ದಾರ ರಾಜೇಶ್ವರಿ, ಪಿಎಸ್‌ಐ ತಿಮ್ಮಯ್ಯ ಬಿ.ಕೆ. ರಟಕಲ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜಗದೀಪ್ ಮಾಳಗಿ, ಆರಣಕಲ್ ಗ್ರಾಪಂ ಅಧ್ಯಕ್ಷೆ ನಾಗವೇಣಿ ರಾಠೋಡ, ಶಿವರಾಜ ಪಾಟೀಲ ಗೊಣಗಿ, ವೀರಣ್ಣ ಗಂಗಾಣಿ, ಶಂಕರ ಚೌಕ, ರೇವಣಸಿದ್ದ ಬಡಾ. ಶರಣು ಪಾಟೀಲ ಮೊತಕಪಳ್ಳಿ, ಗೌರಿಶಂಕರ ಕಿಣ್ಣಿ, ಶ್ರೀ ಶಂಕರ ಹೇರೂರ(ಕೆ), ರೇವಣಸಿದ್ದಪ್ಪ ಕಟ್ಟಿಮನಿ, ಕಂದಾಯ ನೀರಿಕ್ಷಕ ಮಂಜುನಾಥ ಮಹಾರುದ್ರ, ಶರಣಬಸಪ್ಪ ಮಮಶೆಟ್ಟಿ, ರಾಜಶೇಖರ ಗುಡದಾ ದೇವಸ್ಥಾನ ಕಾರ್ಯದರ್ಶಿ ಸದಾಶಿವ ವಗ್ಗೆ ಸೆ ಸೇರಿ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here